ಅಧಿಕ ಮೈಲೇಜ್ ನೀಡುವ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಪರಿಚಯಿಸಿದ ರೆನಾಲ್ಟ್
ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಹೊಸ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ರೆನಾಲ್ಟ್ ಕ್ಯಾಪ್ಚರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಹೊಸ ರೆನಾಲ್ಟ್ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರು ಐಕಾನಿಕ್, ಎಸ್ ಎಡಿಷನ್ ಮತ್ತು ಆರ್.ಎಸ್. ಲೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಕ್ಯಾಪ್ಚರ್ ಕಾರು ಇ-ಟೆಕ್ ಹೈಬ್ರಿಡ್ ಕ್ಲಿಯೊ ಇ-ಟೆಕ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ. ಇದು 1.6-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 1.2 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲಾಗಿದೆ.

ಇದು ಒಟ್ಟು 145 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ ಆಟೋಮ್ಯಾಟಿಕ್ ಮತ್ತು ಮಲ್ಟಿ-ಮೋಡ್ ಡಾಗ್ ಗೇರ್‌ಬಾಕ್ಸ್ ಅನ್ನು ನೀಡಲಾಗಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಕಾರು 10.6 ಸೆಕೆಂಡ್‌ಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರು 170 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಸುಮಾರು 24 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಈ ಹೊಸ ಇ-ಟೆಕ್ ಹೈಬ್ರಿಡ್ ಕಾರು ಸಿಎಮ್ಎಫ್-ಬಿ ಮಾಡ್ಯುಲರ್ ಫ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಆಲ್ಪೈನ್ ತಂಡದೊಂದಿಗಿನ ತಮ್ಮ ಫಾರ್ಮುಲಾ1 ಪರಿಣತಿಯಿಂದ ಇ-ಟೆಕ್ ಪವರ್‌ಟ್ರೇನ್ ತಯಾರಿಸಲಾಗಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದು ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಪ್ಯೂರ್ ಡ್ರೈವ್ ಮೋಡ್‌ನಲ್ಲಿ ಕ್ಯಾಪ್ಚರ್ ಆಲ್-ಎಲೆಕ್ಟ್ರಿಕ್ ಆಗಿ ಹೋಗುತ್ತದೆ ಮತ್ತು ಅದು ಮೊದಲು ಆನ್ ಮಾಡಿದಾಗ ಡೀಫಾಲ್ಟ್ ಮೋಡ್ ಆಗಿದೆ. ಮೈಸೆನ್ಸ್ ಡ್ರೈವ್ ಮೋಡ್ ಚಾಲಕನ ಇನ್ಪುಟ್ ಮತ್ತು ಚಾಲನಾ ಸ್ಥಿತಿಯನ್ನು ಅವಲಂಬಿಸಿ ಆಟೋಮ್ಯಾಟಿಕ್ ಆಗಿ ಹೈಬ್ರಿಡ್ ಪವರ್‌ಟ್ರೇನ್‌ಗೆ ಹೊಂದಿಕೊಳ್ಳುತ್ತದೆ.

ಇದು ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸುವ ಸ್ಪೋರ್ಟ್ ಮೋಡ್ ಅನ್ನು ಸಹ ಹೊಂದಿದೆ. ಕ್ಯಾಪ್ಚರ್ ಇ-ಟೆಕ್ ಹೈಬ್ರಿಡ್ ಪ್ರಯೋಜನಗಳ ಜೊತೆ ಯುರೋ ಎನ್‌ಸಿಎಪಿ ಸುರಕ್ಷತಾ ರೇಟಿಂಗ್‌ನಲ್ಲಿ 5-ಸ್ಟಾರ್ ಅನ್ನು ಪಡೆದುಕೊಂಡಿದೆ ಎಂದು ರೆನಾಲ್ಟ್ ಹೇಳಿಕೊಂಡಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ರೆನಾಲ್ಟ್ ಕಂಪನಿಯು ಭಾರತದಲ್ಲಿ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಹೊಸ ಕ್ಯಾಪ್ಚರ್ ಇ-ಟೆಕ್ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿದೆ. ಈ ಕಾರಿನ ಬೆಲೆಯು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಭಾರತೀಯ ಕರೆನ್ಸಿ ಪ್ರಕಾರ ಅಂದಾಜು ರೂ.21.78 ಲಕ್ಷಗಳಾಗಿದೆ. ಇನ್ನು ಈ ರೆನಾಲ್ಟ್ ಕ್ಯಾಪ್ಟೂರ್ ಇ-ಟೆಕ್ ಹೈಬ್ರಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications