ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

Omega Seiki ಮೊಬಿಲಿಟಿ ಕಂಪನಿಯು ಭಾರತದಲ್ಲಿ ಅತಿ ವೇಗವಾಗಿ ಚಾರ್ಜ್ ಆಗುವ ಚಾರ್ಜಿಂಗ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ. Rage Plus Rapid ಎಲೆಕ್ಟ್ರಿಕ್ ತ್ರಿ ಚಕ್ರ ವಾಹನವನ್ನು ಬ್ಯಾಟರಿ ಟೆಕ್ ಸ್ಟಾರ್ಟಪ್ ಕಂಪನಿಯಾದ Log9 ಮೆಟೀರಿಯಲ್ಸ್ ಸಹಭಾಗಿತ್ವದಲ್ಲಿ ಬಿಡುಗಡೆಗೊಳಿಸಲಾಗಿದೆ. ಕಂಪನಿಯು Rage Plus Rapid EV ಯನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಿದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಈ ಮಾದರಿಗಳ ಬುಕ್ಕಿಂಗ್ ಗಳನ್ನು ಆರಂಭಿಸಲಾಗಿದೆ ಎಂದು ಕಂಪನಿ ತಿಳಿಸಿದೆ. Rage Plus Rapid EV ಓಪನ್ ಕ್ಯಾರಿಯರ್ ಹಾಫ್ ಟ್ರೇ ವಾಹನದ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 3.59 ಲಕ್ಷಗಳಾದರೆ, Rage Plus Rapid EV ವಾಹನದ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 3.9 ಲಕ್ಷಗಳಾಗಿದೆ. ಇದರ ಜೊತೆಗೆ ಜೊತೆಗೆ 140 ಕ್ಯೂಬಿಕ್ ಅಡಿ ಟಾಪ್ ಬಾಡಿ ಕಂಟೈನರ್ ಅನ್ನು ಸಹ ಖರೀದಿಸಬಹುದು.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ರೂ. 10,000 ಮುಂಗಡ ಹಣ ಪಾವತಿಸಿ ಈ ವಾಹನಗಳನ್ನು ಬುಕ್ಕಿಂಗ್ ಮಾಡಬಹುದು. ಕಂಪನಿಯು ಮೊದಲ ಕೆಲವು ಬುಕ್ಕಿಂಗ್‌ಗಳಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಈ ಎಲೆಕ್ಟ್ರಿಕ್ ತ್ರಿ ಚಕ್ರ ಕಾರ್ಗೋ ಮೇಲೆ ರೂ. 1 ಲಕ್ಷಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ಕೊಡುಗೆ ಮೊದಲು ಬುಕ್ ಮಾಡುವ 1,000 ಯುನಿಟ್‌ಗಳಿಗೆ ಮಾತ್ರ ಅನ್ವಯವಾಗಲಿದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಈ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನದ ಪ್ರೀ ಬುಕ್ಕಿಂಗ್ ಗಳನ್ನು ಕೊಡುಗೆಯನ್ನು ಪಡೆಯಲು ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಆದ rappidev.live ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ವೆಬ್ ಸೈಟ್'ಗೆ ಭೇಟಿ ನೀಡಿ ಸೂಚನೆಗಳನ್ನು ಪಾಲಿಸಿದ ನಂತರ Omega Seiki / Log9 ತಂಡದ ಪ್ರತಿನಿಧಿಗಳು ಉಳಿದ ಪಾವತಿ ಪ್ರಕ್ರಿಯೆ ಹಾಗೂ ಇನ್ನಿತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಗ್ರಾಹಕರನ್ನು ಸಂಪರ್ಕಿಸುತ್ತಾರೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಗ್ರಾಹಕರು ಬುಕ್ಕಿಂಗ್ ಮಾಡಿದ ದಿನದಿಂದ 4 ರಿಂದ 6 ವಾರಗಳಲ್ಲಿ ವಾಹನವನ್ನು ಅವರಿಗೆ ತಲುಪಿಸಲಾಗುತ್ತದೆ. Rage Plus Rapid EV ಯ ಎರಡೂ ಮಾದರಿಗಳು ರಾಪಿಡ್ಎಕ್ಸ್ 6,000 ವೇಗದ ಚಾರ್ಜಿಂಗ್ ಬ್ಯಾಟರಿಗಳನ್ನು ಹೊಂದಿದ್ದು, ಇವು ಲಾಗ್ 9 ವಸ್ತುಗಳೊಂದಿಗೆ ನವೀಕರಿಸಿದ ಅತ್ಯಾಧುನಿಕ ಇನ್‌ಸ್ಟಾಚಾರ್ಜ್ ತಂತ್ರಜ್ಞಾನವನ್ನು ಆಧರಿಸಿವೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಈ ಬ್ಯಾಟರಿಗಳ ಸಹಾಯದಿಂದ ವಾಹನಗಳನ್ನು 35 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿ ಕೊಂಡಿದೆ. ಈಗ ಭಾರತದಲ್ಲಿ ಹಲವು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಲಭ್ಯವಿದ್ದರೂ, ಈ ವೇಗದ ತಂತ್ರಜ್ಞಾನವು ಮೊದಲನೆಯದು ಎಂದು ಕಂಪನಿ ಹೇಳಿ ಕೊಂಡಿದೆ. ಈ ಬ್ಯಾಟರಿಗಳನ್ನು - 30 C ಹಾಗೂ + 60 C ನಡುವಿನ ಕಠಿಣ ಭಾರತೀಯ ಹವಾಮಾನದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಕಂಪನಿಯು ಈ ವಾಹನಗಳ ಮೇಲೆ 40,000 ಚಾರ್ಜ್ - ಡಿಸ್ಚಾರ್ಜ್ ಹಾಗೂ 10 ವರ್ಷಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಸುಮಾರು 90 ಕಿ.