ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಫ್ರೆಂಚ್ ಕಾರು ತಯಾರಕರಾದ ರೆನಾಲ್ಟ್(Renault) ಹೊಸ ಆಸ್ಟ್ರಲ್(Austral) ಎಂಬ ಹೆಸರಿನ ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ತಯಾರಿಸಲಾಗಿದೆ. ಇದೀಗ ರೆನಾಲ್ಟ್ ಕಂಪನಿಯು ಈ ಹೊಸ ಆಸ್ಟ್ರಲ್ ಕಾಂಪ್ಯಾಕ್ಟ್ ಎಸ್‍ಯುವಿಯ ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ರೆನಾಲ್ಟ್ ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪ್ಯಾಲೆನ್ಸಿಯಾ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ. ಈ ಹೊಸ ಮಾದರಿಯು ಅರ್ಕಾನಾ ಮತ್ತು ಹೊಸ ಮೆಗಾನೆ ಇ-ಟೆಕ್ ಎಲೆಕ್ಟ್ರಿಕ್ ಮಾದರಿಗಳನ್ನು ಅನುಸರಿಸಿ ಸಿ-ಸೆಗ್ಮೆಂಟ್‌ನಲ್ಲಿ ತನ್ನ ಸ್ಥಾನವನ್ನು ಮತ್ತೆ ಬಲಪಡಿಸುವ ಗುರಿಯನ್ನು ರೆನಾಲ್ಟ್ ಹೊಂದಿದೆ. ರೆನಾಲ್ಟ್ ಆಸ್ಟ್ರಲ್ ಎಸ್‍ಯುವಿ ಮೊದಲಿಗೆ ಯುರೋಪಿಯನ್ ಮಾರುಕಟ್ಟೆಗಳಿಗೆ ಮೀಸಲಾಗಿದೆ. ಆದರೆ ಯಾವ ಸಮದಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂಬುವುದು ಹೇಳಲು ಸಾಧ್ಯವಿಲ್ಲ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ಈ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು. ಪ್ರಸ್ತುತ ರೆನಾಲ್ಟ್ ಕಂಪನಿಯು ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಯಾವುದೇ ಕೊಡುಗೆಯನ್ನು ಹೊಂದಿಲ್ಲ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ರೆನಾಲ್ಟ್ ಬ್ರ್ಯಾಂಡ್‌ನ ಜಾಗತಿಕ ಮಾರ್ಕೆಟಿಂಗ್ ವಿಭಾಗದ ಹುದ್ದೆಯ ಕಾರ್ಯತಂತ್ರದ ಮುಖ್ಯಸ್ಥ ಸಿಲ್ವಿಯಾ ಡಾಸ್ ಸ್ಯಾಂಟೋಸ್ ಮಾತನಾಡಿ, ಆಸ್ಟ್ರಲ್ ಎಂಬ ಹೆಸರು ಪ್ರಚೋದಿಸುತ್ತದೆ ಮತ್ತು ಪರಿಶೋಧನೆಗೆ ಆಹ್ವಾನಿಸುತ್ತದೆ. ಇದು ಎಸ್‍ಯುವಿಗೆ ಸೂಕ್ತವಾದ ಹೆಸರಾಗಿದೆ. ಈ ಪದವು ಪ್ರಪಂಚದಾದ್ಯಂತದ ಜನರು ಸುಲಭವಾಗಿ ಉಚ್ಚರಿಸಬಹುದಾದ ಪದವಾಗಿದೆ ಮತ್ತು ಇದು ಕಾರಿಗೆ ನಿಜವಾದ ಜಾಗತಿಕ ಭಾವನೆಯನ್ನು ನೀಡುವ ಸಾಮರಸ್ಯದ ಧ್ವನಿಯನ್ನು ಹೊಂದಿದೆ ಎಂದು ಹೇಳಿದರು.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಆಸ್ಟ್ರಲ್ ಎಂಬ ಹೆಸರು ಲ್ಯಾಟಿನ್ ಆಸ್ಟ್ರೇಲಿಸ್ ನಿಂದ ಬಂದಿದೆ. ಆಸ್ಟ್ರಲ್ ರೆನಾಲ್ಟ್ ಬ್ರ್ಯಾಂಡ್ ಅಭಿವೃದ್ಧಿಪಡಿಸಿದ ಹೊಸ ಕಾಂಪ್ಯಾಕ್ಟ್ ಎಸ್‍ಯುವಿ ಕುಟುಂಬದ ಭಾಗವಾಗಿದೆ, ಇದು ನವೀನ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಪರಿಸರ-ಚಾಲನಾ ಆನಂದವನ್ನು ನೀಡುತ್ತದೆ. 4.51 ಮೀಟರ್ ಉದ್ದದೊಂದಿಗೆ, ಆಸ್ಟ್ರಲ್ 5 ಜನರಿಗೆ ವಿಶಾಲವಾದ ಮತ್ತು ಆರಾಮದಾಯಕವಾದ ಎಸ್‍ಯುವಿ ಮಾದರಿಯಾಗಿರಲಿದೆ,

