ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಸ್ಕೋಡಾ ಆಟೋ ತನ್ನ ಹೊಸ ಆಕ್ಟೀವಿಯಾ ಸ್ಪೋರ್ಟ್‌ಲೈನ್ ವೆರಿಯೆಂಟ್ ಅನ್ನು ಅನಾವರಣಗೊಳಿಸಿದೆ. 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ವೆರಿಯೆಂಟ್ ಅನ್ನು ಅದರ ಸರಣಿಯಲ್ಲಿ 'ಸ್ಟೈಲ್' ಮತ್ತು ರೇಂಜ್-ಟಾಪಿಂಗ್ ಆರ್‍ಎಸ್ ಮಾದರಿಯ ನಡುವೆ ಇರಿಸಲಾಗುತ್ತದೆ.

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಆಕ್ಟೀವಿಯಾದ ಹೊಸ ಸ್ಪೋರ್ಟ್‌ಲೈನ್ ವೆರಿಯೆಂಟ್ ಸಾಮಾನ್ಯ ಮಾದರಿಯಿಂದ ಹಲವಾರು ವಿನ್ಯಾಸ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಮುಂಭಾಗದ ಗ್ರಿಲ್‌ಗೆ ಬ್ಲ್ಯಾಕ್-ಔಟ್ ಮತ್ತು 17 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಟೈಲ್‌ಗೇಟ್‌ನಲ್ಲಿರುವ 'ಸ್ಕೋಡಾ' ಬ್ಯಾಡ್ಜಿಂಗ್ ಇವುಗಳಲ್ಲಿ ಸೇರಿವೆ. ಇನ್ನು 18 ಅಥವಾ 19-ಇಂಚಿನ ಅಲಾಯ್ ವ್ಹೀಲ್ ಗಳ ಆಯ್ಕೆಗಳನ್ನು ಸಹ ನೀಡಲಿದೆ.

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಈ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಎಲ್‌ಇಡಿ ಲೈಟಿಂಗ್ ಮತ್ತು ಬ್ಲ್ಯಾಕ್ ಔಟ್ ಒಆರ್‌ವಿಎಂಗಳನ್ನು ಸಹ ಒಳಗೊಂಡಿವೆ. ಸ್ಪೋರ್ಟ್‌ಲೈನ್ ವೆರಿಯೆಂಟ್ ಒಳಭಾಗದಲ್ಲಿ ಪಿಯಾನೋ ಬ್ಲ್ಯಾಕ್ ಸ್ತ್ರೀಪ್ ಅನ್ನು ಹೊಂದಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಇನ್ನು ಈ ವೆರಿಯೆಂಟ್ ಥರ್ಮೋಫ್ಲಕ್ಸ್ ಅಪ್ಹೋಲ್ಸ್ಟರಿಯಲ್ಲಿ ಸುತ್ತುವ ಇಂಟಿಗ್ರೇಟೆಡ್ ಹೆಡ್‌ರೆಸ್ಟ್‌ಗಳೊಂದಿಗೆ ಸ್ಪೋರ್ಟ್ಸ್ ಸೀಟ್ ಗಳೊಂದಿಗೆ ಬರಲಿದೆ. ಸ್ಟೈಲ್ ವೆರಿಯೆಂಟ್ ನಲ್ಲಿರುವ ಹಲವಾರು ಫೀಚರ್ ಗಳನ್ನು ಇದರಲ್ಲಿ ನೀಡಬಹುದು.

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರನ್ನು ಹಲವಾರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಿದೆ. ಇವುಗಳಲ್ಲಿ ಪೆಟ್ರೋಲ್, ಡೀಸೆಲ್, ಪ್ಲಗ್-ಇನ್ ಹೈಬ್ರಿಡ್ ಮತ್ತು ಸಿಎನ್‌ಜಿ ಪವರ್‌ಟ್ರೇನ್‌ಗಳು ಸೇರಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಸ್ಕೋಡಾ ಫ್ರಂಟ್-ವ್ಹೀಲ್ ಮತ್ತು ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಆಯ್ಕೆಯನ್ನು ಸಹ ನೀಡಲಿದೆ. ಆಕ್ಟೀವಿಯಾ ಸ್ಪೋರ್ಟ್‌ಲೈನ್ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ.

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತದೆ. ಇದರಲ್ಲಿ 1.5-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಕೂಡ ಸೇರಿದೆ. ಈ ಎಂಜಿನ್ 148 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಇದರೊಂದಿಗೆ 2.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಕೂಡ ಹೊಂದಿರುತ್ತದೆ. ಈ ಎಂಜಿನ್ 189 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 1.5-ಲೀಟರ್ ಲೀಟರ್ ಆಯ್ಕೆಯ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುತ್ತದೆ.

ಅನಾವರಣವಾಯ್ತು 2021ರ ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಕಾರು

ಪೆಟ್ರೋಲ್ ಎಂಜಿನ್ ಗಳೊಂದಿಗೆ 7-ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಸ್ಕೋಡಾ ಆಕ್ಟೀವಿಯಾ ಸ್ಪೋರ್ಟ್‌ಲೈನ್ ಪ್ಲಗ್-ಇನ್ ಹೈಬ್ರಿಡ್ ಮಾದರಿಯು ಒಟ್ಟು 202 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ಎನ್‌ಜಿ ಟ್ರಿಮ್ 128 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ.

Article Published On: Saturday, April 10, 2021, 14:08 [IST]
English summary
2021 Skoda Octavia Sportline Revealed. Read In Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+