ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ರೆನಾಲ್ಟ್ (Renault) ಕಂಪನಿಯು ತನ್ನ ಜನಪ್ರಿಯ ರೆನಾಲ್ಟ್ 4 L ಕಾರು ಉತ್ಪಾದನೆಯ 60 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕಂಪನಿಯು ಏರ್4 ಎಂಬ ಹಾರುವ ಕಾರ್ ಅನ್ನು ಅನಾವರಣಗೊಳಿಸಿದೆ. ರೆನಾಲ್ಟ್ ಕಂಪನಿಯು ಏರ್4 ಫ್ಯೂಚರಿಸ್ಟಿಕ್ ಶೋ ಕಾರ್ ಅನ್ನು ರಚಿಸಲು ಹಬ್ ದಿ ಆರ್ಸೆನಲ್ ಮೋಷನ್ ಡಿಸೈನ್ ಜೊತೆ ಕೈಜೋಡಿಸಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ರೆನಾಲ್ಟ್ ಕಂಪನಿಯು 4 L ಮಾದರಿಯನ್ನು 30 ವರ್ಷಗಳಿಂದ 100 ದೇಶಗಳಲ್ಲಿ ಮಾರಾಟ ಮಾಡಿದೆ. ಇದರ ಸಂಭ್ರಮವನ್ನು ಆಚರಿಸಲು, ಕಂಪನಿಯು ಹೊಸ ವಿನ್ಯಾಸದಲ್ಲಿ ಈ ಕಾರಿನ ಮಾದರಿಯನ್ನು ರಿ ಡಿಸೈನ್ ಮಾಡಿದೆ. ವಿಶೇಷವೆಂದರೆ 4 L ಮಾದರಿಯಲ್ಲಿ ತಯಾರಿಸಲಾದ ಏರ್4 ಕಾರು ಹಾರುವ ಕಾರ್ ಆಗಿದ್ದು, ಈ ಕಾರಿನಲ್ಲಿ ಎರಡು ಬ್ಲೇಡ್‌ಗಳಿರುವ ನಾಲ್ಕು ರೋಟರ್‌ಗಳನ್ನು ಅಳವಡಿಸಲಾಗಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಏರ್ 4 ಅನಾವರಣಗೊಳಿಸುವ ಮೂಲಕ ಕಂಪನಿಯು ಭವಿಷ್ಯದಲ್ಲಿ ಹಾರುವ ಕಾರುಗಳನ್ನು ತಯಾರಿಸುವ ಯೋಜನೆಯನ್ನು ಬಹಿರಂಗಪಡಿಸಿದೆ. ಏರ್ 4 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ರಚನೆಯನ್ನು ಹಗುರವಾಗಿಡಲು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಹಾರುವ ಕಾರಿನಲ್ಲಿ ಚಾಲಕ ಸೀಟಿನ ಜೊತೆಗೆ ಪ್ರಯಾಣಿಕರ ಸೀಟ್ ಅನ್ನು ಸಹ ನೀಡಲಾಗಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಕಾರಿನ ರೋಟರ್ ಅನ್ನು ಪವರ್ ಮಾಡಲು, ಅದರಲ್ಲಿ 22,000 ಎಂಎಹೆಚ್ ಲಿಥಿಯಂ ಪಾಲಿಮರ್ ಬ್ಯಾಟರಿ ಅಳವಡಿಸಲಾಗಿದೆ. ಈ ಹಾರುವ ಕಾರು ಸೆಕೆಂಡಿಗೆ 26 ಮೀಟರ್ ವೇಗದಲ್ಲಿ ಹಾರಬಲ್ಲದು. ಅದೇ ಸಮಯದಲ್ಲಿ ಟೇಕ್ ಆಫ್ ಆಗುವಾಗ, ಸೆಕೆಂಡಿಗೆ 14 ಮೀಟರ್ ವೇಗದಲ್ಲಿ ನೆಲದ ಮೇಲೆ ಏರಬಲ್ಲದು. ಈ ಹಾರುವ ಕಾರು ಗರಿಷ್ಠ 700 ಮೀಟರ್ ಎತ್ತರದಲ್ಲಿ ಹಾರಬಲ್ಲದು ಎಂದು ಕಂಪನಿ ಹೇಳಿ ಕೊಂಡಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಆದರೆ ಇದು ಕೇವಲ ಕಾನ್ಸೆಪ್ಟ್ ಮಾದರಿಯಾಗಿದೆ. ಕಂಪನಿಯು ಭವಿಷ್ಯದಲ್ಲಿ ತನ್ನ ಹಾರುವ ಕಾರುಗಳನ್ನು ಈ ರೀತಿಯಲ್ಲಿ ವಿನ್ಯಾಸಗೊಳಿಸಬಹುದು. ಈ ಕಾರಿನಲ್ಲಿರುವ ನಾಲ್ಕು ಪ್ರೊಪೆಲ್ಲರ್‌ಗಳು 380 ಕೆ.ಜಿ ವರ್ಟಿಕಲ್ ಒತ್ತಡವನ್ನು ಉತ್ಪಾದಿಸುತ್ತವೆ. ಏರ್ 4 ಅನ್ನು ಫ್ರಾನ್ಸ್‌ನ ಟೆಕ್ನಾಲಜಿ ಪಾರ್ಕ್ ಸೋಫಿಯಾ ಆಂಟಿಪೋಲಿಸ್‌ನಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಈ ವರ್ಷ ರೆನಾಲ್ಟ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರ್ ಆದ ಕ್ವಿಡ್'ನ 4 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಹ್ಯಾಚ್‌ಬ್ಯಾಕ್‌ ಕಾರಿನ ವಿನ್ಯಾಸವು ಅದರ ಬಹು ದೊಡ್ಡ ವೈಶಿಷ್ಟ್ಯವಾಗಿದೆ. ಈ ಕಾರು ಕಾಂಪ್ಯಾಕ್ಟ್ ಎಸ್‌ಯುವಿಯ ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯಿಂದಾಗಿ ಜನಪ್ರಿಯವಾಗಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಈ ಕಾರಿಗೆ 2019ರ ಅಕ್ಟೋಬರ್'ನಲ್ಲಿ ಮೊದಲ ಮಿಡ್ ಲೈಫ್ ನವೀಕರಣವನ್ನು ನೀಡಲಾಯಿತು. ನಂತರ ರೆನಾಲ್ಟ್ ಕಂಪನಿಯು ಬಿಎಸ್ 6 ಮಾಲಿನ್ಯ ನಿಯಮಗಳ ಮಾನದಂಡಗಳ ಆಧಾರದ ಮೇಲೆ 2020ರ ಜನವರಿಯಲ್ಲಿ ನವೀಕರಿಸಿತು. ಇತ್ತೀಚೆಗೆ ರೆನಾಲ್ಟ್ ಕಂಪನಿಯು ಕ್ವಿಡ್ ಮಾದರಿಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಫಿಟ್‌ಮೆಂಟ್‌ನಂತೆ ನೀಡುತ್ತಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಈ ಅಪ್ ಡೇಟ್ ಮೂಲಕ ಕಂಪನಿಯು ಭಾರತದಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಮುಂಬರುವ ಸುರಕ್ಷತಾ ನಿಯಮಗಳನ್ನು ಅನುಸರಿಸಲು ಸಿದ್ಧವಾಗಿದೆ. ಇದರ ಹೊರತಾಗಿ ಕಂಪನಿಯು ರೆನಾಲ್ಟ್ ಕ್ವಿಡ್ ಕ್ಲೈಂಬರ್ ಆವೃತ್ತಿಯನ್ನು ಹೊಸ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್‌ನೊಂದಿಗೆ ಪರಿಚಯಿಸಿದೆ. ಕಂಪನಿಯು ಈ ಕಾರಿನಲ್ಲಿ ಎಲೆಕ್ಟ್ರಿಕ್ ORVM ಹಾಗೂ ಡೇ ಅಂಡ್ ನೈಟ್ IRVM ಫೀಚರ್ ಅನ್ನು ಸಹ ನೀಡುತ್ತಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಸದ್ಯಕ್ಕೆ ರೆನಾಲ್ಟ್ ಕ್ವಿಡ್ ಕಾರ್ ಅನ್ನು ಒಟ್ಟು ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 4.11 ಲಕ್ಷಗಳಿಂದ ರೂ. 