ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಸ್ಕೋಡಾ ಕಂಪನಿಯು ತನ್ನ ಬಹುನೀರಿಕ್ಷಿತ ಕುಶಾಕ್ ಎಸ್‍ಯುವಿಯನ್ನು ಜೂನ್ 28ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಸ್ಕೋಡಾ ಕುಶಾಕ್ ಎಸ್‍ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಸ್ಕೋಡಾ ಕುಶಾಕ್ ಎಸ್‍ಯುವಿ ಖರೀದಿಗೆ ಬುಕ್ಕಿಂಗ್ ಪ್ರಾರಂಭವಾದ ಒಂದೇ ವಾರದಲ್ಲಿ 2,000 ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದಾರೆ ಎಂದು ವರದಿಗಳಾಗಿದೆ. ಇದರಲ್ಲಿ 1.0 ಟಿಎಸ್ಐ ಎಟಿ ಆಂಬಿಷನ್ ರೂಪಾಂತರ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಈ ರೂಪಾಂತರವು ಶೇ.40 ರಷ್ಟು ಬುಕ್ಕಿಂಗ್ ಪಡೆದುಕೊಂಡಿದೆ. ಹೊಸ ಸ್ಕೋಡಾ ಕುಶಾಕ್ ಎಸ್‌ಯುವಿಯ ಆರಂಭಿಕ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.50 ಲಕ್ಷಗಳಾಗಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಸ್ಕೋಡಾ ಕಾರುಗಳ ಬೆಲೆಯು ತಮ್ಮ ಪ್ರತಿಸ್ಪರ್ಧಿಗಳಿಗಿಂತ ಅಧಿಕವಾಗಿರುತ್ತದೆ. ಆದರೆ ಈ ಬಾರಿ ಸ್ಕೋಡಾ ತನ್ನ ಕುಶಾಕ್ ಎಸ್‍ಯುವಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪರಿಚಯಿಸಿದೆ. ಇದರಿಂದ ಈ ಹೊಸ ಕುಶಾಕ್ ಎಸ್‍ಯುವಿಯು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಸ್ಕೋಡಾ ಕುಶಾಕ್ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಎಸ್‍ಯುವಿಯಾಗಿದೆ. ಈ ಎಸ್‍ಯುವಿಯ ಹೊರಭಾಗಾ ವಿನ್ಯಾಸವು ವಿಷನ್ ಇನ್ ಕೆನ್ಸೆಪ್ಟ್ ಅನ್ನು ಆಧರಿಸಿದೆ. ಇದನ್ನು ಕಳೆದ ವರ್ಷದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಪ್ರೀಮಿಯಂ ಮತ್ತು ಕೈಗೆಟುಕುವ ಕಾರು ಬ್ರ್ಯಾಂಡ್ ಆಗಿ ಮಾಡಲು ಕುಶಾಕ್ ಸಹಾಯ ಮಾಡುತ್ತದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಈ ಹೊಸ ಕುಶಾಕ್ ಎಸ್‍ಯುವಿಯು ಸ್ಪ್ಲೀಟ್ ಹೆಡ್‌ಲ್ಯಾಂಪ್‌ಗಳು, ಸ್ಕೋಡಾದ ಸಿಗ್ನೇಚರ್ ಫ್ರಂಟ್ ಗ್ರಿಲ್, ಅಗ್ರೇಸಿವ್ ಫ್ರಂಟ್ ಬಂಪರ್ ಮತ್ತು ಎಲ್-ಆಕಾರದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿವೆ, ಇದು ಸಿಲ್ವರ್ ಫಿನಿಶಿಂಗ್ ಹೊಂದಿರುವ ರೂಫ್ ರೈಲ್ ಗಳನ್ನು ಹೊಂದಿವೆ. ಸುತ್ತಲೂ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್ ಅನ್ನು ಹೊಂದಿದೆ

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಕುಶಾಕ್ ಎಸ್‍ಯುವಿಯ ಇಂಟಿರಿಯರ್ ವಿನ್ಯಾಸವು ಕ್ಲಾಸಿ ಮತ್ತು ಪ್ರೀಮಿಯಂ ಆಗಿ ಕಾಣುತ್ತದೆ. ಡಾರ್ಕ್ಇಂಟಿರಿಯರ್ ಥೀಮ್ ಆಕರ್ಷಕವಾಗಿದೆ. ಈ ಎಸ್‍ಯುವಿಯ ಕ್ಯಾಬಿನ್‌ನಲ್ಲಿ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು ಎರಡು-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ ಮತ್ತು ಮಧ್ಯದ ಕನ್ಸೋಲ್‌ನಲ್ಲಿ ಆಯತಾಕಾರದ ಎಸಿ ವೆಂಟ್ಸ್ ಅನ್ನು ಹೊಂದಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಇಂಟಿರಿಯರ್ ನಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರ್ ಟೆಕ್, ಎಲೆಕ್ಟ್ರಿಕ್ ಚಾಲಿತ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಂತ್ ಕಂಟ್ರೋಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್ ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಹೊಂದಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಇದರೊಂದಿಗೆ ಪವರ್-ಆಪರೇಟೆಡ್ ಟೈಲ್‌ಗೇಟ್ (ಹ್ಯಾಂಡ್ಸ್-ಫ್ರೀ) ನಂತಹ ಸಾಕಷ್ಟು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ ಕೀ ಲೆಸ್ ಎಂಟ್ರಿ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಕೂಲ್ಡ್ ಗ್ಲೋವ್‌ಬಾಕ್ಸ್, ವೆಂಟಿಲೆಟಡ್ ಫ್ರಂಟ್ ಸೀಟ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಕುಶಾಕ್ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 1.0-ಲೀಟರ್ ಟರ್ಬೊ-ಪೆಟ್ರೋಲ್ ಮೋಟರ್ ಎಂಜಿನ್ ಆಗಿದೆ, ಈ ಎಂಜಿನ್ 108 ಬಿಎಚ್‌ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿಗೆ ಜೋಡಿಸಲಾಗಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಇನ್ನು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಎಸ್ಜಿ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಒಂದೇ ವಾರದಲ್ಲಿ 2 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಸ್ಕೋಡಾ ಕುಶಾಕ್

ಈ ಎಸ್‍ಯುವಿಯು ಕ್ಯಾಂಡಿ ವೈಟ್, ಬ್ರಿಲಿಯಂಟ್ ಸಿಲ್ವರ್, ಕಾರ್ಬನ್ ಸ್ಟೀಲ್, ಹನಿ ಆರೆಂಜ್ ಮತ್ತು ಟೊರೆಂಡ್ ರೆಡ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.ಕೊಳ್ಳಬಹುದು, ಈ ಹೊಸ ಕುಶಾಕ್ ಎಸ್‍ಯುವಿಯು 2,651 ಎಂಎಂ ವ್ಹೀಲ್ ಬೇಸ್ ಹೊಂದಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Kushaq Bookings Crosses 2K Mark. Read In Kannaa.
Story first published: Tuesday, July 6, 2021, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X