ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ರೆನಾಲ್ಟ್ ಇಂಡಿಯಾ ಕಂಪನಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಮಾರಾಟವಾಗುತ್ತಿದೆ. ರೆನಾಲ್ಟ್ ಕಂಪನಿಯ ಕಾರುಗಳ ಸರಣಿಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಈ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 4 ಲಕ್ಷ ಯುನಿಟ್‌ಗಳು ಮಾರಾಟವಾಗಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. 2015ರಲ್ಲಿ ಬಿಡುಗಡೆಯಾದ ಹ್ಯಾಚ್‌ಬ್ಯಾಕ್ ಆರಂಭದಲ್ಲಿ ಅದರ ಕಾಂಪ್ಯಾಕ್ಟ್ ಶೈಲಿಯ ವಿನ್ಯಾಸ ಮತ್ತು ಕೈಗೆಟುಕುವ ಬೆಲೆಗೆ ಹೆಚ್ಚಿನ ಗ್ರಾಹಕರು ಒಲವು ತೋರಿತು. ಈ ಮಾದರಿಯು ತನ್ನ ಮೊದಲ ಮಿಡ್-ಲೈಫ್ ಅಪ್‌ಡೇಟ್ 2019ರ ಅಕ್ಟೋಬರ್ ತಿಂಗಳಿನಲ್ಲಿ ಪಡೆದುಕೊಂಡಿತು. ನಂತರ ಅದರ ಬಿಎಸ್6 ಆವೃತ್ತಿಯನ್ನು ಕಳೆದ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ವಾಹನ ತಯಾರಕರು ಕ್ವಿಡ್ ಮಾದರಿಯಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಪ್ರಮಾಣಿತ ಫಿಟ್‌ಮೆಂಟ್‌ನಂತೆ ಮಾಡಿದ್ದಾರೆ. ಈ ನವೀಕರಣದೊಂದಿಗೆ, ಇದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ರೆನಾಲ್ಟ್ ಕ್ವಿಡ್ ನಾಲ್ಕು ಟ್ರಿಮ್‌ಗಳಲ್ಲಿ ಹರಡಿರುವ 10 ರೂಪಾಂತರಗಳಲ್ಲಿ ಲಭ್ಯವಿದೆ. ಈ ರೆನಾಲ್ಟ್ ಕ್ವಿಡ್ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ 4.11 ಲಕ್ಷಗಳಾಗಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ರೆನಾಲ್ಟ್ ಕ್ವಿಡ್ ಪ್ರಾರಂಭವಾದಾಗಿನಿಂದಲೂ ಸಣ್ಣ ಕಾರು ಖರೀದಿದಾರರ ಮೆಚ್ಚಿನ ಆಯ್ಕೆಯಲ್ಲಿ ಇದು ಕೂಡ ಒಂದಾಗಿದೆ. ಕ್ವಿಡ್ ಖರೀದಿದಾರರಲ್ಲಿ ಜನಪ್ರಿಯವಾಗಲು ಮುಖ್ಯ ಕಾರಣವೆಂದರೆ ಇದರ ಲುಕ್ ಮತ್ತು ಪ್ರಾರಂಭವಾದ ಸಮಯದಲ್ಲಿ ತನ್ನ ವಿಭಾಗದಲ್ಲಿ ಟಚ್‌ಸ್ಕ್ರೀನ್ ನೀಡುವ ಏಕೈಕ ಮಾದರಿಯಾಗಿತ್ತು.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಕ್ವಿಡ್ ಕಾರಿನ ಮುಂಭಾಗದ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತದಲ್ಲಿ ಜನಪ್ರಿಯವಾಗಲು ಸಹಾಯ ಮಾಡಿತು. ಈ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದ ಗ್ರಿಲ್ ಅನ್ನು ಪರಿಷ್ಕರಿಸಲಾಗಿದೆ ಮತ್ತು ವಿಭಾಗದಲ್ಲಿನ ಇತರ ಅನೇಕ ಪ್ರೀಮಿಯಂ ಕಾರುಗಳಂತೆ. ರೆನಾಲ್ಟ್ ಕ್ವಿಡ್ ಎಲ್ಇಡಿ ಡಿಆರ್ಎಲ್ ಗಳನ್ನು ಹೊಂದಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

