ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ತನ್ನ ಹೊಸ ಅರ್ಕಾನಾ 5-ಸೀಟರ್ ಕ್ರಾಸ್ಒವರ್ ಮಾದರಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ರೆನಾಲ್ಟ್ ಅರ್ಕಾನಾ(Renault Arkana) 5-ಸೀಟರ್ ಕ್ರಾಸ್ಒವರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಟೀಸರ್ ಚಿತ್ರದಲ್ಲಿ ಟೈಲ್-ಲೈಟ್‌ಗಳು ಮತ್ತು ಹಿಂದಿನ ಪ್ರೊಫೈಲ್ ಅನ್ನು ತೋರಿಸುತ್ತದೆ. ಇನ್ನು ಈ ಟೀಸರ್ ನಲ್ಲಿ "#movember" ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಇನ್ನು ರೆನಾಲ್ಟ್ ಕಂಪನಿಯು ಪುರುಷರ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ರೆನಾಲ್ಟ್ 'ಮೂವೆಂಬರ್' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಭಾರತೀಯ ಮಾರುಕಟ್ಟೆಗಾಗಿ ರೆನಾಲ್ಟ್ ಈ ಕ್ರಾಸ್ಒವರ್ ಅನ್ನು ಪರಿಗಣಿಸುತ್ತಿದೆಯೇ ಅಥವಾ ಇದು ಮೂವೆಂಬರ್ ಕಾರ್ಯಕ್ರಮವನ್ನು ಉತ್ತೇಜಿಸುವ ಪೋಸ್ಟ್ ಆಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ರೆನಾಲ್ಟ್ ಅರ್ಕಾನಾ ಕ್ರಾಸ್ಒವರ್ ಮಾದರಿಯನ್ನು ರಷ್ಯಾದಲ್ಲಿ 2019 ರಲ್ಲಿ ಪರಿಚಯಿಸಲಾಯಿತು. ಇದು ಈಗಾಗಲೇ ರಷ್ಯಾ, ದಕ್ಷಿಣ ಕೊರಿಯಾ ಮತ್ತು ಯುರೋಪ್ ಸೇರಿದಂತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ರೆನಾಲ್ಟ್ ಅರ್ಕಾನಾ ಮಧ್ಯಮ ಗಾತ್ರದ ಕ್ರಾಸ್ಒವರ್ ಆಗಿದ್ದು, 4,545 ಎಂಎಂ ಉದ್ದ, 1,820 ಎಂಎಂ ಅಗಲ ಮತ್ತು 1,565 ಎಂಎಂ ಎತ್ತರವನ್ನು ಹೊಂದಿದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಇನ್ನು ಈ ಕ್ರಾಸ್ಒವರ್ 2,721 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದು ಡಸ್ಟರ್‌ಗಿಂತಲೂ ಹೆಚ್ಚಿನದಾಗಿದೆ. ಅರ್ಕಾನಾ ಕ್ರಾಸ್ಒವರ್ CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಅದು ಕ್ಲಿಯೊಗೆ ಆಧಾರವಾಗಿದೆ. ಇನ್ನು ಮುಂದಿನ ತಲೆಮಾರಿನ ಡಸ್ಟರ್ ಮತ್ತು ನಿಸ್ಸಾನ್ ಕಿಕ್ಸ್ ಅನ್ನು CMF-B ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ವಿನ್ಯಾಸಗೊಳಿಸಲಾಗುವುದು.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಯುರೋಪ್‌ನಲ್ಲಿ ಮಾರಾಟದಲ್ಲಿರುವ ಎರಡನೇ ತಲೆಮಾರಿನ ಡಸ್ಟರ್ ಎಸ್‌ಯುವಿಯೊಂದಿಗೆ ಕ್ರಾಸ್‌ಒವರ್ ವೈಶಿಷ್ಟ್ಯಗಳನ್ನು ಹಂಚಿಕೊಳ್ಳುತ್ತದೆ. ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 9.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂತ್ ಕನ್ಸೋಲ್, ಬೋಸ್ ಸೌಂಡ್-ಸಿಸ್ಟಮ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಇತ್ಯಾದಿಗಳನ್ನು ಪಡೆಯುತ್ತದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ರೆನಾಲ್ಟ್ ಅರ್ಕಾನಾ ಕ್ರಾಸ್ಒವರ್ ನಲ್ಲಿ 1.3-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಇಂಡಿಯಾ-ಸ್ಪೆಕ್ ಡಸ್ಟರ್ ಮತ್ತು ಕಿಕ್ಸ್‌ಗೆ ನೀಡಲಾಗಿದೆ. ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್ ಅನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಆಯ್ಕೆಯಾಗಿ ಆಲ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಇನ್ನು ರೆನಾಲ್ಟ್ ಕಂಪನಿಯು ತನ್ನ ಮೂರನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‌ಯುವಿಯು ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಒರಟಾದ ವಿನ್ಯಾಸ ಮತ್ತು ಹೊಸ ಎಂಜಿನ್ ಅನ್ನು ಹೊಂದಿರುತ್ತದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಎರಡನೇ ತಲೆಮಾರಿನ ಡಸ್ಟರ್ ಈಗಾಗಲೇ ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ರೆನಾಲ್ಟ್ ಪ್ರಸ್ತುತ ಭಾರತದಲ್ಲಿ ಮೊದಲ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಇನ್ನು ಮೂರನೇ ತಲೆಮಾರಿನ ರೆನಾಲ್ಟ್/ಡೇಸಿಯಾ ಡಸ್ಟರ್ ಅಭಿವೃದ್ಧಿಯಲ್ಲಿದೆ. ಈ ಎಸ್‍ಯುವಿಯನ್ನು 2024 ರಲ್ಲಿ ಪರಿಚಯಿಸಲಾಗುವುದು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಈ ಹೊಸ ಮಾದರಿಯು ಕಾಸ್ಮೆಟಿಕ್ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ಪ್ರಮುಖ ಬದಲಾವಣೆಗಳನ್ನು ತರುತ್ತದೆ. ಎರಡನೇ ತಲೆಮಾರಿನ ಡಸ್ಟರ್ ಬಿಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ನ್ಯೂ ಜನರೇಷನ್ ಡಸ್ಟರ್ ಎಸ್‌ಯುವಿ ರೆನಾಲ್ಟ್-ನಿಸ್ಸಾನ್ ಅಲೈಯನ್ಸ್‌ನ ಸಿಎಂಎಫ್-ಬಿ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಹೊಸ ಲೋಗನ್ ಮತ್ತು ಸ್ಯಾಂಡೆರೊಗೆ ಆಧಾರವಾಗಿದೆ. ಇನ್ನು ಅರ್ಕಾನಾ ಕೂಡ ಇದೇ ಪ್ಲಾಟ್‌ಫಾರ್ಮ್ ಆಗಿದೆ,

