ಭಾರತದಲ್ಲಿ ಬಿಡುಗಡೆಯಾಗಲಿರುವ ಸುಜುಕಿ ಜಿಮ್ನಿ 5-ಡೋರ್ ಎಸ್‍ಯುವಿಯ ಮಾಹಿತಿ ಬಹಿರಂಗ
ದೇಶದ ಅತಿ ದೊದ್ದ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಈ ಜಿಮ್ನಿ ಎಸ್‍ಯುವಿಯನ್ನು ಮಾರುತಿ ಸುಜುಕಿ ಉತ್ಪಾದನಾ ಘಟಕದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುವುಕ್ಕೆ ಇತ್ತೀಚೆಗೆ ಪ್ರಾರಂಭಿಸಲಾಗಿದೆ.

5-ಡೋರ್ ಸುಜುಕಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯ ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ಮಾಹಿತಿಗಳ ಪ್ರಕಾರ, ಈ ಜಿಮ್ನಿ ಎಸ್‌ಯುವಿಯು ಒಟ್ಟಾರೆ 3,850 ಎಂಎಂ ಉದ್ದ, 1,645 ಎಂಎಂ ಅಗಲ ಮತ್ತು 1,730 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಎಸ್‍ಯುವಿ 2,550 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಸಾಮಾನ್ಯ 3-ಡೋರಿನ ರೂಪಾಂತರಕ್ಕೆ ಹೋಲಿಸಿದರೆ, ಒಟ್ಟಾರೆ ಉದ್ದವು 300 ಎಂಎಂ ಮತ್ತು ವ್ಹೀಲ್‌ಬೇಸ್ ಉದ್ದವು 300 ಎಂಎಂ ನಷ್ಟು ಹೆಚ್ಚಿದೆ.

ಈ ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, 5-ಡೋರ್ ಸುಜುಕಿ ಜಿಮ್ನಿ ಎಸ್‍ಯುವಿಯಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಕೆ-ಸೀರಿಸ್ ಇನ್-ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದ್ದು, ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಆಯ್ಕೆಯನ್ನು ನೀಡಲಾಗಿದೆ.

ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗಕ್ಕೆ ಸೇರಬಹುದು.

5-ಡೋರ್ ಜಿಮ್ನಿ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಿರುತ್ತದೆ, ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ಮತ್ತು ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸದ್ಯ ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದೇ ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗಿರುತ್ತದೆ.

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಸುಜುಕಿ ಜಿಮ್ನಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯು 2018ದಿಂದ ಮಾರಾಟವಾಗುತ್ತಿದೆ.

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದರು. ಇದು ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಜಿಮ್ನಿ ಎಸ್‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍ಯುವಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications