ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಇದೀಗ ಮತ್ತಷ್ಟು ದುಬಾರಿ

ಉತ್ಪಾದನಾ ವೆಚ್ಚಗಳ ಹೆಚ್ಚಳ ಪರಿಣಾಮ ಹೊಸ ವಾಹನಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗುತ್ತಿದ್ದು, ಬಜೆಟ್ ಬೆಲೆಯ ಕಾರುಗಳ ಸಹ ಇದೀಗ ದುಬಾರಿ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿವೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ರೆನಾಲ್ಟ್ ಹೊಚ್ಚ ಹೊಸ ಕಿಗರ್ ಕಾರು ಮಾದರಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಕಾರು ಬಿಡುಗಡೆಯಾದ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಳ್ಳುತ್ತಿದೆ. ಹೊಸ ದರ ಪಟ್ಟಿಯಲ್ಲಿ ಆರಂಭಿಕ ಆವೃತ್ತಿಯ ಬೆಲೆ ಹೊರತುಪಡಿಸಿದ ಇನ್ನುಳಿದ ಆವೃತ್ತಿಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 1 ಸಾವಿರದಿಂದ ರೂ. 13 ಸಾವಿರ ತನಕ ದರ ಏರಿಕೆ ಮಾಡಲಾಗಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ವಾಹನ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ವಿವಿಧ ಕಾರು ಕಂಪನಿಗಳು ತನ್ನ ಪ್ರಮುಖ ವಾಹನಗಳ ಬೆಲೆ ಹೆಚ್ಚಳ ಮಾಡಿದ್ದು, ರೆನಾಲ್ಟ್ ಕಂಪನಿಯು ಕೂಡಾ ಕಿಗರ್ ಕಾರಿನ ದರ ಪರಿಷ್ಕರಣೆ ಮಾಡಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.64 ಲಕ್ಷದಿಂದ ಟಾಪ್ ಎಂಡ್ ರೂ.10.08 ಲಕ್ಷ ಹೊಂದಿದ್ದ ಕಾರು ಇದೀಗ ಆರಂಭಿಕವಾಗಿ ರೂ.5.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.09 ಲಕ್ಷ ಬೆಲೆ ಹೊಂದಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಹೊಸ ದರಪಟ್ಟಿಯಲ್ಲಿ ಕಿಗರ್ ಆರ್‌ಎಕ್ಸ್ಇ ಆವೃತ್ತಿಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಆವೃತ್ತಿಗಳು ಬೆಲೆ ಹೆಚ್ಚಳ ಮಾಡಲಾಗಿದ್ದು, ಮಧ್ಯಂತರದಲ್ಲಿರುವ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯೆಂಟ್‌ಗಳ ಬೆಲೆಯಲ್ಲಿ ರೂ. 8 ಸಾವಿರದಿಂದ ರೂ.13 ಸಾವಿರ ತನಕ ದರ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಟರ್ಬೊ ಪೆಟ್ರೋಲ್ ಮಾದರಿಯ ಪ್ರಮುಖ ವೆರಿಯೆಂಟ್‌ಗಳ ಬೆಲೆಯು ಕೂಡಾ ರೂ. 13 ಸಾವಿರ ತನಕ ಹೆಚ್ಚಳವಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆಯಲ್ಲಿ ರೂ. 1 ಸಾವಿರ ಬೆಲೆ ಹೆಚ್ಚಿಸಲಾಗಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಬೆಲೆ ಹೆಚ್ಚಳದ ನಂತರವೂ ಸದ್ಯ ಮಾರುಕಟ್ಟೆಯಲ್ಲಿರುವ ಕಿಗರ್ ಕಾರಿನ ಪ್ರತಿ ಸ್ಪರ್ಧಿ ಕಾರುಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7 ಲಕ್ಷದಿಂದ ಟಾಪ್ ಎಂಡ್ ಮಾದರಿಗಳು 13 ಲಕ್ಷ ಬೆಲೆ ಅಂತದಲ್ಲಿ ಮಾರಾಟವಾಗುತ್ತಿದ್ದು, ಹೀಗಿರುವಾಗ ಪ್ರತಿಸ್ಪರ್ಧಿ ಕಾರುಗಳಿಗೆ ಸಮನಾಗಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳು ಒಂದೇ ಪ್ಲ್ಯಾಟ್‌ಫಾರ್ಮ್, ಎಂಜಿನ್ ಮತ್ತು ಬೆಲೆ ಕೂಡಾ ಒಂದೇ ಮಾದರಿಯಲ್ಲಿದ್ದು, ವಿಭಿನ್ನವಾದ ವಿನ್ಯಾಸದೊಂದಿಗೆ ತಮ್ಮದೆ ಆದ ಜನಪ್ರಿಯತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಕೂಪೆ ಮಾದರಿಯಲ್ಲಿ ಗಮನಸೆಳೆಯುತ್ತಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಹಾಗೆಯೇ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳಿವೆ.

ಬೆಲೆ ಹೆಚ್ಚಳ: ರೆನಾಲ್ಟ್ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಇದೀಗ ಮತ್ತಷ್ಟು ದುಬಾರಿ

ಕಿಗರ್ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

Article Published On: Thursday, August 5, 2021, 15:17 [IST]
English summary
Renault kiger compact suv prices increased
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+