Just In
- 11 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿಯಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಲಭ್ಯವಿರುವ ಕೊಡುಗೆಗಳಿವು
2021ರ ಫೆಬ್ರವರಿ ತಿಂಗಳಿನಲ್ಲಿ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಹೊಸ ಗ್ರಾಹಕರನ್ನು ಸೆಳೆಯಲು ತನ್ನ ಕಾರುಗಳ ಮೇಲೆ ಹಲವಾರು ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುತ್ತಿದೆ.

ಕಳೆದ ತಿಂಗಳಷ್ಟೇ ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿತ್ತು. ದೆಹಲಿಯಲ್ಲಿರುವ ಮಾರುತಿ ಸುಜುಕಿ ಕಂಪನಿ ಮಾರಾಟಗಾರರ ಮೂಲಗಳ ಪ್ರಕಾರ ಹೊಸ ಕೊಡುಗೆ ಹಾಗೂ ನಗದು ರಿಯಾಯಿತಿಗಳನ್ನು ನೀಡುವ ಮೂಲಕ ಕಂಪನಿಯು ತನ್ನ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತಿದೆ. ಮಾರುತಿ ಸುಜುಕಿಯ ಅರೆನಾ ಪ್ಲಾಟ್‌ಫಾರಂ ಅಡಿಯಲ್ಲಿರುವ ರಿಯಾಯಿತಿ ಹಾಗೂ ಕೊಡುಗೆಗಳ ಬಗ್ಗೆ ನೋಡೋಣ.

ತನ್ನ ಎಂಟ್ರಿ ಲೆವೆಲ್ ಆಲ್ಟೊ ಕಾರಿನ ಮೇಲೆ ಮಾರುತಿ ಸುಜುಕಿ ಕಂಪನಿಯು ರೂ.20,000ಗಳವರೆಗೆ ನಗದು ರಿಯಾಯಿತಿ ಹಾಗೂ ರೂ.15,000ಗಳ ವಿನಿಮಯ ಬೋನಸ್ ನೀಡುತ್ತಿದೆ. ಇನ್ನು ಎಸ್ ಪ್ರೆಸ್ಸೊ ಕಾರಿನ ಮೇಲೆ ಕಂಪನಿಯು ರೂ.25 ಸಾವಿರಗಳ ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ನೀಡುತ್ತಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಿನಿ ವ್ಯಾನ್ ಮಾರುತಿ ಇಕೊ ಕಾರಿನ ಮೇಲೆ ರೂ.20,000 ನಗದು ರಿಯಾಯಿತಿ ಹಾಗೂ ವಿನಿಮಯ ಬೋನಸ್ ನೀಡಲಾಗುತ್ತದೆ. ಕಂಪನಿಯ ಜನಪ್ರಿಯ ವ್ಯಾಗನ್-ಆರ್ ಕಾರಿನ ಪೆಟ್ರೋಲ್ ಮಾದರಿಯ ಮೇಲೆ ರೂ.8,000 ನಗದು ರಿಯಾಯಿತಿ ನೀಡಿದರೆ, ಸಿಎನ್‌ಜಿ ಮಾದರಿಯ ಮೇಲೆ ರೂ.13,000 ರಿಯಾಯಿತಿ ನೀಡಲಾಗುತ್ತದೆ.

ಇದರ ಜೊತೆಗೆ ಈ ಕಾರಿನ ಎಲ್ಲಾ ಮಾದರಿಗಳ ಮೇಲೆ ರೂ.15 ಸಾವಿರಗಳ ವಿನಿಮಯ ಬೋನಸ್ ಸಹ ನೀಡಲಾಗುತ್ತದೆ. ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.20,000 ನಗದು ರಿಯಾಯಿತಿ ನೀಡಿದರೆ ಸ್ವಿಫ್ಟ್ ಕಾರಿನ ಮೇಲೆ ರೂ.10,000 ರಿಯಾಯಿತಿ ನೀಡುತ್ತಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಎರಡೂ ಕಾರುಗಳ ಮೇಲೆ ರೂ.20,000ಗಳ ವಿನಿಮಯ ಬೋನಸ್ ಸಹ ನೀಡಲಾಗುತ್ತದೆ. ಡಿಜೈರ್ ಕಾರಿನ ಮೇಲೆ ಕಂಪನಿಯು ರೂ.8 ಸಾವಿರಗಳ ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ನೀಡುತ್ತದೆ.

ಪ್ರಿ-ಫೇಸ್‌ಲಿಫ್ಟ್ ಡಿಜೈರ್ ಕಾರಿನ ಮೇಲೆ ರೂ.25 ಸಾವಿರಗಳ ನಗದು ರಿಯಾಯಿತಿ ನೀಡಲಾಗುತ್ತದೆ. ಇನ್ನು ಬ್ರೆಝಾ ಕಾಂಪ್ಯಾಕ್ಟ್ ಎಸ್‌ಯುವಿಯ ಮೇಲೆ ರೂ.20,000ಗಳ ವಿನಿಮಯ ಬೋನಸ್ ಹಾಗೂ ರೂ.10,000ಗಳ ನಗದು ರಿಯಾಯಿತಿ ನೀಡಲಾಗುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎರ್ಟಿಗಾ ಎಂಪಿವಿಯ ಮೇಲೆ ಯಾವುದೇ ರೀತಿಯ ನಗದು ರಿಯಾಯಿತಿ ಅಥವಾ ವಿನಿಮಯ ಬೋನಸ್ ನೀಡುತ್ತಿಲ್ಲ. ಇದರ ಜೊತೆಗೆ ಮಾರುತಿ ಸುಜುಕಿ ಕಂಪನಿಯು ಮೇಲೆ ತಿಳಿಸಿದ ಎಲ್ಲಾ ಪ್ರಯಾಣಿಕ ವಾಹನಗಳ ಮೇಲೆ ರೂ.4,000ಗಳ ಕಾರ್ಪೊರೇಟ್ ರಿಯಾಯಿತಿ ನೀಡುತ್ತದೆ.

ಇನ್ನು ಕಂಪನಿಯ ಕಮರ್ಷಿಯಲ್ ಪ್ಯಾಸೆಂಜರ್ ವಾಹನಗಳ ಬಗ್ಗೆ ಹೇಳುವುದಾದರೆ ಟೂರ್ ವಿ ಹಾಗೂ ಟೂರ್ ಹೆಚ್ 2 ವಾಹನಗಳ ಮೇಲೆ ರೂ.20,000 ನಗದು ರಿಯಾಯಿತಿ ಹಾಗೂ ವಿನಿಮಯ ಬೋನಸ್ ನೀಡಲಾಗುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇನ್ನು ಟೂರ್ ಎಸ್ ಕಾರಿನ ಮೇಲೆ ರೂ.10,000ಗಳ ರಿಯಾಯಿತಿ ಹಾಗೂ ರೂ.25 ಸಾವಿರಗಳ ವಿನಿಮಯ ಬೋನಸ್ ನೀಡಲಾಗುತ್ತದೆ. ಮಾರುತಿ ಟೂರ್ ಎಂ ಕಾರಿನ ಮೇಲೆ ರೂ.20,000 ನಗದು ರಿಯಾಯಿತಿ ಇದ್ದು, ಯಾವುದೇ ವಿನಿಮಯ ಬೋನಸ್ ನೀಡುತ್ತಿಲ್ಲ. ಆದರೆ ರೂ.20,000 ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ.