ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

Renault India ಕಂಪನಿಯು ತನ್ನ ನವೀಕೃತ ಕ್ವಿಡ್(Kwid) ಹ್ಯಾಚ್‌ಬ್ಯಾಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕ್ವಿಡ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.06 ಲಕ್ಷ ಬೆಲೆ ಹೊಂದಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕ್ವಿಡ್ ಹ್ಯಾಚ್‌ಬ್ಯಾಕ್ ಆವೃತ್ತಿಯು ರೆನಾಲ್ಟ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಇದೀಗ ನವೀಕೃತ ಆವೃತ್ತಿಯು ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ. ಕ್ವಿಡ್ ಫೇಸ್‌ಲಿಫ್ಟ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಕಂಪನಿಯು ಹೊಸ ಕಾರನ್ನು ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ರೆನಾಲ್ಟ್ ಇಂಡಿಯಾ ಕಂಪನಿಯು ನವೀಕೃತ ಮಾದರಿಯನ್ನು ಈ ಹಿಂದಿನ ಬಿಎಸ್-6 ಮಾದರಿಯಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕ್ವಿಡ್ ಮಾದರಿಯು ಪ್ರಮುಖ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

2021ರ ಕ್ವಿಡ್ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ 0.8-ಲೀಟರ್ ಮತ್ತು 1.0-ಲೀಟರ್ ಮಾದರಿಗಳನ್ನು ಒಳಗೊಂಡಿದೆ. ಹೊಸ ಕಾರಿನ ಬೆಲೆ ಆಧರಿಸಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 4.06 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 5.51 ಲಕ್ಷ ಬೆಲೆ ಹೊಂದಿದೆ.

Kwid Price
RXE 0.8L ₹4.06 lakh
RXL 0.8L ₹4.36 lakh
RXT 0.8L ₹4.66 lakh
RXL 1.0L MT ₹4.53 lakh
RXL 1.0L AMT ₹4.93 lakh
RXT (O) 1.0L MT ₹4.90 lakh
Climber (O) 1.0L MT ₹5.11 lakh
RXT (O) 1.0L AMT ₹5.30 lakh
Climber (O) 1.0L AMT ₹5.51 lakh
ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹೊಸ ಕಾರಿನಲ್ಲಿ RXE, RXL, RXT ಮತ್ತು Climber ವೆರಿಯೆಂಟ್‌ಗಳನ್ನ ಹೊಂದಿದ್ದು, ಹೊಸ ಕಾರು ಬಿಎಸ್-6 ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳೊಂದಿಗೆ ಹೊಸದಾಗಿ ಡ್ಯುಯಲ್ ಟೋನ್ ಬಾಡಿ ಕಲರ್, ಎಲೆಕ್ಟ್ರಿಕ್ ಮೂಲಕ ಅಡ್ಜೆಸ್ಟ್ ಮಾಡಬಹುದಾದ ರಿಯರ್ ವ್ಯೂ ಮಿರರ್ ಸೇರಿದಂತೆ ಸ್ಪೋರ್ಟಿ ವಿನ್ಯಾಸದ ಮಲ್ಟಿ ಸ್ಪೋರ್ಕ್ ಅಲಾಯ್ ವ್ಹೀಲ್ ಹೊಂದಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹೊಸ ಆವೃತ್ತಿಯಲ್ಲಿ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಹೈ ಸ್ಪೀಡ್-ಅಲರ್ಟ್ ಸಿಸ್ಟಂ, ಸೀಟ್ ಬೆಲ್ಟ್ ರಿಮೈಂಡರ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ ಮತ್ತು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಒಳಗೊಂಡಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹೈ ಎಂಡ್ ಮಾದರಿಗಳ ಹಿಂಬದಿಯ ಆಸನಗಳಲ್ಲಿ ಆರ್ಮ್‌ರೆಸ್ಟ್, ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳಿದ್ದು, ಅಪ್‌ಡೇಟ್ ಮಾಡಲಾದ ಮಾದರಿಯ ಮುಂಭಾಗದಲ್ಲಿ ಚಾಲಕನ ಬಳಿ ಪೈರೋಟೆಕ್ ಮತ್ತು ಪ್ರಿಟೆನ್ಷನರ್‌ನೊಂದಿಗೆ ಫೀಚರ್ಸ್ ನೀಡಲಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹಾಗೆಯೇ ಹೊಸ ಕಾರಿನ ಎಲೆಕ್ಟ್ರಾನಿಕ್ ಫೀಚರ್ಸ್‌ಗಳು ಸಹ ಗಮನಸೆಳೆಯಲಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲೂಟೂಥ್ ಮೂಲಕ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಪಡೆದುಕೊಳ್ಳಬಹುದು.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ರೆನಾಲ್ಟ್ ಕಂಪನಿಯು ಹೊಸ ಕಾರನ್ನು ಈ ಹಿಂದಿನಂತೆಯೇ ಪ್ರಮುಖ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ 0.8-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹೊಸ ಎಮಿಷನ್ ಜೊತೆ ಉನ್ನತೀಕರಣಗೊಂಡಿರುವ ತ್ರಿ ಸಿಲಿಂಡರ್ 0.8-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

0.8-ಲೀಟರ್ ಪೆಟ್ರೋಲ್ ಮಾದರಿಯು ಮ್ಯಾನುವಲ್ ಆವೃತ್ತಿಯನ್ನು ಮಾತ್ರ ಹೊಂದಿದ್ದು, ಇದು 54 ಬಿಎಚ್‌ಪಿ ಮತ್ತು 72 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ 1.0-ಲೀಟರ್ ಪೆಟ್ರೋಲ್ ಎಂಜಿನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ 68 ಬಿಎಚ್‌ಪಿ ಮತ್ತು 91 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿವೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಹೊಸ ಕಾರು ಬಿಡುಗಡೆಯೊಂದಿಗೆ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಹೊಸ ಕಾರಿನ ವಿತರಣೆ ಆರಂಭಿಸಲಿದ್ದು, ಹೊಸ ಕಾರು ಪ್ರಮುಖ ಎಂಟ್ರಿ ಲೆವಲ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಯು ಮೊದಲ ತಲೆಮಾರಿನಿಂದ ಇಲ್ಲಿಯವರೆಗೆ ಸುಮಾರು 4 ಲಕ್ಷ ಯೂನಿಟ್‌ಗಳು ಮಾರಾಟ ಮಾಡಲಾಗಿದ್ದು, ಭಾರತದಿಂದಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತುಗೊಂಡ ಪ್ರಮಾಣವು ಸುಮಾರು 50 ಸಾವಿರ ಯೂನಿಟ್‌ಗಳಾಗಿದೆ.

ಹೊಸ ಸೌಲಭ್ಯಗಳೊಂದಿಗೆ ಭಾರತದಲ್ಲಿ 2021ರ Renault Kwid ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ

ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿರುವ ಕ್ವಿಡ್ ಕಾರನ್ನು ಇದೀಗ ಹೊಸ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿರುವುದರಿಂದ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲಿದ್ದು, ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New renault kwid launched in india at rs 4 06 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X