ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಬಿಡುಗಡೆ ದಿನಾಂಕ ಬಹಿರಂಗ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ಕಂಪನಿಯು ತನ್ನ ನಾಲ್ಕನೇ ತಲೆಮಾರಿನ ಆಕ್ಟೀವಿಯಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮುಂದಿನ ತಿಂಗಳು ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಈ ನಾಲ್ಕನೇ ತಲೆಮಾರಿನ ಸ್ಕೊಡಾ ಆಕ್ಟೀವಿಯಾ ಕಾರು ಭಾರತದಲ್ಲಿ ಜೂನ್ 10 ರಂದು ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ. ಆದರೆ ಕಂಪನಿಯು ಈ ಹೊಸ ಕಾರಿನ ಬಿಡುಗಡೆಯ ದಿನಾಂಕ ಬಹಿರಂಗಪಡಿಸಿಲ್ಲ, ಕರೋನಾ ಅಟ್ಟಹಾಸ ಹೆಚ್ಚಾಗಿರುವುದರಿಂದ ಈ ಸ್ಕೊಡಾ ಆಕ್ಟೀವಿಯಾ ಕಾರಿನ ಬಿಡುಗಡೆಯು ತಡವಾಗಿದೆ. ಸ್ಕೋಡಾ ಕಂಪನಿಯು ಔರಂಗಾಬಾದ್‌ನ ಘಟಕದಲ್ಲಿ ತನ್ನ ಆಕ್ಟೀವಿಯಾ ಕಾರಿನ ಉತ್ಪಾದನೆಯನ್ನು ಈಗಗಾಲೇ ಪ್ರಾರಂಭಿಸಿದೆ.

ಸ್ಕೋಡಾ ಡೀಲರುಗಳು ಹೊಸ ಆಕ್ಟೀವಿಯಾ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಸ್ಪೈ ಚಿತ್ರಗಳು ಬಹಿರಂಗವಾಗಿವೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಕೋಡಾ ಆಕ್ಟೀವಿಯಾದ ಹಿಂದಿನ ತಲೆಮಾರಿನ ಕಾರು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟವನ್ನು ಕಂಡಿತು. ಇದರಿಂದ ಸ್ಕೋಡಾ ಕಂಪನಿಯು ತನ್ನ ಹೊಸ ಆಕ್ಟೀವಿಯಾ ಕಾರನ್ನು ಹೊಸ ಬದಲಾವಣೆಗಳೊಂದಿಗೆ ಭಾರತದಲ್ಲಿ ಮತ್ತೊಮ್ಮೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಹಿಂದಿನ ಮಾದರಿಗೆ ಹೋಲಿಸಿದರೆ ನಯವಾದ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕಾರಿನ ಗ್ರೀಲ್ ಅಗಲವಾಗಿ ಮತ್ತು ಅಗ್ರೇಸಿವ್ ಆಗಿದೆ. ಮುಂಭಾಗದ ಬಂಪರ್ ವಿನ್ಯಾಸ ಕೂಡ ಬದಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇನ್ನು ಹೊಸ ಕಾರಿನ ಮುಂಭಾಗದಲ್ಲಿ ವಿಶಾಲವಾದ ಏರ್ ಡ್ಯಾಮ್ ಜೊತೆಗೆ ಸಮತಲವಾದ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಎರಡೂ ಬದಿಗಳಲ್ಲಿ ಇರಿಸಲಾಗಿದ್ದು, ಎರಡು ಯುನಿಟ್ ಗಳನ್ನು ಕನೆಕ್ಟ್ ಮಾಡುವ ತೆಳುವಾದ ಕ್ರೋಮ್ ಸ್ಟ್ರಿಪ್ ಇದೆ. ಇದು ಕಂಪನಿಯ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ ಲೈಟ್ ಅನ್ನು ಕೂಡ ನೀಡಲಾಗಿದೆ.

ಹಿಂಭಾಗದಲ್ಲಿ ಅಗ್ರೇಸಿವ್ ಆಗಿ ಕಾಣುವ ಬೂಟ್ ಲಿಡ್ ಅನ್ನು ಹೊಂದಿದೆ. ಇನ್ನು ಬೂಟ್ ಲಿಡ್ ಉದ್ದಕ್ಕೆ ಸ್ಕೋಡಾ ಎಂಬ ಬ್ಯಾಡ್ಜ್ ಅನ್ನು ಅಳವಡಿಸಿದ್ದಾರೆ. ಈ ಸೆಡಾನ್ ಹೊಸ ಅಲಾಯ್ ವೀಲ್ ವಿನ್ಯಾಸವನ್ನ ಕೂಡ ಪಡೆಯುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

2021ರ ಸ್ಕೋಡಾ ಆಕ್ಟೀವಿಯಾ ಕಾರಿನ ಒಳಭಾಗದಲ್ಲಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಒಳಭಾಗದಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಬ್ರ್ಯಾಂಡ್‌ನ ಕಾಕ್‌ಪಿಟ್ ವಿನ್ಯಾಸವನ್ನು ಒಳಗೊಂಡ 10.25-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಗಾಗಿ ಸೆಡಾನ್ ಮತ್ತೊಂದು 10.25-ಇಂಚಿನ ಡಿಸ್ ಪ್ಲೇಯನ್ನು ಕೂಡ ಒಳಗೊಂಡಿರುತ್ತದೆ.

ಈ ಹೊಸ ಆಕ್ಟೀವಿಯಾ ಕಾರಿನಲ್ಲಿ ವಿಡಬ್ಲ್ಯೂ ಗ್ರೂಪ್‌ನ 2.0 ಎಲ್ ಟಿಎಸ್‌ಐ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತದೆ. ಈ ಎಂಜಿನ್ 190 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇದರೊಂದಿಗೆ 1.5-ಲೀಟರ್ ಟಿಎಸ್ಐ, ನಾಲ್ಕು ಸಿಲಿಂಡರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ..

ಯುರೋ ಎನ್‍ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇನ್ನು ಈ ಹೊಸ ಸ್ಕೋಡಾ ಆಕ್ಟೀವಿಯಾ ಉತ್ತಮ ಕಾರ್ಯಕ್ಷಮತೆಯನ್ನು ಸೆಡಾನ್ ಆಗಿರಲಿದೆ. ಇದರಿಂದ ಹೊಸ ಆಕ್ಟೀವಿಯಾ ಪರ್ಫಾಮೆನ್ಸ್ ಕಾರು ಪ್ರಿಯರನ್ನು ಕೂಡ ಸೆಳೆಯಬಹುದು. ಅಲ್ಲದೇ ಉತ್ತಮ ಬಿಲ್ಡ್ ಕ್ವಾಲಿಟಿ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಒಳಗೊಂಡಿರುವುದು ಕೂಡ ಈ ಕಾರಿಗೆ ಪ್ಲಸ್ ಪಾಯಿಂಟ್ ಆಗಿದೆ.


Click it and Unblock the Notifications