5.59 ಲಕ್ಷಗಳಾಗಿದೆ. ರೆನಾಲ್ಟ್ ಕಂಪನಿಯು ಕ್ವಿಡ್ ಕಾರ್ ಅನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ರೆನಾಲ್ಟ್ ಕಂಪನಿಯು ಭಾರತದಲ್ಲಿ ತಯಾರಿಸಿದ ಕಿಗರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಮಾರಾಟವನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದೆ. ರೆನಾಲ್ಟ್ ಇಂಡಿಯಾ ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ಮಾರುಕಟ್ಟೆಗೆ ಈ ಎಸ್‌ಯುವಿಯ ರಫ್ತುಗಳನ್ನು ಆರಂಭಿಸಿತು. ಮೊದಲ ಹಂತದಲ್ಲಿ ಚೆನ್ನೈ ಬಂದರಿನಿಂದ 760 ಯುನಿಟ್ ಕಿಗರ್ ಎಸ್‌ಯುವಿಗಳನ್ನು ರಫ್ತು ಮಾಡಲಾಯಿತು.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ನೇಪಾಳದ ನಂತರ ದಕ್ಷಿಣ ಆಫ್ರಿಕಾವು ಕಿಗರ್‌ ಎಸ್‌ಯುವಿಗೆ ಎರಡನೇ ರಫ್ತು ಮಾರುಕಟ್ಟೆಯಾಗಿದೆ. ರೆನಾಲ್ಟ್ ಕಂಪನಿಯು ತನ್ನ ದಕ್ಷಿಣ ಆಫ್ರಿಕಾ ವೆಬ್‌ಸೈಟ್‌ನಲ್ಲಿ ಈ ಕಿಗರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಲ್ಲಾ ಮಾದರಿಗಳ ಬೆಲೆಗಳನ್ನು ಪಟ್ಟಿ ಮಾಡಿದೆ. ವರದಿಗಳ ಪ್ರಕಾರ, ರೆನಾಲ್ಟ್ ಕಿಗರ್ ಎಸ್‌ಯುವಿಯನ್ನು ಲೈಫ್, ಜೆನ್ ಹಾಗೂ ಇಂಟೆನ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ಅವಲಂಬಿಸಿ ಏಳು ರೂಪಾಂತರಗಳಾಗಿ ವಿಂಗಡಿಸಲಾಗಿದೆ. ಈಗಿನ ವಿನಿಮಯ ದರದ ಪ್ರಕಾರ ಕಿಗರ್‌ ಎಸ್‌ಯುವಿಯ ಬೆಲೆ 199,900 ರ‍್ಯಾಂಡ್‌ಗಳಿಂದ 289,900 ರ‍್ಯಾಂಡ್‌ಗಳಾಗಿದೆ. ಈ ಕಾರಿನಲ್ಲಿ 1.0 ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಹಾಗೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಏರ್4 ಹೆಸರಿನ ಹಾರುವ ಕಾರ್ ಅನಾವರಣಗೊಳಿಸಿದ Renault

ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಹಾಗೂ ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 5 ಸ್ಪೀಡ್ ಮ್ಯಾನುಯಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

Most Read Articles

Kannada
English summary
Renault company unveils air4 flying car details
Story first published: Saturday, November 27, 2021, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X