ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೆನಾಲ್ಟ್(Renault) ನಿರ್ಮಾಣದ ಹೊಸ ಕಿಗರ್(Kiger) ಕಾರು ಮಾದರಿಯು ಮೈಲೇಜ್ ವಿಚಾರವಾಗಿ ಗಮನಸೆಳೆಯುತ್ತಿದ್ದು, ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ಖಾತ್ರಿಪಡಿಸಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಕಿಗರ್ ಕಾರಿನಲ್ಲಿ 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮತ್ತು 1.0-ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಾಮಾನ್ಯ ಪೆಟ್ರೋಲ್ ಮಾದರಿಯು 72 ಬಿಎಚ್‌ಪಿ ಮತ್ತು ಟರ್ಬೊ ಮಾದರಿಯು 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಹೊಸ ಕಿಗರ್ ಕಾರು ಮಾದರಿಯು ಪರ್ಫಾಮೆನ್ಸ್ ಜೊತೆಗೆ ಎಆರ್‌ಎಐ ಟೆಸ್ಟಿಂಗ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ ಇಂಧನ ದಕ್ಷತೆಯೊಂದಿಗೆ 20.5 ಕಿ.ಮೀ ಮೈಲೇಜ್ ಸಾಧಿಸಿದೆ ಎಂದು ಕಂಪನಿ ಘೋಷಿಸಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಹೊಸ ಕಾರಿನ 1.0 ಲೀಟರ್ ಟರ್ಬೊ ಮ್ಯಾನುವಲ್ ಮಾದರಿಯು ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಪಡೆದುಕೊಂಡಿದ್ದು, 1.0-ಲೀಟರ್ ಸಾಮರ್ಥ್ಯದ ನ್ಯಾಚುರಲಿ ಆಸ್ಪರೆಟೆಡ್ ಮ್ಯಾನುವಲ್ ಮಾದರಿಯು ಕೂಡಾ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಕಿಗರ್ ಕಾರು ಮಾದರಿಯೊಂದಿಗೆ ಪ್ಲ್ಯಾಟ್‌ಫಾರ್ಮ್ ಹಂಚಿಕೊಂಡಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಕಿಗರ್ ಮಾದರಿಯಲ್ಲೇ ಇಂಧನ ದಕ್ಷತೆ ಹೊಂದಿದ್ದು, ಎರಡು ಮಾದರಿಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಪ್ರತಿಸ್ಪರ್ಧಿ ಮಾದರಿಗಳಾದ ಕಿಯಾ ಸೊನೆಟ್, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಹೋಂಡಾ ಡಬ್ಲ್ಯುಆರ್-ವಿ ಮಾದರಿಗಳಿಂತಲೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳು ಇಂಧನ ದಕ್ಷತೆಯಲ್ಲಿ ಮುಂಚೂಣಿಯಲ್ಲಿದ್ದು, ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳು ಬೆಲೆಯಲ್ಲೂ ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಅತಿ ಕಡಿಮೆ ಬೆಲೆ ಹೊಂದಿವೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.64 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.10.09 ಲಕ್ಷ ಬೆಲೆ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಕಳೆದ ತಿಂಗಳು ಬೆಲೆ ಹೆಚ್ಚಳದ ನಂತರವೂ ಸದ್ಯ ಮಾರುಕಟ್ಟೆಯಲ್ಲಿರುವ ಕಿಗರ್ ಕಾರಿನ ಪ್ರತಿ ಸ್ಪರ್ಧಿ ಕಾರುಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7 ಲಕ್ಷದಿಂದ ಟಾಪ್ ಎಂಡ್ ಮಾದರಿಗಳು 13 ಲಕ್ಷ ಬೆಲೆ ಅಂತದಲ್ಲಿ ಮಾರಾಟವಾಗುತ್ತಿದ್ದು, ಹೀಗಿರುವಾಗ ಪ್ರತಿಸ್ಪರ್ಧಿ ಕಾರುಗಳಿಗೆ ಸಮನಾಗಿ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಗೊಂಡಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಾರುಗಳ ಎಂಜಿನ್ ಮತ್ತು ಬೆಲೆ ಕೂಡಾ ಒಂದೇ ಮಾದರಿಯಲ್ಲಿದ್ದು, ವಿಭಿನ್ನವಾದ ವಿನ್ಯಾಸದೊಂದಿಗೆ ತಮ್ಮದೆ ಆದ ಜನಪ್ರಿಯತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಕಿಗರ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿದ್ದು, ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್, ಇಳಿಜಾರು ಆಕಾರದಲ್ಲಿರುವ ರೂಫ್‌ರೈಲ್ಸ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಕೂಪೆ ಮಾದರಿಯಲ್ಲಿ ಗಮನಸೆಳೆಯುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಹಾಗೆಯೇ ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಸೆಂಟ್ರಲ್ ಎಸಿ ವೆಂಟ್ಸ್, ಇನ್ಪೋಟೈನ್‌ಮೆಂಟ್ ಸಿಸ್ಟಂ ನಿಯಂತ್ರಣ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್ ಸೌಲಭ್ಯವಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿ ಪಡಿಸಿದ ಹೊಚ್ಚ ಹೊಸ Renault Kiger

ಇದರೊಂದಿಗೆ ಹೊಸ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಆರ್ಮ್ ರೆಸ್ಟ್ ಕೆಳಭಾಗದಲ್ಲಿ 7.5 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಬಾಕ್ಸ್ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅತಿ ಹೆಚ್ಚು ಮೈಲೇಜ್ ಖಾತ್ರಿಪಡಿಸಿದ Renault Kiger

ಪ್ರೀಮಿಯಂ ಫೀಚರ್ಸ್‌ಗಳಾದ ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಸೌಲಭ್ಯಗಳು ಸಹ ಈ ಕಾರಿನಲ್ಲಿವೆ.

Article Published On: Monday, October 18, 2021, 19:10 [IST]
English summary
Renault revealed kiger compact suv mileage details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+