ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

2016ರಲ್ಲಿ ವರ್ಕ್‌ಶಾಪ್ ಆನ್ ವ್ಹೀಲ್ಸ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ (Renault) ಇಂಡಿಯಾ ಈಗ ವರ್ಕ್‌ಶಾಪ್ ಆನ್ ವ್ಹೀಲ್ಸ್ ಲೈಟ್ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಿದೆ. ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ತೊಂದರೆ ಇಲ್ಲದ ಮಾಲೀಕತ್ವದ ಅನುಭವವನ್ನು ಒದಗಿಸುವ ಸಲುವಾಗಿ ಕಂಪನಿಯು ಈ ಯೋಜನೆಯನ್ನು ಆರಂಭಿಸುತ್ತಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಅಂದ ಹಾಗೆ ರೆನಾಲ್ಟ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭವನ್ನು ಆಚರಿಸುವ ಸಲುವಾಗಿ ರೆನಾಲ್ಟ್ ಇಂಡಿಯಾ ವರ್ಕ್‌ಶಾಪ್ ಆನ್ ವ್ಹೀಲ್ಸ್ ಲೈಟ್ ಯೋಜನೆಯನ್ನು ಆರಂಭಿಸಿದೆ. ರೆನಾಲ್ಟ್ ಇಂಡಿಯಾದ ವರ್ಕ್‌ಶಾಪ್ ಆನ್ ವ್ಹೀಲ್ಸ್ ಲೈಟ್ ದ್ವಿಚಕ್ರ ವಾಹನಗಳ ಮೊಬೈಲ್ ವರ್ಕ್ ಶಾಪ್ ಒಂದು ಕಾನ್ಸೆಪ್ಟ್ ಮಾದರಿಯಾಗಿದೆ ಎಂಬುದು ಗಮನಾರ್ಹ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಈ ಯೋಜನೆಯು ರೆನಾಲ್ಟ್ ವಾಹನಗಳಿಗೆ ಸಂಬಂಧಿಸಿದ ಹಲವಾರು ಸಣ್ಣ ಸೇವೆ, ದುರಸ್ತಿ ಕೆಲಸಗಳನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಉಪಕರಣಗಳು ಹಾಗೂತಂತ್ರಜ್ಞಾನಗಳೊಂದಿಗೆ ಗ್ರಾಹಕರಿಗೆ ಸೇವೆಯನ್ನು ನೀಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ರೆನಾಲ್ಟ್ ಇಂಡಿಯಾ ಕಂಪನಿಯು ಅಸಾಧಾರಣ ಬೆಳವಣಿಗೆಯೊಂದಿಗೆ ಮಾರಾಟ ಹಾಗೂ ನೆಟ್‌ವರ್ಕ್ ವಿಸ್ತರಣೆಯ ವಿಷಯದಲ್ಲಿ ಭಾರತದಲ್ಲಿ ತನ್ನ ನೆಲೆಯನ್ನು ಹಾಗೂ ಅಸ್ತಿತ್ವವನ್ನು ವೇಗವಾಗಿ ಬೆಳೆಸಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಇದರ ಜೊತೆಗೆ ಮಾರಾಟದಲ್ಲಿನ ಹೆಚ್ಚಳವು ದೇಶಾದ್ಯಂತ, ಗ್ರಾಮೀಣ ಮಾರುಕಟ್ಟೆಗಳಲ್ಲಿ ಕಂಪನಿಗೆ ಮತ್ತಷ್ಟು ಗ್ರಾಹಕರನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಗ್ರಾಮೀಣ ಗ್ರಾಹಕರ ಅಗತ್ಯಗಳನ್ನು ಪೂರೈಸಲು 2016ರಲ್ಲಿ ವರ್ಕ್‌ಶಾಪ್ ಆನ್ ವ್ಹೀಲ್ಸ್ ಯೋಜನೆಯನ್ನು ಆರಂಭಿಸಿತು.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ದೇಶದ ಅತ್ಯಂತ ಪ್ರತ್ಯೇಕ ಪ್ರದೇಶಗಳಲ್ಲಿಯೂ ಸಹ ರೆನಾಲ್ಟ್ ಕಾರುಗಳ ಸೇವೆಯನ್ನು ಸಕ್ರಿಯಗೊಳಿಸಲು ವರ್ಕ್‌ಶಾಪ್ ಆನ್ ವ್ಹೀಲ್ಸ್ ಪ್ರಮುಖವಾಗಿ ನಾಲ್ಕು ಚಕ್ರದ ವಾಹನದಲ್ಲಿ ನಿರ್ಮಿಸಲಾದ ಮೊಬೈಲ್ ಕಾರ್ಯಾಗಾರವಾಗಿದೆ. ಈ ಕಾರ್ಯಾಗಾರವು ಎಲ್ಲಾ ನಿರ್ವಹಣಾ ಸೇವೆ, ರಿಪೇರಿ ಸೇರಿದಂತೆ ಕಾರ್ಯಾಗಾರದ ಕಾರ್ಯಾಚರಣೆಗಳ 90%ನಷ್ಟು ಬೇಡಿಕೆಗಳನ್ನು ಪೂರೈಸುತ್ತದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ವರ್ಕ್‌ಶಾಪ್ ಆನ್ ವ್ಹೀಲ್ಸ್ ಲೈಟ್ ಬಗ್ಗೆ ಹೇಳುವುದಾದರೆ, ಈ ಯೋಜನೆಯ ಮೂಲಕ 530ಕ್ಕೂ ಹೆಚ್ಚು ಟಚ್ ಪಾಯಿಂಟ್‌ಗಳ ಪ್ರಬಲ ಸೇವಾ ನೆಟ್‌ವರ್ಕ್ ಅನ್ನು ಹೆಚ್ಚಿಸುತ್ತದೆ ಎಂಬುದು ಕಂಪನಿಯ ಅಭಿಪ್ರಾಯ. ಕಂಪನಿಯು ಈಗ ದೇಶಾದ್ಯಂತ 250 ವರ್ಕ್‌ಶಾಪ್ ಆನ್ ವ್ಹೀಲ್ಸ್ ಹಾಗೂ ವರ್ಕ್‌ಶಾಪ್ ಆನ್ ವ್ಹೀಲ್ಸ್ ಲೈಟ್'ಗಳನ್ನು ಹೊಂದಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಹೊಸತನದಿಂದ ಕೂಡಿರುವ ರೂರಲ್ ಫ್ಲೋಟ್, ರೆನಾಲ್ಟ್‌ ಕಂಪನಿಯ ದೂರದಲ್ಲಿರುವ ಗ್ರಾಹಕರಿಗೆ ಹತ್ತಿರವಾಗಿದೆ. ಇದು ಮಾಲೀಕತ್ವದ ವಿಶಿಷ್ಟ ಅನುಭವವನ್ನು