ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ಸ್ಲಾವಿಯಾ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ(Skoda Slavia) ಸೆಡಾನ್ ಮುಂದಿನ ತಿಂಗಳು ಅನಾವರಣವಾಗಲಿದೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಭಾರತದಲ್ಲಿ ಸ್ಕೋಡಾ ಸ್ಲಾವಿಯಾ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲು ಸಿದ್ಧವಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ, ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕುಶಾಕ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಇದೇ ಪ್ಲಾಟ್‌ಫಾರ್ಮ್ ಆಧಾರವಾಗಿದೆ. ಸ್ಕೋಡಾ ಕಂಪನಿಯು ತನ್ನ ಭಾರತೀಯ ವೆಬ್‌ಸೈಟ್‌ನಲ್ಲಿ ಸ್ಲಾವಿಯಾ ಸೆಡಾನ್ ಕಾರಿನ ಟೀಸರ್ ಅಧಿಕೃತವಾಗಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಈ ಪ್ಲಾಟ್‌ಫಾರ್ಮ್ ವಿವಿಧ ಬಾಡಿಯ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ. ಇನ್ನು ಮುಂಬರುವ ಫೋಕ್ಸ್‌ವ್ಯಾಗನ್ ಮಿಡ್ ಸೈಜ್ ಸೆಡಾನ್, ವರ್ಚಸ್ ಎಂದು ಕರೆಯಲ್ಪಡುತ್ತದೆ, ಈ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿದೆ,

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಸ್ಲಾವಿಯಾ ಈ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಸೆಡಾನ್ ಆಗಿರುತ್ತದೆ. ಸ್ಕೋಡಾ ಆಟೋ ಇಂಡಿಯಾ ಹೊಸ ಸ್ಲಾವಿಯಾದ ತಾಂತ್ರಿಕ ವಿಶೇಷಣಗಳು ಮತ್ತು ಎಂಜಿನ್ ವಿವರಗಳನ್ನು ಸಹ ಬಿಡುಗಡೆ ಮಾಡಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಸೆಡಾನ್ ಆಯಾಮಗಳ ಬಗ್ಗೆ ಹೇಳುವುದಾದರೆ, ಇದು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಸ್ಕೋಡಾ ಸ್ಲಾವಿಯಾ ಕಾರು 2,651 ಎಂಎಂ ವ್ಹೀಲ್‌ಬೇಸ್‌ ಅನ್ನು ಒಳಗೊಂಡಿದೆ.

Dimensions Skoda Slavia
Length 4,541 mm
Width 1,752 mm
Height 1,487 mm
Wheelbase 2,651 mm
ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಹೋಂಡಾ ಸಿಟಿ ಸೆಡಾನ್ ಹೊಸ ಸ್ಲಾವಿಯಾಗಿಂತಲೂ ಉದ್ದವಾಗಿದೆ ಮತ್ತು ಎತ್ತರವಾಗಿದೆ, ಆದರೆ ಸ್ಕೋಡಾ ಸ್ಲಾವಿಯಾ ಕಾರು ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆರ್ನಾ ಮತ್ತು ಮಾರುತಿ ಸುಜುಕಿ ಸಿಯಾಜ್ ಎರಡಕ್ಕಿಂತಲೂ ದೊಡ್ಡದಾಗಿದೆ. ಇನ್ನು ಸ್ಲಾವಿಯಾ ತನ್ನ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಅತಿ ಉದ್ದದ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಹೊಸ ಸ್ಕೋಡಾ ಸ್ಲಾವಿಯಾ ಕಾರಿನ ಎಂಜಿನ್ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ ಕಾರು ಎಂಜಿನ್ ಅನ್ನು ಸ್ಕೋಡಾ ಕುಶಾಕ್‌ನೊಂದಿಗೆ ಹಂಚಿಕೊಳ್ಳುತ್ತದೆ. ಇದರರ್ಥ, ಸ್ಲಾವಿಯಾ ಅದೇ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ TSI ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಮೋಟಾರ್‌ಗಳಾಗಿವೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಇದರಲ್ಲಿ 1.0-ಲೀಟರ್ TSI ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ನೀಡಲಾಗುತ್ತದೆ.

