ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

2020 ರ ಟೋಕಿಯೊ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತರಾದ ಮೀರಾಬಾಯಿ ಚಾನು ಅವರಿಗೆ ಖ್ಯಾತ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ಹೊಸ ಕಿಗರ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದೆ. ಟೋಕಿಯೊ ಒಲಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದ ಹಿನ್ನೆಲೆಯಲ್ಲಿ ಕಂಪನಿಯು ಈ ಉಡುಗೊರೆಯನ್ನು ನೀಡಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಕಾಲಿಟ್ಟು 10 ವರ್ಷಗಳು ಪೂರ್ತಿಯಾಗಿವೆ. ರೆನಾಲ್ಟ್ ಇಂಡಿಯಾ ಕಂಪನಿಯ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾದ ಸುಧೀರ್ ಮಲ್ಹೋತ್ರಾರವರು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಹೊಸ ರೆನಾಲ್ಟ್ ಕಿಗರ್ ಎಸ್‌ಯುವಿಯ ಕೀ ಯನ್ನು ಮೀರಾಬಾಯಿ ಚಾನುರವರಿಗೆ ಹಸ್ತಾಂತರಿಸಿದರು. ಕಂಪನಿಯು ಈ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ಈ ವರ್ಷದ ಆರಂಭದಲ್ಲಿ ರೆನಾಲ್ಟ್ ಕಿಗರ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ರೆನಾಲ್ಟ್ ಇಂಡಿಯಾ ಇತ್ತೀಚೆಗೆ ತನ್ನ ಕಿಗರ್ ಎಸ್‌ಯುವಿಯ ಆರ್‌ಎಕ್ಸ್‌ಟಿ (ಒ) ಮಾದರಿಯ ಹೊಸ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಿಗರ್ ಆರ್‌ಎಕ್ಸ್‌ಟಿ (ಒ) ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 7.37 ಲಕ್ಷಗಳಾಗಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಈ ಮಾದರಿಯಲ್ಲಿ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಆಯ್ಕೆಯನ್ನು ನೀಡಲಾಗುತ್ತದೆ. ಕಿಗರ್‌ ಆರ್‌ಎಕ್ಸ್‌ಟಿ (ಒ) ಮಾದರಿಯು ಅದರ ಅಸ್ತಿತ್ವದಲ್ಲಿರುವ ಆರ್‌ಎಕ್ಸ್‌ಟಿ ಮಾದರಿಯನ್ನು ಆಧರಿಸಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಹೊಸ ರೂಪಾಂತರವನ್ನು ಕಿಗರ್‌ನ ಆರ್‌ಎಕ್ಸ್‌ಝಡ್ ನ ಟಾಪ್ ಎಂಡ್ ಮಾದರಿಗಳ ಕೆಳಗೆ ಇರಿಸಲಾಗಿದೆ. ಈ ಮಾದರಿಯನ್ನು ಕೆಲವು ಹೆಚ್ಚುವರಿ ಫೀಚರ್ ಗಳೊಂದಿಗೆ ಪರಿಚಯಿಸಲಾಗಿದೆ. ಕಂಪನಿಯು ಆರ್‌ಎಕ್ಸ್‌ಟಿ (ಒ) ಮಾದರಿಯಲ್ಲಿ ಕಿಗರ್‌ನ ಆರ್‌ಎಕ್ಸ್‌ಝಡ್ ಮಾದರಿಯ ಕೆಲವು ಫೀಚರ್ ಗಳನ್ನು ಅಳವಡಿಸಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಈ ಫೀಚರ್ ಗಳಲ್ಲಿ ಎಲ್ಇಡಿ ಹೆಡ್ ಲ್ಯಾಂಪ್, 16 ಇಂಚಿನ ಅಲಾಯ್ ವ್ಹೀಲ್, ಪಿಎಂ 2.5 ಎಸಿ ಫಿಲ್ಟರ್, ವೈರ್ ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳು ಸೇರಿವೆ. ಈ ಮಾದರಿಯಲ್ಲಿ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಸ್ಟೀಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳನ್ನು ನೀಡಲಾಗಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಇದರ ಹೊರತಾಗಿ ಈ ಮಾದರಿಯಲ್ಲಿ ಕ್ವಿಡ್ ಹಾಗೂ ಟ್ರೈಬರ್ ಮಾದರಿಗಳಲ್ಲಿರುವಂತಹ ಎಲ್ಇಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್ ನೊಂದಿಗೆ ಕೀ ಲೆಸ್ ಎಂಟ್ರಿಗಳನ್ನು ನೀಡಲಾಗಿದೆ. ಇನ್ನು ಸುರಕ್ಷತೆಗಾಗಿ ಮಾದರಿಯಲ್ಲಿ ನಾಲ್ಕು ಏರ್‌ಬ್ಯಾಗ್‌, ಇಬಿಡಿ ಹೊಂದಿರುವ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‌, ರೇರ್ ವೀವ್ ಕ್ಯಾಮೆರಾ ಹಾಗೂ ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಗಳನ್ನು ನೀಡಲಾಗಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ರೆನಾಲ್ಟ್ ಕಿಗರ್‌ನ ಹೊಸ ಆರ್‌ಎಕ್ಸ್‌ಟಿ (ಒ) ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ರೆನಾಲ್ಟ್ ಕಂಪನಿಯು ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಹಾಗೂ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈಗ ರೆನಾಲ್ಟ್ ಕಿಗರ್‌ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಟಿ ಹಾಗೂ ಆರ್‌ಎಕ್ಸ್‌ಝಡ್ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಈ ಎಸ್‌ಯುವಿಯನ್ನು ಎರಡು ಇಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಮೊದಲನೆಯದಾದ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 72 ಬಿ‌ಹೆಚ್‌ಪಿ ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಇನ್ನು ಎರಡನೆಯದಾದ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 ಬಿ‌ಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುಯಲ್ ಗೇರ್ ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತದೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಮೀರಾಬಾಯಿ ಚಾನುರವರಿಗೆ ಮಾತ್ರವಲ್ಲದೇ ಟೋಕಿಯೊ ಒಲಂಪಿಕ್ಸ್‌ನಲ್ಲಿ ಪದಕ ಗೆದ್ದ ಹಲವು ಕ್ರೀಡಾ ಪಟುಗಳಿಗೆ ವಿವಿಧ ವಾಹನ ತಯಾರಕ ಕಂಪನಿಗಳು ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿವೆ. ಒಲಂಪಿಕ್ಸ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ನೀರಜ್ ಚೋಪ್ರಾರವರಿಗೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ಹೊಸ ಎಕ್ಸ್‌ಯು‌ವಿ 700 ಎಸ್‌ಯು‌ವಿಯನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