ನೀಡುತ್ತದೆ. ರೂರಲ್ ಫ್ಲೋಟ್‌ನೊಂದಿಗೆ, ಕಂಪನಿಯು ತನ್ನ ಹೊಸ ರೆನಾಲ್ಟ್ ಕಿಗರ್ ಕಾರ್ ಅನ್ನು ಗ್ರಾಮೀಣ ಮಾರುಕಟ್ಟೆಯಲ್ಲಿ ಸಂಭಾವ್ಯ ಗ್ರಾಹಕರಿಗೆ ಪ್ರದರ್ಶಿಸುತ್ತಿದೆ. ರೂರಲ್ ಫ್ಲೋಟ್ ಅಭಿಯಾನವು ದೇಶದ 13 ರಾಜ್ಯಗಳ 233 ಪಟ್ಟಣಗಳಲ್ಲಿ 23,000 ಕ್ಕೂ ಹೆಚ್ಚು ಗ್ರಾಹಕರನ್ನು ಸಂಪರ್ಕಿಸಿದೆ ಎಂಬುದು ಗಮನಾರ್ಹ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಇದರ ಜೊತೆಗೆ ಈ ಅಭಿಯಾನದಲ್ಲಿ 2700 ಕ್ಕೂ ಹೆಚ್ಚು ಟೆಸ್ಟ್ ಡ್ರೈವ್‌ಗಳನ್ನು ಸಹ ನಡೆಸಲಾಗಿದೆ. ಇದರ ಸಹಾಯದಿಂದ ಕಂಪನಿಯು ತನ್ನ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ಇತ್ತೀಚಿನ ಬಿಡುಗಡೆಗೊಳಿಸಿರುವ ಕಿಗರ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಇತ್ತೀಚೆಗೆ ಕಂಪನಿಯು ಈ ಕಾರಿನ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಈ ವೀಡಿಯೊದಲ್ಲಿ ಕಾರಿನ ವಿನ್ಯಾಸ ಹಾಗೂ ಫೀಚರ್ ಗಳನ್ನು ಕಾಣಬಹುದು. ಕಿಗರ್ ಕಾರಿನ ಮಾರಾಟವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ವಿಭಾಗದಲ್ಲಿ ಹಿಡಿತವನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯು‌ವಿ ವಿಭಾಗವು ಅತ್ಯಂತ ಸ್ಪರ್ಧಾತ್ಮಕ ವಿಭಾಗದಲ್ಲಿ ಒಂದಾಗಿದೆ. ರೆನಾಲ್ಟ್ ಕಿಗರ್‌ನ ಹೊಸ ವೀಡಿಯೊ ಅದರ ವಿನ್ಯಾಸ, ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಈ ಎಸ್‌ಯು‌ವಿಯನ್ನು RXE, RXL, RXT, RXT (O) ಹಾಗೂ RXZ ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯು‌ವಿಯು ಸದ್ಯಕ್ಕೆ ಕಂಪನಿಯ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಕಿಗರ್ ಎಸ್‌ಯು‌ವಿಯು ಈ ವಿಭಾಗದಲ್ಲಿ ಅತ್ಯಧಿಕ ಮೈಲೇಜ್ ನೀಡುತ್ತದೆ ಎಂದು ರೆನಾಲ್ಟ್ ಕಂಪನಿ ಹೇಳಿಕೊಂಡಿದೆ, ಈ ಎಸ್‌ಯು‌ವಿಯನ್ನು 1.0 ಲೀಟರ್ ಪೆಟ್ರೋಲ್ ಹಾಗೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ತನ್ನ ಜನಪ್ರಿಯ ರೆನಾಲ್ಟ್ 4 L ಕಾರು ಉತ್ಪಾದನೆಯ 60 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕಂಪನಿಯು ಏರ್4 ಎಂಬ ಹಾರುವ ಕಾರ್ ಅನ್ನು ಅನಾವರಣಗೊಳಿಸಿದೆ. ರೆನಾಲ್ಟ್ ಕಂಪನಿಯು ಏರ್4 ಫ್ಯೂಚರಿಸ್ಟಿಕ್ ಶೋ ಕಾರ್ ಅನ್ನು ರಚಿಸಲು ಹಬ್ ದಿ ಆರ್ಸೆನಲ್ ಮೋಷನ್ ಡಿಸೈನ್ ಜೊತೆ ಕೈಜೋಡಿಸಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯು 4 L ಮಾದರಿಯನ್ನು 30 ವರ್ಷಗಳಿಂದ 100 ದೇಶಗಳಲ್ಲಿ ಮಾರಾಟ ಮಾಡಿದೆ. ಇದರ ಸಂಭ್ರಮವನ್ನು ಆಚರಿಸಲು, ಕಂಪನಿಯು ಹೊಸ ವಿನ್ಯಾಸದಲ್ಲಿ ಈ ಕಾರಿನ ಮಾದರಿಯನ್ನು ರಿ ಡಿಸೈನ್ ಮಾಡಿದೆ. ವಿಶೇಷವೆಂದರೆ 4 L ಮಾದರಿಯಲ್ಲಿ ತಯಾರಿಸಲಾದ ಏರ್4 ಕಾರು ಹಾರುವ ಕಾರ್ ಆಗಿದ್ದು, ಈ ಕಾರಿನಲ್ಲಿ ಎರಡು ಬ್ಲೇಡ್‌ಗಳಿರುವ ನಾಲ್ಕು ರೋಟರ್‌ಗಳನ್ನು ಅಳವಡಿಸಲಾಗಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಏರ್ 4 ಅನಾವರಣಗೊಳಿಸುವ ಮೂಲಕ ಕಂಪನಿಯು ಭವಿಷ್ಯದಲ್ಲಿ ಹಾರುವ ಕಾರುಗಳನ್ನು ತಯಾರಿಸುವ ಯೋಜನೆಯನ್ನು ಬಹಿರಂಗಪಡಿಸಿದೆ. ಏರ್ 4 ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನ ರಚನೆಯನ್ನು ಹಗುರವಾಗಿಡಲು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಹಾರುವ ಕಾರಿನಲ್ಲಿ ಚಾಲಕ ಸೀಟಿನ ಜೊತೆಗೆ ಪ್ರಯಾಣಿಕರ ಸೀಟ್ ಅನ್ನು ಸಹ ನೀಡಲಾಗಿದೆ.