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಮುಂಬರುವ ಆಸ್ಟ್ರಲ್ ಎಸ್‌ಯುವಿ ಬಗ್ಗೆ ಎಂಜಿನ್, ವೈಶಿಷ್ಟ್ಯಗಳು ಅಥವಾ ಯಾವುದೇ ಇತರ ಅಂಶಗಳ ಕುರಿತು ರೆನಾಲ್ಟ್ ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ. ವರದಿಗಳ ಪ್ರಕಾರ, ಎಸ್‍ಯುವಿ ಅಲೈಯನ್ಸ್‌ನ CMF ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಸಾಧ್ಯತೆಯಿದೆ,

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಆಸ್ಟ್ರಲ್ ಎಸ್‍ಯುವಿ ಡೈಮ್ಲರ್ ಜೊತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ 1.3-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಎಂಜಿನ್ 140 ಬಿಹೆಚ್‍ಪಿ ಪವರ್ ಉತ್ಪಾದನೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಆಯ್ಕೆಯ ಹೈಬ್ರಿಡ್ ಆವೃತ್ತಿಯೊಂದಿಗೆ ನೀಡಬಹುದು.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಭಾರತೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕಂಪನಿಯು ತನ್ನ ಕ್ವಿಡ್ ಹ್ಯಾಚ್‌ಬ್ಯಾಕ್ ಅನ್ನು ಹಲವು ವರ್ಷಗಳಿಂದ ಮಾರಾಟ ಮಾಡುತ್ತಿದೆ. ರೆನಾಲ್ಟ್ ಕಂಪನಿಯ ಕಾರುಗಳ ಸರಣಿಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಇತ್ತೀಚೆಗೆ ಈ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 4 ಲಕ್ಷ ಯುನಿಟ್‌ಗಳು ಮಾರಾಟವಾಗಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