ಒಲಂಪಿಕ್ಸ್ ಪದಕ ವಿಜೇತೆಗೆ ಎಸ್‌ಯುವಿ ಉಡುಗೊರೆ ನೀಡಿದ ರೆನಾಲ್ಟ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಕಂಚಿನ ಪದಕ ಗೆಲ್ಲುವಲ್ಲಿ ಎಡವಿದ ಭಾರತದ ಕ್ರೀಡಾ ಪಟುಗಳಿಗೆ ಹೊಸ ಕಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ. ಬಹುತೇಕ ಕಂಪನಿಗಳು ಪದಕ ಗೆದ್ದವರಿಗೆ ಮಾತ್ರ ಉಡುಗೊರೆಗಳನ್ನು ನೀಡುತ್ತಿದ್ದರೆ ಟಾಟಾ ಮೋಟಾರ್ಸ್ ಕಂಪನಿಯು ಪದಕ ಗೆಲ್ಲಲು ವಿಫಲರಾದವರಿಗೂ ಉಡುಗೊರೆ ನೀಡುವ ಮೂಲಕ ಉಳಿದ ಕಂಪನಿಗಳಿಗೆ ಮಾದರಿಯಾಗಿದೆ. ಇನ್ನು ಎರಡು ವಿಮಾನಯಾನ ಕಂಪನಿಗಳು ಪದಕ ಗೆದ್ದ ಕ್ರೀಡಾ ಪಟುಗಳಿಗೆ ಉಚಿತ ವಿಮಾನ ಟಿಕೆಟ್ ಗಳನ್ನು ಘೋಷಿಸಿವೆ.

Most Read Articles

Kannada
English summary
Renault india gifts new suv to olympic medal winner details
Story first published: Wednesday, August 18, 2021, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X