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಹೊಸ ಪ್ಲಾಟ್‌ಫಾರ್ಮ್ ಸುರಕ್ಷತೆ ಮತ್ತು ಚಾಲನೆಯ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ನೀಡುತ್ತದೆ. ಎಲೆಕ್ಟ್ರಿಫಿಕೇಷನ್ ಸೇರಿಸುವ ಆಯ್ಕೆಯನ್ನು ಸಹ ನೀಡುತ್ತದೆ. ನ್ಯೂ ಜನರೇಷನ್ ಡಸ್ಟರ್ ಹೈಬ್ರಿಡ್ ಪವರ್‌ಟ್ರೇನ್‌ಗೆ ಹೊಂದಿಕೊಳ್ಳುತ್ತದೆ. ಈ ಎಸ್‌ಯುವಿಯು ಹೊಸ ಇ-ಟೆಕ್ ಮಾದರಿಯ ಹೈಬ್ರಿಡ್ ಸೆಟಪ್ ಅನ್ನು ಸ್ವೀಕರಿಸಬಹುದು.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಯುರೋಪ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಭಾರತಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಈ ಹೊಸ ಡಸ್ಟರ್ ಮುಂಭಾಗದ ಬಂಪರ್‌ನಿಂದ ಚೌಕಾಕಾರವಾಗಿದೆ, ಇದು ಒಂದು ದೊಡ್ಡ ಸೆಂಟ್ರಲ್ ಗ್ರಿಲ್ ಅನ್ನು ಒಂದು ಜೋಡಿ ಲಂಬವಾದ ಏರ್ ಟೆಕ್ ಅನ್ನು ಹೊಂದಿದೆ. ಇನ್ನು ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಾರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು. ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು.

ಹೊಸ Renault Arkana ಕ್ರಾಸ್ಒವರ್ ಟೀಸರ್ ಬಿಡುಗಡೆ

ಇನ್ನು ಮೊದಲ ತಲೆಮಾರಿನ ಡಸ್ಟರ್ ಎಸ್‍ಯುವಿಯುನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಇತ್ತೀಚೆಗೆ ಅನಾವರಣಗೊಂಡ ಹೊಸ ತಲೆಮಾರಿನ ಡಸ್ಟರ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಯುರೋಪ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಭಾರತಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಹೊಸ ರೆನಾಲ್ಟ್ ಅರ್ಕಾನಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
Renault revealed arkana crossover teaser image find here all details
Story first published: Tuesday, November 2, 2021, 19:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X