Skoda Slavia 1.0-litre TSI 3-cylinder 1.5-litre TSI 4-cylinder
Displacement 999 cc 1495 cc
Max Power 113 bhp 148 bhp
Max Torque 175 Nm 250 Nm
Transmission 6-Speed MT / 6-Speed AT 6-Speed MT / 7-Speed DSG
ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಇನ್ನು ದೊಡ್ಡದಾದ 1.5-ಲೀಟರ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಅಲ್ಲದೆ, ಕುಶಾಕ್‌ನಲ್ಲಿರುವಂತೆ, 1.5-ಲೀಟರ್ ಎಂಜಿನ್ ಹೊಂದಿರುವ ಸ್ಲಾವಿಯಾ ಸಕ್ರಿಯ ಸಿಲಿಂಡರ್ ತಂತ್ರಜ್ಞಾನದೊಂದಿಗೆ ಬರುತ್ತದೆ (ACT) ಇದು ಎಂಜಿನ್ ವೇಗದಲ್ಲಿದ್ದಾಗ ಎರಡು ಸಿಲಿಂಡರ್‌ಗಳನ್ನು ಆಟೋಮ್ಯಾಟಿಕ್ ಆಗಿ ಸ್ಥಗಿತಗೊಳಿಸುತ್ತದೆ. ಹೀಗಾಗಿ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಬಹುನಿರೀಕ್ಷಿತ ಸ್ಲಾವಿಯಾ ಸೆಡಾನ್ ನಾಚ್ ಬ್ಯಾಕ್ ತರಹದ ಸ್ಟೈಲಿಂಗ್ ಅನ್ನು ಹೊಂದಿರುತ್ತದೆ. ಇದು ಕ್ರೋಮ್ ಸರೌಂಡ್‌ನೊಂದಿಗೆ ಸಿಗ್ನೇಚರ್ ಬಟರ್‌ಫ್ಲೈ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಚೂಪಾದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ವಿಭಿನ್ನ ಕ್ಯಾರೆಕ್ಟರ್ ಲೈನ್‌ಗಳು, ಸ್ಲೋಪಿಂಗ್ ರೂಫ್‌ಲೈನ್, ಎಲ್‌ಇಡಿ ಟೈಲ್-ಲೈಟ್ಸ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಕೂಡ ಪಡೆಯಲಿದೆ, ಈ ಸ್ಕೋಡಾ ಸ್ಲಾವಿಯಾ ಕಾರು ಫಾಕ್ಟರಿ ಫಿಟಡ್ ಎಲೆಕ್ಟ್ರಿಕ್ ಸನ್ ರೂಫ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಮತ್ತು ಆಟೋಮ್ಯಾಟಿಕ್ ವೈಪರ್ ಗಳು ಒಳಗೊಂಡಿರುತ್ತದೆ, ಇದರೊಂದಿಗೆ ಹಲವು ಹೊಸ ತಂತ್ರಜ್ಙಾನಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಇದು ಕುಶಾಕ್ ಮಿಡ್ ಸೈಜ್ ಎಸ್‌ಯುವಿಯೊಂದಿಗೆ ಒಳಭಾಗದ ಮಾದರಿಯಂತೇ ಇರುವ ಸಾಧ್ಯತೆಗಳಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಬೆಂಬಲದೊಂದಿಗೆ ದೊಡ್ಡ 10.1 ಇಂಚಿನ 'ಪ್ಲೇ' ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಸೆಡಾನ್ ಟಚ್ ಎಸಿ ಕಂಟ್ರೋಲ್ ಗಳು, 'ಮೈ ಸ್ಕೋಡಾ' ಕನೆಕ್ಟಿವಿಟಿ ಕಾರ್ ಟೆಕ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಸೀಟ್‌ಗಳು, ಲೆಥೆರೆಟ್ ಅಪ್‌ಹೋಲ್ಸ್ಟರಿ, ಆರು ಸ್ಪೀಕರ್ ಆಡಿಯೋ ಸಿಸ್ಟಂ ಮತ್ತು ಇತ್ಯಾದಿಗಳನ್ನು ಒಳಗೊಂಡಿರುತ್ತದೆ,

ಬಿಡುಗಡೆಯಾಗಲಿರುವ Skoda Slavia ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಸ್ಕೋಡಾ ಸ್ಲಾವಿಯಾ 6 ಏರ್‌ಬ್ಯಾಗ್‌ಗಳನ್ನು ಸಹ ಪಡೆಯುತ್ತದೆ, ಇದು ಟಾಪ್-ಎಂಡ್ ರೂಪಾಂತರಗಳಿಗೆ ಸೀಮಿತವಾಗಿರಬಹುದು. ಗ್ಲೋಬಲ್ ಎನ್‌ಸಿಎಪಿ ಮಾನದಂಡಗಳಿಗಿಂತ ಹೆಚ್ಚು ಕಠಿಣ ಪರಿಸ್ಥಿತಿಗಳಲ್ಲಿ ಕಂಪನಿಯು ಸೆಡಾನ್ ಅನ್ನು ಅದರಕ್ರ್ಯಾಶ್‌ವರ್ಥಿನೆಸ್‌ಗಾಗಿ ಆಂತರಿಕವಾಗಿ ಪರೀಕ್ಷಿಸಿದೆ ಎಂದು ಕಂಪನಿಯು ಹೇಳಿದೆ. ಕಾರು ತಯಾರಕರು ಪಾದಚಾರಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಕೋಡಾ ಸ್ಲಾವಿಯಾ ಸುರಕ್ಷಿತ ಸೆಡಾನ್ ಗಳಲ್ಲಿ ಒಂದಾಗಿರಲಿದೆ.

Article Published On: Wednesday, October 27, 2021, 19:23 [IST]
English summary
New skoda slavia compact sedan dimension and engine details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+