2015ರಲ್ಲಿ ಬಿಡುಗಡೆಯಾದ ಹ್ಯಾಚ್‌ಬ್ಯಾಕ್ ಆರಂಭದಲ್ಲಿ ಅದರ ಕಾಂಪ್ಯಾಕ್ಟ್ ಶೈಲಿಯ ವಿನ್ಯಾಸ ಮತ್ತು ಕೈಗೆಟುಕುವ ಬೆಲೆಗೆ ಹೆಚ್ಚಿನ ಗ್ರಾಹಕರು ಒಲವು ತೋರಿತು. ಈ ಮಾದರಿಯು ತನ್ನ ಮೊದಲ ಮಿಡ್-ಲೈಫ್ ಅಪ್‌ಡೇಟ್ 2019ರ ಅಕ್ಟೋಬರ್ ತಿಂಗಳಿನಲ್ಲಿ ಪಡೆದುಕೊಂಡಿತು. ನಂತರ ಅದರ ಬಿಎಸ್6 ಆವೃತ್ತಿಯನ್ನು ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ವಾಹನ ತಯಾರಕರು ಕ್ವಿಡ್ ಮಾದರಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಪ್ರಮಾಣಿತ ಫಿಟ್‌ಮೆಂಟ್‌ನಂತೆ ಮಾಡಿದ್ದಾರೆ. ಈ ನವೀಕರಣದೊಂದಿಗೆ, ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ರೆನಾಲ್ಟ್ ಕ್ವಿಡ್ ನಾಲ್ಕು ಟ್ರಿಮ್‌ಗಳಲ್ಲಿ ಹರಡಿರುವ 10 ರೂಪಾಂತರಗಳಲ್ಲಿ ಲಭ್ಯವಿದೆ. ಈ ರೆನಾಲ್ಟ್ ಕ್ವಿಡ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.11 ಲಕ್ಷಗಳಾಗಿದೆ. ರೆನಾಲ್ಟ್ ಕ್ವಿಡ್ ಪ್ರಾರಂಭವಾದಾಗಿನಿಂದಲೂ ಸಣ್ಣ ಕಾರು ಖರೀದಿದಾರರ ಮೆಚ್ಚಿನ ಆಯ್ಕೆಯಲ್ಲಿ ಇದು ಕೂಡ ಒಂದಾಗಿದೆ. ಕ್ವಿಡ್ ಖರೀದಿದಾರರಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣವೆಂದರೆ ಇದರ ಲುಕ್ ಮತ್ತು ಪ್ರಾರಂಭವಾದ ಸಮಯದಲ್ಲಿ ತನ್ನ ವಿಭಾಗದಲ್ಲಿ ಟಚ್‌ಸ್ಕ್ರೀನ್ ನೀಡುವ ಏಕೈಕ ಮಾದರಿಯಾಗಿತ್ತು. ಈ ಕ್ವಿಡ್ ಕಾರಿನ ಮುಂಭಾಗದ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತದಲ್ಲಿ ಜನಪ್ರಿಯವಾಗಲು ಸಹಾಯ ಮಾಡಿತು.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಈ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದ ಗ್ರಿಲ್ ಅನ್ನು ಪರಿಷ್ಕರಿಸಲಾಗಿದೆ ಮತ್ತು ವಿಭಾಗದಲ್ಲಿನ ಇತರ ಅನೇಕ ಪ್ರೀಮಿಯಂ ಕಾರುಗಳಂತೆ. ರೆನಾಲ್ಟ್ ಕ್ವಿಡ್ ಎಲ್ಇಡಿ ಡಿಆರ್ಎಲ್ ಗಳನ್ನು ಹೊಂದಿವೆ. 2021ರ ಕ್ವಿಡ್ ಕಾರಿನಲ್ಲಿ RXE, RXL, RXT ಮತ್ತು Climber ವೆರಿಯೆಂಟ್‌ಗಳನ್ನ ಹೊಂದಿದೆ. ಈ ಹೊಸ ಕಾರು ಬಿಎಸ್-6 ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳೊಂದಿಗೆ ಹೊಸದಾಗಿ ಡ್ಯುಯಲ್ ಟೋನ್ ಬಾಡಿ ಕಲರ್, ಎಲೆಕ್ಟ್ರಿಕ್ ಮೂಲಕ ಅಡ್ಜೆಸ್ಟ್ ಮಾಡಬಹುದಾದ ರಿಯರ್ ವ್ಯೂ ಮಿರರ್ ಸೇರಿದಂತೆ ಸ್ಪೋರ್ಟಿ ವಿನ್ಯಾಸದ ಮಲ್ಟಿ ಸ್ಪೋರ್ಕ್ ಅಲಾಯ್ ವ್ಹೀಲ್ ಒಳಗೊಂಡಿದೆ.

ಹೊಸ Austral ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ Renault

ಹೊಸ ರೆನಾಲ್ಟ್ ಆಸ್ಟ್ರಲ್ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮುಂದಿನ ವರ್ಷದಲ್ಲಿ ಮಾಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಆಸ್ಟ್ರಲ್ ಎಸ್‍ಯುವಿಯು ಮೊದಲು ಯುರೋಪಿಯನ್ ಮಾರುಕಟ್ಟೆಗಯಲ್ಲಿ ಬಿಡುಗಡೆಯಾಗಲಿದೆ, ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಬಿಡುಗಡೆಯಾಗಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
English summary
New renault austral compact suv teaser released expected launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X