ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಫ್ರೆಂಚ್ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಜನಪ್ರಿಯ ಡಸ್ಟರ್ ಎಸ್‍ಯುವಿಯ ನ್ಯೂ ಜನರೇಷನ್ ಮಾದರಿಯನ್ನು ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿದ್ದಾರೆ. ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿ ಪ್ರಮುಖ ಬದಲಾವಣೆಗಳನ್ನು ಪಡೆದುಕೊಳ್ಳಬಹುದು.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಈ ನ್ಯೂ ಜನರೇಷನ್ ಡಸ್ಟರ್ ಬಿಡುಗಡೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ ಈ ಮಾದರಿಯು 2022 ಅಥವಾ 2023ರಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ನ್ಯೂ ಜನರೇಷನ್ ಡಸ್ಟರ್ ಸಿಎಮ್‌ಎಫ್-ಎ ವಿನ್ಯಾಸ ಶೈಲಿಯನ್ನು ಹೊಂದಿರುತ್ತದೆ. ಡೇಸಿಯಾ ಬಿಗ್‌ಸ್ಟರ್ ಕಾನ್ಸೆಪ್ಟ್ ಅನ್ನು ಆಧರಿಸಿ ನ್ಯೂ ಜನರೇಷನ್ ಡಸ್ಟರ್ ಅನ್ನು ಅಭಿವೃದ್ಧಿ ಪಡಿಸಬಹುದು ಎಂದು ಹೇಳಲಾಗುತ್ತಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಹೊಸ ರೆನಾಲ್ಟ್ ಡಸ್ಟರ್ ಗ್ರೂಪ್‌ನ ಹೊಸ ಕಾರ್ಯತಂತ್ರದ ಒಂದು ಭಾಗವಾಗಲಿದ್ದು, ಇದರ ಅಡಿಯಲ್ಲಿ ಡೇಸಿಯಾ ಬ್ರ್ಯಾಂಡ್ ಗ್ರೂಪ್ ಗಾಗಿ ಜಾಗತಿಕ ಬಿ ಮತ್ತು ಸಿ ವಿಭಾಗದ ವಾಹನವನ್ನು ಅಭಿವೃದ್ಧಿಪಡಿಸುತ್ತದೆ. ಇದು ರೆನಾಲ್ಟ್, ಡೇಸಿಯಾ ಮತ್ತು ಲಾಡಾದ ಮಾದರಿಗಳನ್ನು ಒಳಗೊಂಡಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಫ್ರೆಂಚ್ ಕಾರ್ ತಯಾರಕರಾದ ರೆನಾಲ್ಟ್ 2025ರ ವೇಳೆಗೆ 14 ಹೊಸ ಮಾದರಿಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಇದಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿಕೆಯನ್ನು ಮಾಡಲಿದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಈ ಯೋಜನೆಯು ಸಿ ಮತ್ತು ಡಿ ವಿಭಾಗದಲ್ಲಿ 7 ವಾಹನಗಳು ಮತ್ತು 7 ಎಲೆಕ್ಟ್ರಿಕ್ ಕಾರುಗಳನ್ನು ಒಳಗೊಂಡಿರುತ್ತದೆ. ಈ ಹೊಸ ಮಾದರಿಗಳು 2025ರ ವೇಳೆಗೆ ರೆನಾಲ್ಟ್ ಮಾರಾಟದ ಶೇ.45 ನಷ್ಟು ಕೊಡುಗೆ ನೀಡುವ ಸಾಧ್ಯತೆಯಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಹೊಸ ಪ್ಲಾಟ್‌ಫಾರ್ಮ್ ಜೊತೆಗೆ ಡಸ್ಟರ್ ಅದರ ಕೆಲವು ವಿನ್ಯಾಸ ಬಿಟ್‌ಗಳನ್ನು ಡೇಸಿಯಾ ಬಿಗ್‌ಸ್ಟರ್ ಕಾನ್ಸೆಪ್ಟ್ ಮಾದರಿಯೊಂದಿಗೆ ಹಂಚಿಕೊಳ್ಳಬಹುದು. ಎರಡನೆಯದು ಅನನ್ಯವಾಗಿ ವಿನ್ಯಾಸಗೊಳಿಸಲಾದ ವೈ-ಆಕಾರದ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಲೈಟಿಂಗ್ ಸಿಸ್ಟಂ ಪಡೆಯುತ್ತದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇನ್ನು ಫ್ಲಾಟ್ ರೂಫ್ ಲೈನ್, ಪ್ರಮುಖ ವೀಲ್ ಆರ್ಚರ್ ಮತ್ತು ಮಸ್ಕಲರ್ ಹಾಂಚ್‌ಗಳನ್ನು ಹೊಂದಿದೆ. ಇನ್ನು ನ್ಯೂ ಜನರೇಷನ್ ಡಸ್ಟರ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಹೊಸ ಡಸ್ಟರ್ 5 ಮತ್ತು 7 ಸೀಟುಗಳ ವಿನ್ಯಾಸಗಳೊಂದಿಗೆ ಲಭ್ಯವಾಗಬಹುದು. ಇದರಲ್ಲಿ 5-ಸೀಟರ್ ಮಾದರಿಯು ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು 7-ಸೀಟರ್ ಮಾದರಿಯು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇನ್ನು ರೆನಾಲ್ಟ್ ಕಂಪನಿಯು ಹೊಸ ನವೀಕರಣಗಳೊಂದಿಗೆ ಟ್ರೈಬರ್ ಟರ್ಬೊ ಮಾದರಿಯನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಆದರೆ ನ್ಯೂ ಜನರೇಷನ್ ಡಸ್ಟರ್ ಡಸ್ಟರ್ ಎಸ್‍ಯುವಿಯ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಮುಖ ಬದಲಾವಣೆಗಳನ್ನು ನಡೆಸಿ ನ್ಯೂ ಜನರೇಷನ್ ಡಸ್ಟರ್ ಅನ್ನು ಬಿಡುಗಡೆಗೊಳಿಸಬಹುದು.

Most Read Articles

Kannada
English summary
New-Gen Renault Duster – New Interesting Details Emerge. Read In Kananda.
Story first published: Monday, February 22, 2021, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X