2021ರ ಕ್ವಿಡ್ ಕಾರಿನಲ್ಲಿ RXE, RXL, RXT ಮತ್ತು Climber ವೆರಿಯೆಂಟ್‌ಗಳನ್ನ ಹೊಂದಿದೆ. ಈ ಹೊಸ ಕಾರು ಬಿಎಸ್-6 ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳೊಂದಿಗೆ ಹೊಸದಾಗಿ ಡ್ಯುಯಲ್ ಟೋನ್ ಬಾಡಿ ಕಲರ್, ಎಲೆಕ್ಟ್ರಿಕ್ ಮೂಲಕ ಅಡ್ಜೆಸ್ಟ್ ಮಾಡಬಹುದಾದ ರಿಯರ್ ವ್ಯೂ ಮಿರರ್ ಸೇರಿದಂತೆ ಸ್ಪೋರ್ಟಿ ವಿನ್ಯಾಸದ ಮಲ್ಟಿ ಸ್ಪೋರ್ಕ್ ಅಲಾಯ್ ವ್ಹೀಲ್ ಹೊಂದಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಈ ಕಾರಿನ ಎಲ್ಇಡಿ ಡಿಆರ್ಎಲ್ ಗಳ ಪಕ್ಕದಲ್ಲಿಯೇ ಟರ್ನ್ ಇಂಡಿಕೇಟರ್ ಗಳನ್ನು ಇರಿಸಲಾಗುತ್ತದೆ. ಹೆಡ್‌ಲ್ಯಾಂಪ್‌ಗಳನ್ನು ಈಗ ಬಂಪರ್‌ನ ಕೆಳಗಿನ ಭಾಗದಲ್ಲಿ ಇರಿಸಲಾಗಿದೆ. ಇದು ಈಗ ಹೆಡ್‌ಲ್ಯಾಂಪ್‌ಗಳಲ್ಲಿ ಹ್ಯಾಲೊಜೆನ್ ಲೈಟ್ ಗಳೊಂದಿಗೆ ಬರುತ್ತದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ರೆನಾಲ್ಟ್ ಕ್ವಿಡ್ ಒಳಭಾಗದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ, ಎಸಿ ವೆಂಟ್ ಮತ್ತು ಮುಂತಾದವುಗಳೊಂದಿಗೆ ನವೀಕರಿಸಿದ ಕ್ಯಾಬಿನ್ ಅನ್ನು ಹೊಂದಿದೆ. ಡ್ಯಾಶ್‌ಬೋರ್ಡ್ ಈಗ ರೆನಾಲ್ಟ್ ಟ್ರೈಬರ್ ಎಂಪಿವಿಯನ್ನು ಹೋಲುತ್ತದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ರೆನಾಲ್ಟ್ ಕ್ವಿಡ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ 800-ಸಿಸಿ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಕ್ವಿಡ್ ಕಾರಿನಲ್ಲಿ ಕಂಪನಿಯು ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಹೈ ಸ್ಪೀಡ್-ಅಲರ್ಟ್ ಸಿಸ್ಟಂ, ಸೀಟ್ ಬೆಲ್ಟ್ ರಿಮೈಂಡರ್, ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಂ ಮತ್ತು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಒಳಗೊಂಡಿದೆ. ಹೈ ಎಂಡ್ ಮಾದರಿಗಳ ಹಿಂಬದಿಯ ಆಸನಗಳಲ್ಲಿ ಆರ್ಮ್‌ರೆಸ್ಟ್, ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳಿದ್ದು, ಅಪ್‌ಡೇಟ್ ಮಾಡಲಾದ ಮಾದರಿಯ ಮುಂಭಾಗದಲ್ಲಿ ಚಾಲಕನ ಬಳಿ ಪೈರೋಟೆಕ್ ಮತ್ತು ಪ್ರಿಟೆನ್ಷನರ್‌ನೊಂದಿಗೆ ಫೀಚರ್ಸ್ ನೀಡಲಾಗಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಇನ್ನು ರೆನಾಲ್ಟ್ ಇಂಡಿಯಾ ತನ್ನ ಹೊಸ ಅರ್ಕಾನಾ 5-ಸೀಟರ್ ಕ್ರಾಸ್ಒವರ್ ಮಾದರಿಯ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ ರೆನಾಲ್ಟ್ ಅರ್ಕಾನಾ(Renault Arkana) 5-ಸೀಟರ್ ಕ್ರಾಸ್ಒವರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಟೀಸರ್ ಚಿತ್ರದಲ್ಲಿ ಟೈಲ್-ಲೈಟ್‌ಗಳು ಮತ್ತು ಹಿಂದಿನ ಪ್ರೊಫೈಲ್ ಅನ್ನು ತೋರಿಸುತ್ತದೆ. ಇನ್ನು ಈ ಟೀಸರ್ ನಲ್ಲಿ "#movember" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಇನ್ನು ರೆನಾಲ್ಟ್ ಕಂಪನಿಯು ಪುರುಷರ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ರೆನಾಲ್ಟ್ 'ಮೂವೆಂಬರ್' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಭಾರತೀಯ ಮಾರುಕಟ್ಟೆಗಾಗಿ ರೆನಾಲ್ಟ್ ಈ ಕ್ರಾಸ್ಒವರ್ ಅನ್ನು ಪರಿಗಣಿಸುತ್ತಿದೆಯೇ ಅಥವಾ ಇದು ಮೂವೆಂಬರ್ ಕಾರ್ಯಕ್ರಮವನ್ನು ಉತ್ತೇಜಿಸುವ ಪೋಸ್ಟ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ರೆನಾಲ್ಟ್ ಅರ್ಕಾನಾ ಕ್ರಾಸ್ಒವರ್ ಮಾದರಿಯನ್ನು ರಷ್ಯಾದಲ್ಲಿ 2019 ರಲ್ಲಿ ಪರಿಚಯಿಸಲಾಯಿತು. ಇದು ಈಗಾಗಲೇ ರಷ್ಯಾ, ದಕ್ಷಿಣ ಕೊರಿಯಾ ಮತ್ತು ಯುರೋಪ್ ಸೇರಿದಂತೆ ಇತರ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ.

ಭಾರತದಲ್ಲಿ 4 ಲಕ್ಷ ಮಾರಾಟದ ಗಡಿ ತಲುಪಿ ಹೊಸ ಮೈಲಿಗಲ್ಲು ಸಾಧಿಸಿದ Renault Kwid

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಯು ಮೊದಲ ತಲೆಮಾರಿನಿಂದ ಇಲ್ಲಿಯವರೆಗೆ ಸುಮಾರು 4 ಲಕ್ಷ ಯೂನಿಟ್‌ಗಳು ಮಾರಾಟ ಮಾಡಲಾಗಿದೆ. ಈ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Renault kwid entry level hatchback 4 lakhs units sales milestone in india features details
Story first published: Wednesday, November 17, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X