ದೂರದ ಸ್ಥಳಗಳಲ್ಲಿರುವ ಗ್ರಾಹಕರಿಗೆ ನೆರವಾಗಲು ಹೊಸ ಯೋಜನೆ ಆರಂಭಿಸಿದ ರೆನಾಲ್ಟ್

ಕಾರಿನ ರೋಟರ್ ಅನ್ನು ಪವರ್ ಮಾಡಲು, ಅದರಲ್ಲಿ 22,000 ಎಂಎಹೆಚ್ ಲಿಥಿಯಂ ಪಾಲಿಮರ್ ಬ್ಯಾಟರಿ ಅಳವಡಿಸಲಾಗಿದೆ. ಈ ಹಾರುವ ಕಾರು ಸೆಕೆಂಡಿಗೆ 26 ಮೀಟರ್ ವೇಗದಲ್ಲಿ ಹಾರಬಲ್ಲದು. ಅದೇ ಸಮಯದಲ್ಲಿ ಟೇಕ್ ಆಫ್ ಆಗುವಾಗ, ಸೆಕೆಂಡಿಗೆ 14 ಮೀಟರ್ ವೇಗದಲ್ಲಿ ನೆಲದ ಮೇಲೆ ಏರಬಲ್ಲದು. ಈ ಹಾರುವ ಕಾರು ಗರಿಷ್ಠ 700 ಮೀಟರ್ ಎತ್ತರದಲ್ಲಿ ಹಾರಬಲ್ಲದು ಎಂದು ಕಂಪನಿ ಹೇಳಿ ಕೊಂಡಿದೆ.

Most Read Articles

Kannada
English summary
Renault india launches workshop on wheel lite for remote area customers details
Story first published: Thursday, December 23, 2021, 10:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X