ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ರೆನಾಲ್ಟ್ ಕಂಪನಿಯು ಹೊಸ ಟ್ಯಾಲಿಯಂಟ್ ಮಧ್ಯಮ-ಗಾತ್ರದ ಸೆಡಾನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ರೆನಾಲ್ಟ್ ಕಂಪನಿಯು ಹೋಂಡಾ ಸಿಟಿ ಕಾರಿಗೆ ಪೈಪೋಟಿ ನೀಡಲು ಹೊಸ ಟ್ಯಾಲಿಯಂಟ್ ಸೆಡಾನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಯಾವುದೇ ಸ್ಟೈಲಿಂಗ್ ಪ್ಯಾಕೆಜ್ ಇಲ್ಲದೇ ಲೋಗನ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಡೇಸಿಯಾ ಮಾದರಿಗಳ ಮರುಬಳಕೆಯ ಆವೃತ್ತಿಗಳೊಂದಿಗೆ ರೆನಾಲ್ಟ್ ಇದರ ಲಾಭವನ್ನು ಪಡೆದುಕೊಂಡಿದೆ ಮತ್ತು ಈಗ ಮೂರನೇ ತಲೆಮಾರಿನ ಡೇಸಿಯಾ ಲೋಗನ್ ಅನ್ನು ಹಲವು ವಿದೇಶಿ ಮಾರುಕಟ್ಟೆಗಳಿಗೆ ಮರುವಿನ್ಯಾಸಗೊಳಿಸಲಾಗುತ್ತಿದೆ.

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಟರ್ಕಿಯಲ್ಲಿ ರೆನಾಲ್ಟ್ ಲೋಗನ್ ಕಂಪನಿಯೊಂದಿಗೆ ಡೇಸಿಯಾ ಮಾದರಿಯನ್ನು ಆಧರಿಸಿ ‘ಟ್ಯಾಲಿಯಂಟ್' ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಟ್ಯಾಲಿಯಂಟ್ ಸೆಡಾನ್ ಡೇಸಿಯಾ ಮಾದರಿಗಿಂತ ಭಿನ್ನವಾದ ವಿನ್ಯಾಸವನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಹೊಸ ರೆನಾಲ್ಟ್ ಟ್ಯಾಲಿಯಂಟ್ ಕಾರಿನ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಳನ್ನು ಮರುವಿನ್ಯಾಸಗೊಳಿಸಿದ್ದಾರೆ. ಈ ಹೊಸ ಕಾರಿನ ಮುಂಭಾಗದ ಫಾಸಿಕ ರೆನಾಲ್ಟ್ ಕ್ಲಿಯೊ ಮಾದರಿಗೆ ಹೋಲುವಂತೆ ಇದೆ. ಇನ್ನು ಈ ರೆನಾಲ್ಟ್ ಟ್ಯಾಲಿಯಂಟ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಇನ್ನು ಈ ಟ್ಯಾಲಿಯಂಟ್ ಕಾರಿನ ಹಿಂಭಾಗದಲ್ಲಿ, ಸಿ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಬೂಟ್ ಲಿಡ್ಗ್ ವಿಸ್ತರಿಸುತ್ತವೆ. ಇನ್ನು ಹೊಸದಾಗಿ ವಿನ್ಯಾಸಗೊಳಿಸಲಾದ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳ ಸಹ ಹೊಂದಿದೆ ಮತ್ತು ಒಟ್ಟಾರೆಯಾಗಿ ಡೇಸಿಯಾ ಲೋಗನ್ ಗಿಂತ ಸ್ಟೈಲಿಷ್ ಆಗಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಹೊಸ ರೆನಾಲ್ಟ್ ಟ್ಯಾಲಿಯಂಟ್ ಕಾರಿನ ಇಂಟಿರಿಯರ್ ಚಿತ್ರಗಳು ಬಹಿರಂಗವಾಗಿಲ್ಲ. ಇತ್ತೀಚಿನ ಲೋಗನ್‌ಗೆ ಹೋಲಿಸಿದರೆ ಯಾವುದೇ ಪ್ರಮುಖ ವ್ಯತ್ಯಾಸಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ರೆನಾಲ್ಟ್ ಟ್ಯಾಲಿಯಂಟ್ ಟರ್ಕಿಯಲ್ಲಿ ಮಾರಾಟವಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ಅದರ ವ್ಯಾಪ್ತಿಯನ್ನು ವಿಸ್ತರಿಸಬಹುದು.

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಡೇಸಿಯಾ ಮುಂದಿನ ವರ್ಷಕ್ಕೆ ವ್ಯಾಗನ್ಸ್-ಸ್ಪೆಕ್ ಲೋಗನ್‌ ಮಾದರಿಯನ್ನು ಅಭಿವ್ಯದ್ಧಿ ಪಡಿಸುತ್ತಿದೆ. ಅದನ್ನು ಮರುಜೋಡಣೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದುನೋಡಬೇಕಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಇನ್ನು ಪ್ರಮುಖವಾಗಿ ರೆನಾಲ್ಟ್ ಟ್ಯಾಲಿಯಂಟ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಈ ಹೊಸ ಕಾರಿನಲ್ಲಿ 1.5-ಲೀಟರ್ ಡಿಸಿಐ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಬದಲಾಯಿಸಿ, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪ್ರೆಟ್ರೋಲ್ ಎಂಜಿನ್ ಅನ್ನು ನೀಡಬಹುದು.

ಹೋಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ರೆನಾಲ್ಟ್ ಟ್ಯಾಲಿಯಂಟ್

ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಬಹುದು. ಈ ಹೊಸ ರೆನಾಲ್ಟ್ ಟ್ಯಾಲಿಯಂಟ್ ಕಾರು ಶೀಘ್ರದಲ್ಲೇ ಟರ್ಕಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ನಂತರ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗೂ ಟ್ಯಾಲಿಯಂಟ್ ಕಾರು ಲಗ್ಗೆ ಇಡಬಹುದು.

Most Read Articles

Kannada
English summary
Renault Taliant Mid-Size Sedan Unveiled, Honda City Rival. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X