ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಇಂಡಿಯಾ ಕಂಪನಿಯು ನಿಸ್ಸಾನ್ ಮಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಯಶಸ್ವಿ ನಂತರ ಕಿಗರ್ ಕಾರಿನ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಇದೇ ತಿಂಗಳು 28ರಂದು ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಹೊಸ ಕಾರು ಮಾದರಿಗಳನ್ನು ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಗೊಳಿಸುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ನಂತರ ರೆನಾಲ್ಟ್ ಕಿಗರ್ ಕಾರು ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಕಾನ್ಸೆಪ್ಟ್ ಮಾದರಿಯಲ್ಲಿ ಅನಾವರಣಗೊಂಡಿರುವ ಕಿಗರ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳುತ್ತಿದ್ದು, ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯು ಕೂಡಾ ಅಭಿವೃದ್ದಿಗೊಳ್ಳುವ ಸುಳಿವು ನೀಡಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಕಿಗರ್ ಕಾರು ಮಾದರಿಯು ಮ್ಯಾಗ್ನೈಟ್ ಮಾದರಿಯಲ್ಲೇ ತಾಂತ್ರಿಕ ಅಂಶಗಳು, ಎಂಜಿನ್ ಆಯ್ಕೆ ಹೊಂದಿರುವ ಹಿನ್ನಲೆ ಬೆಲೆ ಕೂಡಾ ಎರಡು ಮಾದರಿಗಳು ತುಸು ಹೆಚ್ಚು ಕಡಿಮೆ ಒಂದೇ ರೀತಿ ಪಡೆದುಕೊಳ್ಳುವ ನೀರಿಕ್ಷೆಯಿದ್ದು, ಮಾಗ್ನೈಟ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.49 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 9.35 ಲಕ್ಷ ಬೆಲೆ ಹೊಂದಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ವಿಭಿನ್ನವಾದ ಹೊರ ವಿನ್ಯಾಸಗಳನ್ನು ಹೊಂದಿರುವ ಮ್ಯಾಗ್ನೈಟ್ ಮತ್ತು ಕಿಗರ್ ಕಾರುಗಳು ಒಂದೇ ಮಾದರಿಯು ತಾಂತ್ರಿಕ ಅಂಶಗಳು ಮತ್ತು ಎಂಜಿನ್ ಆಯ್ಕೆ ಪಡೆದುಕೊಂಡಿದ್ದರೂ ಪ್ರತ್ಯೇಕ ಮಾರಾಟ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲಿವೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ನಾಲ್ಕು ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರುವ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಪ್ರಮುಖ ಕಾರು ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ಕಿಗರ್ ಕಾರು ಮಾದರಿಯು ಸಹ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ. ಕಟಿಂಗ್ ಎರ್ಡ್ಜ್ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಕಿಗರ್ ಕಾರು ಮಾದರಿಯು ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಪಡೆದುಕೊಂಡಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಹೆಡ್‌ಲ್ಯಾಂಪ್ ಸೌಲಭ್ಯವು ಬಂಪರ್ ಮೇಲ್ಭಾಲದಲ್ಲಿ ಮತ್ತು ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯವು ಬ್ಯಾನೆಟ್‌ಗೆ ಹೊಂದಿಕೊಂಡಿದ್ದು, ಕಿಗರ್ ಆವೃತ್ತಿಯು ಕೂಡಾ ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಇದರಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿರುವ ಮಾದರಿಯು ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಳ್ಳಲಿದ್ದು, ಟರ್ಬೊ ಪೆಟ್ರೋಲ್ ಮಾದರಿಯೇ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಹಾಗೆಯೇ ಡೇ ಲೈಟ್ ರನ್ನಿಂಗ್ ಲೈಟ್ ಸೌಲಭ್ಯವು ಫ್ರಂಟ್ ಗ್ರಿಲ್‍ವರೆಗೂ ಮುಂದುವರೆದಿದ್ದು, ಮಧ್ಯದಲ್ಲಿ ರೆನಾಲ್ಟ್ ಲೊಗೊ ಪಡೆದುಕೊಂಡಿದೆ. ಫ್ರಂಟ್ ಬಂಪರ್ ಸೌಲಭ್ಯವು ಮಧ್ಯದಲ್ಲಿ ದೊಡ್ಡದಾದ ಏರ್ ಡ್ಯಾಮ್ ಜೊತೆ ಸಿಲ್ವರ್ ಕೊಟಿಂಗ್ ಹೊಂದಿರುವ ಸ್ಕೀಡ್ ಪ್ಲೇಟ್ ಪಡೆದುಕೊಂಡಿದ್ದು, ಕಟಿಂಗ್ ಎಡ್ಜ್ ವಿನ್ಯಾಸಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ಪಡೆದುಕೊಳ್ಳಲಿವೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಕಾರಿನ ಮುಂಭಾಗದಲ್ಲಿನ ಬಲಿಷ್ಠ ವಿನ್ಯಾಸದಂತೆ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, ಕ್ರೀಸ್‌ ಲೈನ್‌ಗಳೊಂದಿಗೆ ಬ್ಲ್ಯಾಕ್ ಕ್ಲ್ಯಾಂಡಿಂಗ್ ಒಳಗೊಂಡ ವೀಲ್ಹ್ ಆರ್ಚ್ ಮತ್ತು ಆಕರ್ಷಕ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿರಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರು ಮಾದರಿಗಳಂತೆ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದರಲಿರುವ ಕಿಗರ್ ಕಾರು ಮಾದರಿಯು ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ರಿಯಲ್ ವ್ಯೂ ಮಿರರ್, ಬಾಡಿ ಕಲರ್ ಹೊಂದಿರುವ ಡೋರ್ ಹ್ಯಾಂಡಲ್, ಬಾಡಿ ಪ್ಯಾನೆಲ್, ಕಪ್ಪು ಬಣ್ಣ ಹೊಂದಿರುವ ರೂಫ್ ರೈಲ್ಸ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಪಡೆದುಕೊಂಡಿರಲಿದೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವು ರೆನಾಲ್ಟ್ ಕಿಗರ್ ಹೈ ಎಂಡ್ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದ್ದು, ನಿಸ್ಸಾನ್ ಮ್ಯಾಗ್ನೈಟ್ ಮಾದರಿಯಲ್ಲೂ ಈ ಸೌಲಭ್ಯವನ್ನು ನೀಡಲಾಗಿಲ್ಲ. ಆದರೆ ಕಿಗರ್ ಕಾರಿನಲ್ಲಿ ಸನ್‌ರೂಫ್ ಸೇರಿದಂತೆ ಕೆಲವು ವಿಭಿನ್ನ ತಾಂತ್ರಿಕ ಸೌಲಭ್ಯಗಳು ಗ್ರಾಹಕರನ್ನು ಸೆಳೆಯಲಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ಇನ್ನುಳಿದಂತೆ ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ತಿಂಗಳಾಂತ್ಯಕ್ಕೆ ಹೊಚ್ಚ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಅನಾವರಣಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಕಂಪನಿಯು ಹೊಸ ಕಾರನ್ನು ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಿದ್ದು, ಹೊಸ ಕಾರು ಮಾದರಿಯು ಮ್ಯಾಗ್ನೈಟ್ ಕಾರಿನಲ್ಲಿರುವಂತೆಯೇ 1.0-ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Article Published On: Tuesday, January 5, 2021, 19:17 [IST]
English summary
Renault Kiger Production-Spec To Be Unveiled On 28 January. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+