ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಸ್ವೀಡಿಷ್ ಕಾರು ತಯಾರಕ ಕಂಪನಿಯಾದ ವೊಲ್ವೊ ತನ್ನ ಎಕ್ಸ್‌ಸಿ60 ಎಸ್‌ಯುವಿಯ ಫೇಸ್‌ಲಿಫ್ಟ್ ವರ್ಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದೀಗ ವೊಲ್ವೊ ಕಂಪನಿಯು ಈ ಹೊಸ ಎಕ್ಸ್‌ಸಿ60 ಎಸ್‍ಯುವಿಯ ಟೀಸರ್ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಹೊಸ ವೊಲ್ವೊ ಎಕ್ಸ್‌ಸಿ60 ಎಸ್‍ಯುವಿಯು ಗಾತ್ರದಲ್ಲಿ ದೊಡ್ಡದಾಗಿರುತ್ತದೆ, ಉತ್ತಮ ಇಂಧನ ದಕ್ಷತೆಯೊಂದಿಗೆ ಸುಗಮ ಚಾಲನಾ ಅನುಭವವನ್ನು ನೀಡುತ್ತದೆ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ. ವೊಲ್ವೊ ಇತ್ತೀಚೆಗೆ ಎಕ್ಸ್‌ಸಿ60 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಕೊರಿಯಾದಲ್ಲಿ ಅನಾವರಣಗೊಳಿಸಿತು. ಇದು ಹೊಸ ಸ್ಮಾರ್ಟ್ ಕಾರ್ ಸಿಸ್ಟಂ ಅನ್ನು ಹೊಂದಿದೆ. ವೊಲ್ವೊ ಗೂಗಲ್ ನೊಂದಿಗೆ ಒಪ್ಪಂದ ಮಾಡಿಕೊಂಡ ಆಂಡ್ರಾಯ್ಡ್ ಚಾಲಿತ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಂತರ್ನಿರ್ಮಿತ ಗೂಗಲ್ ಆಪ್ ಮತ್ತು ಸೇವೆಗಳೊಂದಿಗೆ ಸಂಯೋಜಿಸಿದ ಮೊದಲ ಕಾರ್ ತಯಾರಕರಾಗಿದ್ದಾರೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ನ್ಯೂ ಜನರೇಷನ್ ವೊಲ್ವೊ ಎಕ್ಸ್‌ಸಿ60 ಆರ್ಟಿಫಿಷಿಯಲ್ ಇಂಟಿಲಿಜೆಂತ್ ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುವ ಸಾಧ್ಯತೆಯಿದೆ, ಇದು ಗ್ರಾಹಕರು ತಮ್ಮ ವಾಹನಗಳನ್ನು ನ್ಯಾವಿಗೇಷನ್, ಮ್ಯೂಸಿಕ್ ಸ್ಟ್ರೀಮಿಂಗ್ ಮತ್ತು ಇತರ ವೈಶಿಷ್ಟ್ಯಗಳಿಗಾಗಿ ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ವೊಲ್ವೊ ಪ್ರಕಾರ, ಸಿಸ್ಟಮ್ ತಾಪಮಾನವನ್ನು ನಿಯಂತ್ರಿಸಬಹುದು, ಟೆಸ್ಟ್ ಮೇಸೆಜ್ ಕಳುಹಿಸಬಹುದು, ನಿರ್ದೇಶನಗಳನ್ನು ನ್ಯಾವಿಗೇಟ್ ಮಾಡಬಹುದು ಮತ್ತು ವಾಯ್ಸ್ ಕಾಮೆಂಡ್ ಮೂಲಕ ಮ್ಯೂಸಿಕ್ ಹಾಕಬಹುದು. ಮುಂದಿನ ವರ್ಷದ ವೇಳೆಗೆ ತನ್ನ ಇತರ ಮಾದರಿಗಳಲ್ಲಿಯೂ ಈ ಸಿಸ್ಟಂ ಅನ್ನು ಸಂಯೋಜಿಸುವುದಾಗಿ ವೊಲ್ವೊ ಹೇಳಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಹೊಸ ವೊಲ್ವೊ ಎಕ್ಸ್‌ಸಿ60 ಎಸ್‍ಯುವಿಯು ADAS ಸಿಸ್ಟಂ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ನೊಂದಿಗೆ ಸಜ್ಜುಗೊಳಿಸುವ ಸಾಧ್ಯತೆಯಿದೆ.