ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಪ್ರಸ್ತುತ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಅಂತ್ಯದ ಮೊದಲೇ ಸ್ಥಗಿತವಾಗಲಿದೆ. ಇತ್ತೀಚೆಗೆ ಅನಾವರಣಗೊಂಡ ಹೊಸ ತಲೆಮಾರಿನ ಡಸ್ಟರ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಾರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು. ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವಾಗಿತ್ತು.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಇನ್ನು 2017ರ ಅಂತ್ಯದಲ್ಲಿ ರೆನಾಲ್ಟ್ ಕಂಪನಿಯು ಎರಡನೇ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಆದರೆ ಈ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. 2019ರ ಜುಲೈ ತಿಂಗಳಿನಲ್ಲಿ ಡಸ್ಟರ್‌ಗೆ ಜಾಗತಿಕ ಮಾದರಿಯಂತೆಯೇ ವಿನ್ಯಾಸ ಪರಿಷ್ಕರಣೆಗಳೊಂದಿಗೆ ಹೆಚ್ಚು ಅಗತ್ಯವಿರುವ ಫೇಸ್‌ಲಿಫ್ಟ್ ನೀಡಿತು.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಎರಡನೇ ತಲೆಮಾರಿನ ಡಸ್ಟರ್‌ನ ವಿನ್ಯಾಸವು ಭಾರತದಲ್ಲಿ ಪೇಟೆಂಟ್ ಪಡೆದಿದೆ. ಈ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಫ್ರೆಂಚ್ ವಾಹನ ತಯಾರಕ ಕಂಪನಿಯು ಈಗಾಗಲೇ ಎರಡನೇ ತಲೆಮಾರಿನ ಡಸ್ಟರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಯುರೋಪಿಯನ್-ಸ್ಪೆಕ್ ಮಾದರಿಯು ಇತ್ತೀಚೆಗೆ ಮಿಡ್-ಲೈಫ್ ಫೇಸ್ ಲಿಫ್ಟ್ ಅನ್ನು ಸ್ವೀಕರಿಸಿದೆ. ಈ ಹೊಸ ಡಸ್ಟರ್ ಎಲ್ಇಡಿ ಟರ್ನ್ ಸಿಗ್ನಲ್‌ಗಳು, ವೈವಿಧ್ಯಮಯ ಅಲಾಯ್ ವ್ಹೀಲ್ ಆಯ್ಕೆಗಳು, ಬೋಲ್ಡರ್ ಫ್ರಂಟ್ ಮತ್ತು ಹಿಂಭಾಗದ ಬಂಪರ್‌ಗಳೊಂದಿಗೆ ಹರಿತವಾದ ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಒಳಭಾಗದಲ್ಲಿ ಹೊಸ ಎಂಟು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಹೊಸ ಆಪರೇಟಿಂಗ್ ಸಿಸ್ಟಂ ಮತ್ತು ಗ್ರಾಫಿಕ್ಸ್ ಹೊಂದಿರುವ ಏಳು ಇಂಚಿನ ಯುನಿಟ್, ಮೀಡಿಯಾ ಡಿಸ್ ಪ್ಲೇ ಸಿಸ್ಟಂ, ರೇಡಿಯೋ, ಬ್ಲೂಟೂತ್, ಎರಡು ಯುಎಸ್‌ಬಿ ಪೋರ್ಟ್‌ಗಳು, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ವಾಯ್ಸ್ ಕಾಮೆಂಟ್ ನಂತಹ ಫೀಚರ್ಸ್ ಗಳನ್ನು ಪ್ರಹೊಂದಿವೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ಹೆಚ್ಚು ಸುಧಾರಿತ ಮೀಡಿಯಾ ನ್ಯಾವ್ ಸಿಸ್ಟಂ ವೈರ್‌ಲೆಸ್ ಸ್ಮಾರ್ಟ್‌ಫೋನ್ ಮಿರರಿಂಗ್ ಮತ್ತು ಸ್ಯಾಟಲೈಟ್ ನ್ಯಾವಿಗೇಷನ್‌ನೊಂದಿಗೆ ಬರುತ್ತದೆ. ಎರಡು ಸಿಸ್ಟಂಗಳು ಇನ್‌ಕ್ಲಿನೋಮೀಟರ್ ಮತ್ತು ಅಲ್ಟಿಮೀಟರ್ ಮತ್ತು ಫ್ಯೂಯಲ್ ಎಕನಾಮಿ ಇಂಡಿಕೇಟರ್ ಗಳೊಂದಿಗೆ ಫ್ಹೋರ್ ವ್ಹೀಲ್ ಡ್ರೈವ್ ಮಾನಿಟರ್ ಅನ್ನು ಪಡೆಯುತ್ತವೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಇದರಲ್ಲಿ ಹೊಸ ಸೀಟ್ ಗಳನ್ನು ಅಳವಡಿಸಲಾಗಿದ್ದು, ಸೆಂಟರ್ ಕನ್ಸೋಲ್ ಅನ್ನು ವಿಶಾಲ ಆರ್ಮ್ ರೆಸ್ಟ್ ಜೊತೆಗೆ ಮರುವಿನ್ಯಾಸಗೊಳಿಸಲಾಗಿದೆ. ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೈ-ಎಂಡ್ ರೂಪಾಂತರಗಳಲ್ಲಿ, ಹೆಚ್ಚುವರಿ ಯುಎಸ್ಬಿ ಸಾಕೆಟ್ಗಟ್ ಗಳು, ಆರ್ಮ್ ರೆಸ್ಟ್ ಅಡಿಯಲ್ಲಿ ಜೊತೆಗೆ ಹೀಟೆಡ್ ಸೀಟುಗಳು ಮತ್ತು ಆಟೋಮ್ಯಾಟಿಕ್ ಕ್ಲೈಮೇಂಟ್ ಫೀಚರ್ಸ್ ಗಳನ್ನು ನೀಡಲಾಗಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಡಸ್ಟರ್ ಎಸ್‍ಯುವಿಯಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು 1.5-ಲೀಟರ್ ಮತ್ತು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಗಳಾಗಿದೆ.

ಭಾರತದಲ್ಲಿ ಸ್ಥಗಿತವಾಗಲಿದೆ ಮೊದಲ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‍ಯುವಿ

ಹೊಸ ಪ್ರತಿಸ್ಪರ್ಧಿಯೊಂದಿಗೆ ಈ ವಿಭಾಗಕ್ಕೆ ಸೇರಿಸಲ್ಪಟ್ಟ ನಂತರ ಫೀಚರ್ಸ್ ಮತ್ತು ವಿನ್ಯಾಸ ಬದಲಾವಣೆಗಳ ಕೊರತೆಯು ಡಸ್ಟರ್‌ನ ಕಡಿಮೆ ಮಾರಾಟಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ, ಕಂಪನಿಯು ಪ್ರಸ್ತುತ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಮುಂದಿನ ವರ್ಷ ವರ್ಷ ಹೊಸ ತಲೆಮಾರಿನ ಡಸ್ಟರ್ ಬಿಡುಗಡೆಯಾಗಲಿದೆ.

Most Read Articles

Kannada
English summary
Renault Duster To Be Discontinued This Year. Read In Kannada.
Story first published: Thursday, July 22, 2021, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X