ಮೀಗಳಿಗಿಂತಲೂ ಹೆಚ್ಚು ದೂರ ಚಲಿಸಬಹುದು ಎಂದು ವಾಹನ ತಯಾರಕ ಕಂಪನಿ ಹೇಳಿಕೊಂಡಿದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ Rage Plus Rapid Electric ವಾಹನದ ಮೂರು ಚಕ್ರಗಳು Log9 ನ InstaCharge ತಂತ್ರಜ್ಞಾನದಿಂದ ಚಾಲಿತವಾಗುತ್ತವೆ. ಕಂಪನಿಯು ಈ ವಾಹನವನ್ನು ಖರೀದಿಸಿದ 5 ವರ್ಷಗಳ ಒಳಗೆ ರೂ. 1 ಲಕ್ಷಗಳವರೆಗೆ ಬೈ ಬ್ಯಾಕ್ ಗ್ಯಾರಂಟಿ ನೀಡುತ್ತದೆ. ಬೈಬ್ಯಾಕ್ ಗ್ಯಾರಂಟಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿ ನೀಡಲಾಗುತ್ತಿದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಈ ಮೂಲಕ ಈ ಉತ್ಪನ್ನಗಳ ಮರು ಮಾರಾಟ ಮೌಲ್ಯವನ್ನು ತಿಳಿಸುವ ಪ್ರಯತ್ನವಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ರೇಜ್ ಪ್ಲಸ್ ರಾಪಿಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನದ ಮೇಲೆ 5 ವರ್ಷಗಳ ವಾಹನ ವಾರಂಟಿ ಹಾಗೂ 6 ವರ್ಷಗಳ ಬ್ಯಾಟರಿ ವಾರಂಟಿಯನ್ನು ನೀಡುತ್ತದೆ. Log9 ಇನ್‌ಸ್ಟಾಚಾರ್ಜ್ ಆನ್ ಡಿಮ್ಯಾಂಡ್ ಎಂಬ ಯೋಜನೆಯನ್ನು ಸಹ ನೀಡುತ್ತದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಅಂದರೆ ಲಾಗ್ 9 ಹೈ ಪವರ್ ಚಾರ್ಜರ್, ಫೋನ್-ಕರೆ ಆಧಾರಿತ eV ಚಾರ್ಜಿಂಗ್ ಸೇವೆಯಾಗಿದ್ದು, ಅದು ಗ್ರಾಹಕರಿಗೆ ಪ್ರವೇಶವನ್ನು ನೀಡಿ ವಾಹನ ಮಾಲೀಕರ ಗಮ್ಯ ಸ್ಥಾನಕ್ಕೆ ತಲುಪಿಸುತ್ತದೆ. ಲಾಗ್ 9 ಹೊಸದಾಗಿ ಅಭಿವೃದ್ಧಿಪಡಿಸಿರುವ InstaCharge ಅಪ್ಲಿಕೇಶನ್ - ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಹಾಗೂ ಇನ್ನಿತರ ಮೆಟ್ರೋ ನಗರಗಳಲ್ಲಿ ಒಬ್ಬ ವ್ಯಕ್ತಿಗೆ ಅವರ ಸ್ಥಳಕ್ಕೆ ಅನುಗುಣವಾಗಿ ಹತ್ತಿರದಲ್ಲಿರುವ ಇವಿ ಚಾರ್ಜಿಂಗ್ ಸ್ಟೇಷನ್ ಬಗ್ಗೆ ಮಾಹಿತಿ ನೀಡುತ್ತದೆ.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಈ ಬಗ್ಗೆ ಮಾತನಾಡಿರುವ Omega Seiki ಮೊಬಿಲಿಟಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಉದಯ್ ನಾರಂಗ್ ರವರು, OSM ಭಾರತದಲ್ಲಿ ರೇಜ್ ಪ್ಲಸ್ ರಾಪಿಡ್ ಇವಿ ಬಿಡುಗಡೆಯೊಂದಿಗೆ ಭಾರತದಲ್ಲಿ ಕಾರ್ಗೋ ಇವಿ ವಿಭಾಗದಲ್ಲಿ ಉತ್ತುಂಗದಲ್ಲಿದೆ. ನಮ್ಮ ಗ್ರಾಹಕರು ನಾವು ನೀಡುತ್ತಿರುವ ಅನನ್ಯ ಸೇವೆಯಿಂದ ಸಂತೋಷ ಪಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಅತಿ ವೇಗವಾಗಿ ಚಾರ್ಜ್ ಆಗುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಬಿಡುಗಡೆಗೊಳಿಸಿದ Omega Seiki

ಉದ್ಯಮದೊಂದಿಗಿನ ಮಿತಿ ಆತಂಕವನ್ನು ಪರಿಹರಿಸುತ್ತದೆ - ಪ್ರಮುಖ ಚಾರ್ಜಿಂಗ್ ಸಮಯವು ಎಂಡ್ ಮೈಲ್ ಲಾಜಿಸ್ಟಿಕ್ಸ್ ಗ್ರಾಹಕರು ಹಾಗೂ ಉದ್ಯಮಿಗಳಿಗೆ ಹೆಚ್ಚು ಕೆಲಸದ ಸಮಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

Most Read Articles

Kannada
English summary
Omega seiki launches india s fastest charging electric three wheeler details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X