ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಮಹಿಳಾ ದಿನದ ಹಿನ್ನೆಲೆಯಲ್ಲಿ ರೆನಾಲ್ಟ್ ಕಂಪನಿಯು ತನ್ನ ಮಹಿಳಾ ಗ್ರಾಹಕರಿಗಾಗಿ ಹಲವಾರು ಹೊಸ ಕೊಡುಗೆಗಳನ್ನು ಘೋಷಿಸಿದೆ. ಈ ಕೊಡುಗೆಗಳು ಮಾರ್ಚ್ 8ರಿಂದ ಮಾರ್ಚ್ 14ರವರೆಗೆ ಇರಲಿವೆ.

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಅವಧಿಯಲ್ಲಿ ಮಹಿಳಾ ಗ್ರಾಹಕರ ಕಾರುಗಳನ್ನು ಉಚಿತವಾಗಿ ಪಿಕಪ್ ಹಾಗೂ ಡ್ರಾಪ್ ಮಾಡಲಾಗುತ್ತದೆ. ಉಚಿತ ಉಡುಗೊರೆ ನೀಡುವುದರ ಜೊತೆಗೆ ಲೇಬರ್ ಚಾರ್ಜ್ ಮೇಲೆ 10% ರಿಯಾಯಿತಿ, ವಾರಂಟಿ ಹಾಗೂ ಆರ್‌ಎಸ್‌ಎ ಮೇಲೆ 10% ರಿಯಾಯಿತಿ ನೀಡಲಾಗುತ್ತದೆ.

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಮಹಿಳಾ ಗ್ರಾಹಕರು ತಮ್ಮ ಕಾರ್ ಅನ್ನು ಸರ್ವೀಸ್'ಗೆ ನೀಡಲು ಬಯಸಿದರೆ ಶೋರೂಂ ಸಿಬ್ಬಂದಿ ಗ್ರಾಹಕರ ಮನೆಗೆ ಬಂದು ಕಾರನ್ನು ತೆಗೆದುಕೊಂಡು ಹೋಗಿ ಸರ್ವೀಸ್ ಮಾಡಿಸಿ ಕಾರ್ ಅನ್ನು ಮನೆಗೆ ಬಿಟ್ಟು ಹೋಗುತ್ತಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಇದರ ಜೊತೆಗೆ ಯಾವುದೇ ಬಿಡಿ ಭಾಗಗಳ ಮೇಲೆ 10%ನಷ್ಟು ರಿಯಾಯಿತಿ ನೀಡಲಾಗುತ್ತದೆ. ಯಾವುದೇ ರೀತಿಯ ಸರ್ವೀಸ್ ಪಡೆದರೂ ಖಚಿತ ಉಡುಗೊರೆಯನ್ನು ನೀಡಲಾಗುತ್ತದೆ. ಕೊಡುಗೆಗಳನ್ನು ಪಡೆಯಬಯಸುವವರು ಸಮೀಪದ ರೆನಾಲ್ಟ್ ಡೀಲರ್'ರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆಯಬಹುದು.

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಈ ಕೊಡುಗೆಗಳು ರೆನಾಲ್ಟ್ ಕಂಪನಿಯ ಅಧಿಕೃತ ಡೀಲರ್ ಬಳಿ ಮಾತ್ರ ಲಭ್ಯವಿರಲಿವೆ. ಗ್ರಾಹಕರು ಸರ್ವೀಸ್ ಮಾಡಿಸಲು ಯಾವುದೇ ಸ್ಲಾಟ್‌ಗಳನ್ನು ಬುಕ್ ಮಾಡಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಇದರ ಜೊತೆಗೆ ರೆನಾಲ್ಟ್ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿದೆ. ರೆನಾಲ್ಟ್ ಕ್ವಿಡ್ ಮೇಲೆ ರೂ.50,000ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ.

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಇನ್ನು ರೆನಾಲ್ಟ್ ಟ್ರೈಬರ್ ಕಾರಿನ ಮೇಲೆ ರೂ.60,000 ಹಾಗೂ ರೆನಾಲ್ಟ್ ಡಸ್ಟರ್ 1.3 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿಯ ಮೇಲೆ ರೂ.75,000ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ರೆನಾಲ್ಟ್ ಡಸ್ಟರ್ 1.5 ಲೀಟರ್ ಪೆಟ್ರೋಲ್ ಆವೃತ್ತಿಯ ಮೇಲೆ ರೂ.45,000ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ಎಸ್‌ಯು‌ವಿಯ ಟರ್ಬೊ ಮಾದರಿಯ ಮೇಲೆ 3 ವರ್ಷ ಅಥವಾ 50,000 ಕಿ.ಮೀಗಳ ಈಸೀ ಕೇರ್ ಪ್ಯಾಕೇಜ್ ಸಹ ನೀಡಲಾಗುತ್ತದೆ.

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ರೆನಾಲ್ಟ್ ಕಂಪನಿಯ ಮಾರಾಟವು ನಿರಂತರವಾಗಿ ಉತ್ತಮಗೊಳ್ಳುತ್ತಿದೆ. ಕಂಪನಿಯ ಅಸ್ತಿತ್ವದಲ್ಲಿರುವ ಕಾರುಗಳು ಸಹ ಮಾರಾಟದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿವೆ. ಜೊತೆಗೆ ಹೊಸದಾಗಿ ಬಿಡುಗಡೆಯಾಗಿರುವ ಕಿಗರ್ ಕಾರಿನ ಮಾರಾಟವೂ ಸಹ ಉತ್ತಮವಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಹಿಳಾ ದಿನಾಚರಣೆ ವಿಶೇಷ: ಮಹಿಳಾ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ಘೋಷಿಸಿದ ರೆನಾಲ್ಟ್

ಕಿಗರ್ ಮೂಲಕ ಕಂಪನಿಯು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಲು ಮುಂದಾಗಿದೆ. ಮಹಿಳಾ ದಿನಾಚರಣೆಯಂದು ಕೊಡುಗೆಗಳನ್ನು ನೀಡುವ ಮೂಲಕ ರೆನಾಲ್ಟ್ ಕಂಪನಿಯು ಹೊಸ ಪರಂಪರೆಗೆ ನಾಂದಿ ಹಾಕಿದೆ.

Most Read Articles

Kannada
English summary
Renault offers special discounts for women customers. Read in Kannada.
Story first published: Monday, March 8, 2021, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X