ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ಎಲೆಕ್ಟ್ರಿಕ್ ಬಸ್ ತಯಾರಕ ಕಂಪನಿಯಾದ ಒಲೆಕ್ಟ್ರಾ ಗ್ರೀನ್ ಟೆಕ್ ಹಾಗೂ ಅದರ ಅಂಗಸಂಸ್ಥೆ ಈವ್ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ 100 ಎಲೆಕ್ಟ್ರಿಕ್ ಬಸ್ಸುಗಳ ಪೂರೈಕೆಗಾಗಿ ಕಡಿಮೆ ಬೆಲೆಗೆ ಬಿಡ್ ಮಾಡಲಾಗಿದೆ.

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ಈವ್ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಒಪ್ಪಂದವು ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಡಿ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಬಸ್ಸುಗಳನ್ನು ಪೂರೈಸಲಿದೆ ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಸೋಮವಾರ ತಿಳಿಸಿದೆ.

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

100 ಬಸ್‌ಗಳ ಪೂರೈಕೆಗಾಗಿ ಕನಿಷ್ಠ ರೂ.250 ಕೋಟಿ ಬಿಡ್ ಮಾಡಲಾಗಿದೆ ಎಂದು ಗ್ರೀನ್ ಟೆಕ್ ಕಂಪನಿ ತಿಳಿಸಿದೆ. ಮುಂದಿನ 10 ತಿಂಗಳಲ್ಲಿ ಕಂಪನಿಯು 100 ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ಒಲೆಕ್ಟ್ರಾ ಗ್ರೀನ್ ಟೆಕ್ ಹಾಗೂ ಈವ್ ಟ್ರಾನ್ಸ್ ಕ್ರಮವಾಗಿ 2021ರ ಏಪ್ರಿಲ್ ತಿಂಗಳಿನಲ್ಲಿ 50 ಹಾಗೂ 2020ರ ಡಿಸೆಂಬರ್ ತಿಂಗಳಿನಲ್ಲಿ 353 ಇಂಟರ್ ಸಿಟಿ ಎಲೆಕ್ಟ್ರಿಕ್ ಬಸ್‌ಗಳಿಗೆ ಕಡಿಮೆ ಬಿಡ್ ಮಾಡಿವೆ ಎಂದು ಹೇಳಲಾಗಿದೆ.

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

100 ಎಲೆಕ್ಟ್ರಿಕ್ ಬಸ್‌ಗಳ ಟೆಂಡರ್ ಒಟ್ಟು ವೆಚ್ಚದ ಒಪ್ಪಂದ (ಜಿಸಿಸಿ) ಅಥವಾ ಒಪೆಕ್ಸ್ ಮಾದರಿಯ ಆಧಾರದ ಮೇಲೆ 12 ವರ್ಷಗಳ ಕಾಲ ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಗಾಗಿ ಒಪ್ಪಂದ ಇರಲಿದೆ ಎಂದು ಕಂಪನಿ ತಿಳಿಸಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ಈವ್ ಟ್ರಾನ್ಸ್, ಒಲೆಕ್ಟ್ರಾ ಗ್ರೀನ್ ಟೆಕ್'ನಿಂದ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಿ, ಅವುಗಳನ್ನು 10 ತಿಂಗಳ ಅವಧಿಯಲ್ಲಿ ಪೂರೈಸಲಿದೆ. ಆಯಾ ರಾಜ್ಯಗಳಲ್ಲಿ ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೇಶಾದ್ಯಂತ ಹಲವು ರಾಜ್ಯ ಸಾರಿಗೆ ಸಂಸ್ಥೆಗಳು ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ಆದ್ಯತೆ ನೀಡುತ್ತಿವೆ.

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ಬೆಸ-ಸಮ ನಿಯಮವನ್ನು ಜಾರಿಗೆ ತರಲಾಗುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ಈ ಪರಿಸ್ಥಿತಿಯನ್ನು ಹೋಗಲಾಡಿಸಲು ದೆಹಲಿ ಸರ್ಕಾರವು ದೆಹಲಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಬಳಕೆಗೆ ಆದ್ಯತೆ ನೀಡುತ್ತಿದೆ. ಇದರ ಅಡಿಯಲ್ಲಿ ದೆಹಲಿ ಸರ್ಕಾರವುಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲಿದೆ.

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ಪೂರೈಸಲಿದೆ ಒಲೆಕ್ಟ್ರಾ ಗ್ರೀನ್ ಟೆಕ್

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ಕೇಜ್ರಿವಾಲ್ ಸರ್ಕಾರವು ಸಬ್ಸಿಡಿ ನೀಡುತ್ತಿದೆ. ಇದೇ ವೇಳೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವವರಿಗೆ ಫೇಮ್ -2 ಯೋಜನೆಯಡಿ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

Most Read Articles

Kannada
English summary
Olectra Greentech to deliver 100 electric buses at lowest cost. Read in Kannada.
Story first published: Wednesday, May 26, 2021, 18:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X