ಇದು ವಾಹನ ಪತ್ತೆ, ಆಟೋಮ್ಯಾಟಿಕ್ ಬ್ರೇಕಿಂಗ್ ಮತ್ತು ಪೈಲಟ್ ಅಸಿಸ್ಟ್ ನಂತಹ ಡ್ರವಿಂಗ್ ಅಸಿಸ್ಟ್ ಸಿಸ್ಟಂ ಅನ್ನು ಒದಗಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಇದು ಕಳೆದ ನಾಲ್ಕು ವರ್ಷಗಳಲ್ಲಿ ವೊಲ್ವೊ ಎಕ್ಸ್‌ಸಿ60 ಮಾದರಿಯ ಮೊದಲ ಫೇಸ್ ಲಿಫ್ಟ್ ಆಗಿರುತ್ತದೆ. ಈ ಹೊಸ ವೊಲ್ವೊ ಎಕ್ಸ್‌ಸಿ60 ಎಸ್‍ಯುವಿಯ ಮುಂಭಾಗದ ಗ್ರಿಲ್, ಹೊಸ ಬಂಪರ್ ವಿನ್ಯಾಸ, 3ಡಿ ಐರಾನ್ ಮಾರ್ಕ್, ಪೂರ್ಣ ಎಲ್‌ಇಡಿ ಟೈಲ್ ಲ್ಯಾಂಪ್ ಮತ್ತು ಸುಧಾರಿತ ಡ್ರೈವಿಂಗ್-ಅಸಿಸ್ಟ್ ಸಿಸ್ಟಂ ಅನ್ನು ಪಡೆಯುವ ಸಾಧ್ಯತೆಯಿದೆ. ಇನ್ನು ಇದರ ವ್ಹೀಲ್ ಗಳು ಕೂಡ ಹೊಸ ವಿನ್ಯಾಸಗಳನ್ನು ಪಡೆಯುವ ಸಾಧ್ಯತೆಯಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ವೊಲ್ವೊ ಕಂಪನಿಯು ಭಾರತದಲ್ಲಿ ತನ್ನ ಹೊಚ್ಚ ಹೊಸ ಎಕ್ಸ್‌ಸಿ40 ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ. ಆದರೆ ಕರೋನಾ ಆತಂಕದಿಂದ ಮುಂದೂಡಲಾಗಿದೆ. ವೊಲ್ವೊ ಕಂಪನಿಯು ಕೂಡಾ ಈಗಾಗಲೇ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, 2022ರಿಂದ ಇನ್ನುಳಿದ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಹೈಬ್ರಿಡ್ ಎಂಜಿನ್ ವಾಹನ ಉತ್ಪಾದನೆಯಲ್ಲಿ ಈಗಾಗಲೇ ಮುಂಚೂಣಿ ಹೊಂದಿರುವ ವೊಲ್ವೊ ಕಂಪನಿಯು 2023ರ ವೇಳೆಗೆ ಒಟ್ಟು 6 ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರಾಟಮಾಡುವ ಗುರಿಹೊಂದಿದ್ದು, ಇದೇ ವರ್ಷದ ಮಧ್ಯಂತರದಲ್ಲಿ ಭಾರತದಲ್ಲಿ ಮೊದಲ ಇವಿ ಕಾರು ಮಾದರಿಯಾಗಿ ಎಕ್ಸ್‌ಸಿ40 ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆಗಡೆಗೊಳಿಸಲಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಎಕ್ಸ್‌ಸಿ40 ರಿಚಾರ್ಜ್ ಕಾರು ಮಾದರಿಯನ್ನು ಬೆಲ್ಜಿಯಂನಲ್ಲಿರುವ ಘೆಂಟ್‌ ಕಾರು ಉತ್ಪಾದನಾ ಘಟಕದಲ್ಲಿ ನಿರ್ಮಾಣವಾಗುತ್ತಿದ್ದು, ಇದೇ ಘಟಕದಿಂದಲೇ ವೊಲ್ವೊ ಕಂಪನಿಯು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ರಫ್ತು ಕೈಗೊಳ್ಳಲಿದೆ. ಈ ಹೊಸ ಕಾರಿನಲ್ಲಿ ಕಂಪನಿಯು 78kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ ಸೌಲಭ್ಯ ಹೊಂದಿರುವ ಹೊಸ ಕಾರು 408 ಬಿಎಚ್‌ಪಿ ಪವರ್ಮತ್ತು 660 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಎಲೆಕ್ಟ್ರಿಕ್ ಕಾರು ಮಾದರಿಯಲ್ಲೇ ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮೈಲೇಜ್ ಪ್ರೇರಣೆ ಪಡೆದುಕೊಂಡಿರುವ ಹೊಸ ಕಾರು ಪ್ರತಿ ಚಾರ್ಜ್‌ಗೆ ಉತ್ತಮ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ವೊಲ್ವೊ ಕಂಪನಿಯು 2021ರ ಎಸ್60 ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ವೊಲ್ವೊ ಎಸ್60 ಒಳಭಾಗದ ಬಗ್ಗೆ ಹೇಳುವುದಾದರೆ, ಗ್ರಾಹಕರ ನಿರೀಕ್ಷೆ ತಕ್ಕ ಪ್ರೀಮಿಯಂ ಕ್ಯಾಬಿನ್ ಅನ್ನು ಒಳಗೊಂಡಿದೆ. ಲೆದರ್ ಸುತ್ತಿದ ಸ್ಟೀಯರಿಂಗ್ ವ್ಹೀಲ್, ಸೀಟುಗಳು, ಡೋರ್ ಪ್ಯಾನೆಲ್ ಗಳಲ್ಲಿಯು ಲೆದರ್ ಅಂಶಗಳನ್ನು ಕಾಣಬಹುದು.ಇನ್ನು ಮಧ್ಯಭಾಗದಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಕ್ಲೈಮೇಂಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಇತರ ಸ್ಟ್ಯಾಂಡರ್ಡ್ ಫೀಚರ್ ಗಳನ್ನು ಒಳಗೊಂಡಿವೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಈ ಹೊಸ ವೊಲ್ವೊ ಎಸ್60 ಕಾರಿನಲ್ಲಿ ಅದೇ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 300 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ Volvo XC60 ಎಸ್‍ಯುವಿ

ಇನ್ನು ಹೊಸ ವೊಲ್ವೊ ಎಕ್ಸ್‌ಸಿ60 ಎಸ್‍ಯುವಿಯು ಐದು ಟ್ರಿಮ್ ಆಯ್ಕೆಗಳಲ್ಲಿ ನೀಡುವ ಸಾಧ್ಯತೆಯಿದೆ. ಇವುಗಳು ಮೂರು ಪವರ್‌ಟ್ರೇನ್‌ಗಳ ಸಂಯೋಜನೆಯನ್ನು ಪಡೆಯುವ ಸಾಧ್ಯತೆಯಿದೆ, ಇದರಲ್ಲಿ ಎರಡು ಮೈಲ್ಡ್ ಹೈಬ್ರಿಡ್ ಮತ್ತು ಒಂದು ಪ್ಲಗ್-ಇನ್ ಹೈಬ್ರಿಡ್ ರೂಪಾಂತರವಿದೆ.

Most Read Articles

Kannada
Read more on ವೊಲ್ವೊ volvo
English summary
New volvo xc60 will launch soon in india with mild hybrid tech details
Story first published: Monday, October 4, 2021, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X