ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಬಜೆಟ್ ಬೆಲೆಯ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಸೌಲಭ್ಯಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯ 2021ರ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಟ್ರೈಬರ್ ಮೂಲಕ ಎಂಟ್ರಿ ಲೆವೆಲ್ ಎಂಪಿವಿ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಇಂಡಿಯಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.30 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.65 ಲಕ್ಷ ಬೆಲೆ ಪಡೆದುಕೊಂಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

2021ರ ಟ್ರೈಬರ್ ಕಾರು ಹಳೆಯ ಮಾದರಿಗಿಂತ ರೂ. 10 ಸಾವಿರದಿಂದ ರೂ. 15 ಸಾವಿರದಷ್ಟು ದುಬಾರಿಯಾಗಿದ್ದು, ಕೆಲವು ಫೀಚರ್ಸ್ ಜೊತೆಗೆ ಡ್ಯುಯಲ್ ಕಲರ್ ಹೊರತುಪಡಿಸಿ ಹೊಸ ಕಾರಿನ ಎಂಜಿನ್ ಆಯ್ಕೆಯಲ್ಲಿ ಈ ಹಿಂದಿನ ಮಾದರಿಯಂತೆ ಮುಂದುವರಿಸಲಾಗಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‍ಎಕ್ಸ್‌ಟಿ, ಆರ್‌ಎಕ್ಸ್‌ಜೆಡ್ ಆವೃತ್ತಿಗಳನ್ನು ಹೊಂದಿರುವ ಹೊಸ ಕಾರು ಮೆಟಲ್ ಮಸ್ಟರ್ಟಡ್, ಎಲೆಕ್ಟ್ರಿಕ್ ಬ್ಲ್ಯೂ, ಮೂನ್‍ಲೈಟ್ ಸಿಲ್ವರ್, ಐಸ್ ಕೂಲ್ ವೈಟ್ ಮತ್ತು ಕೆಡರ್ ಬ್ರೌನ್ ಡ್ಯುಯಲ್ ಕಲರ್ ಆಯ್ಕೆಯೊಂದಿಗೆ ಆಕರ್ಷಕ ಲುಕ್ ಪಡೆದುಕೊಂಡಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಹಾಗೆಯೇ ಹೊಸ ಕಾರಿನ ಹೊರಭಾಗದಲ್ಲಿ ರಿಯರ್ ವ್ಯೂ ಮಿರರ್ ಒಳಗೊಂಡ ಎಲ್ಇಡಿ ಟರ್ನ್ ಇಂಡಿಕೇಟರ್ ಮತ್ತು ಬ್ಲ್ಯಾಕ್ ಔಟ್ ಥೀಮ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ ಈ ಬಾರಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್ ಜೊತೆಗೆ ಮೌಂಟೆಡ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಹೊಸ ಆವೃತ್ತಿಯ ಮೂಲಕ ರೆನಾಲ್ಟ್ ಕಂಪನಿಯು ದಟ್ಸನ್ ಗೊ ಪ್ಲಸ್, ಹ್ಯುಂಡೈ ಗ್ರಾಂಡ್ ಐ10, ಫೋರ್ಡ್ ಫಿಗೋ, ಮಾರುತಿ ವ್ಯಾಗನ್ಆರ್ ಮತ್ತು ಎರ್ಟಿಗಾ ಎಂಟ್ರಿ ಲೆವಲ್ ಕಾರು ಮಾದರಿಗೂ ಪೈಪೋಟಿ ನೀಡಲಿದ್ದು, ಟರ್ಬೊ ಆವೃತ್ತಿಯು ಕೂಡಾ ನೀರಿಕ್ಷೆಯಲ್ಲಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಹೊಸದಾಗಿ ಟ್ರೈಬರ್ ಮಾದರಿಯಲ್ಲಿ ಜೋಡಣೆಗೆ ನಿರ್ಧರಿಸಲಾಗಿರುವ ಟರ್ಬೊ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಹೊಸ ಬದಲಾವಣೆಗಳೊಂದಿಗೆ 2021ರ ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿ ಬಿಡುಗಡೆ

ಟ್ರೈಬರ್ ಮಾದರಿಯಲ್ಲಿ ಟರ್ಬೊ ಮಾದರಿಗೂ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದರೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳಿಗಾಗಿ ಹೊಸ ಆವೃತ್ತಿಯ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗುತ್ತಿದ್ದು, 2022ರ ಆವೃತ್ತಿಯಲ್ಲಿ ಹೊಸ ಮಾದರಿಯ ಬಿಡುಗಡೆ ಖಚಿತವಾಗಿದೆ.

More from DriveSpark

Article Published On: Tuesday, March 9, 2021, 20:25 [IST]
English summary
2021 Renault Triber Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+