ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಭಾರತದಲ್ಲಿ ತಯಾರಿಸಿದ ಕಿಗರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಮಾರಾಟವನ್ನು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ರೆನಾಲ್ಟ್(Renault) ಕಂಪನಿಯು ಪ್ರಾರಂಭಿಸಿದೆ, ರೆನಾಲ್ಟ್ ಇಂಡಿಯಾ ಕಳೆದ ತಿಂಗಳು ದಕ್ಷಿಣ ಆಫ್ರಿಕಾದ ಮಾರುಕಟ್ಟೆಗೆ ಎಸ್‌ಯುವಿಯ ರಫ್ತುಗಳನ್ನು ಆರಂಭಿಸಿತು.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇದರಲ್ಲಿ ಬ್ರ್ಯಾಂಡ್ ಚೆನ್ನೈ ಬಂದರಿನಿಂದ ಮೊದಲ ಬ್ಯಾಚ್ 760 ಕಿಗರ್ ಎಸ್‌ಯುವಿಗಳನ್ನು ಕಳುಹಿಸಿತು. ನೇಪಾಳದ ನಂತರ ದಕ್ಷಿಣ ಆಫ್ರಿಕಾವು ಕಿಗರ್‌ಗೆ ಎರಡನೇ ರಫ್ತು ಮಾರುಕಟ್ಟೆಯಾಗಿದೆ. ಹೆಚ್ಚುವರಿಯಾಗಿ, ಕಾರು ತಯಾರಕರು ತನ್ನ ದಕ್ಷಿಣ ಆಫ್ರಿಕಾದ ವೆಬ್‌ಸೈಟ್‌ನಲ್ಲಿ ಈ ಕಿಗರ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಎಲ್ಲಾ ರೂಪಾಂತರಗಳು ಮತ್ತು ಬೆಲೆಗಳನ್ನು ಪಟ್ಟಿ ಮಾಡಿದ್ದಾರೆ. ವಿವರಗಳ ಪ್ರಕಾರ, ರೆನಾಲ್ಟ್ ಕಿಗರ್ ಅನ್ನು ಮೂರು ಟ್ರಿಮ್‌ಗಳಲ್ಲಿ ನೀಡುತ್ತದೆ. ಇದು ಲೈಫ್, ಜೆನ್ ಮತ್ತು ಇಂಟೆನ್ಸ್ ಎಂಬ ರೂಪಾಂತರಗಳಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳನ್ನು ಅವಲಂಬಿಸಿ ಏಳು ರೂಪಾಂತರಗಳಾಗಿ ವಿಂಗಡಿಸಲಾಗಿದೆ. ಪ್ರಸ್ತುತ ವಿನಿಮಯ ದರದ ಪ್ರಕಾರ ಕಿಗರ್‌ನ ಬೆಲೆ 199,900 ರ‍್ಯಾಂಡ್ ಮತ್ತು 289,900 ರ‍್ಯಾಂಡ್‌ಗಳ ನಡುವೆ ಇದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇನ್ನು ಈ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಜೆಚ್‍ಪಿ ಪವರ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ರೆನಾಲ್ಟ್ ಕಿಗರ್ ಕಾರು ಪ್ರತಿಸ್ಪರ್ಧಿಮಾದರಿಗಳಂತೆ ಹಲವಾರು ಆಕರ್ಷಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಕಿಗರ್ ಕಾರಿನಲ್ಲಿ ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್ ಮತ್ತು ರೂಫ್‌ರೈಲ್ಸ್ ಅನ್ನು ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇನ್ನು ಈ ಕಾರಿನಲ್ಲಿ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿದ್ದು ಕಾರಿನ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇದರೊಂದಿಗೆ ಈ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಅನ್ನು ಒಳಗೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇನ್ನು ರೆನಾಲ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಕಾಲಿಟ್ಟು 10 ವರ್ಷಗಳು ಪೂರ್ತಿಯಾಗಿವೆ. ಈ ರೆನಾಲ್ಟ್ ಕಿಗರ್ ಬಜೆಟ್ ಬೆಲೆಯೊಂದಿಗೆ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆದುಕೊಂಡಿದೆ. ಹೊಸ ಕಾರಿನ ಮೂಲಕ ರೆನಾಲ್ಟ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ರೆನಾಲ್ಟ್ ಕಿಗರ್ ಕಾಂಪ್ಯಾಕ್ಟ್ ಎಸ್‍ಯುವಿಯು ಮಾದರಿಯು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರು ಒಂದೇ ಪ್ಲ್ಯಾಟ್‌ಫಾರ್ಮ್ ಅಭಿವೃದ್ದಿಗೊಳ್ಳುವುದರ ವಿಭಿನ್ನ ಗ್ರಾಹಕರನ್ನು ಸೆಳೆಯಲ್ಲಿ ಯಶಸ್ವಿಯಾಗುತ್ತಿವೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇನ್ನು ಶೀಘ್ರದಲ್ಲೇ ಮೇಡ್ ಇನ್-ಇಂಡಿಯಾ ಕಿಗರ್ ಕಾರು ಸಾರ್ಕ್ ಪ್ರದೇಶದ ಇತರ ದೇಶಗಳಲ್ಲಿಯೂ ಲಭ್ಯವಾಗಲಿದೆ. ನೇಪಾಳದಲ್ಲಿ ರೆನಾಲ್ಟ್ ಕಿಗರ್ ಗ್ರಾಹಕರಿಗೆ ಬ್ರ್ಯಾಂಡ್‌ನ ಡೀಲರ್ - ಅಡ್ವಾನ್ಸ್ಡ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಲಭ್ಯವಾಗಲಿದೆ, ಇದು ವೈಶಾಲ್ ಗ್ರೂಪ್‌ನ ಒಂದು ಭಾಗವಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಇನ್ನು ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ನವೀಕೃತ ಕ್ವಿಡ್(Kwid) ಹ್ಯಾಚ್‌ಬ್ಯಾಕ್ ಮಾದರಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹೊಸ ಕ್ವಿಡ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.4.06 ಲಕ್ಷಗಳಾಗಿದೆ. ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಯಾಗಿದೆ. ಇದೀಗ ನವೀಕೃತ ಮಾದರಿಯು ಮತ್ತಷ್ಟು ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಈ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಕಂಪನಿಯು ಹೊಸ ಕಾರನ್ನು ಸದ್ಯ ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟ ಮಾಡುತ್ತಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ನವೀಕೃತ ಮಾದರಿಯನ್ನು ಈ ಹಿಂದಿನ ಬಿಎಸ್-6 ಮಾದರಿಯಲ್ಲಿಯೇ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ Kiger ಕಾರು ಮಾರಾಟ ಪ್ರಾರಂಭಿಸಿದ Renault

ಭಾರತದಿಂದಲೇ ರೆನಾಲ್ಟ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿವಿಧ ಕಾರು ಮಾದರಿಗಳ ರಫ್ತು ಕೈಗೊಳ್ಳುತ್ತಿದ್ದು, ಇದೀಗ ಕಿಗರ್ ಮಾದರಿಯೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಕಿಗರ್ ಮಾದರಿಯೇ ದಕ್ಷಿಣ ಆಫ್ರಿಕಾದಲ್ಲೂ ಮಾರಾಟವಾಗುತ್ತಿದೆ,

Most Read Articles

Kannada
English summary
Renault started to sale made in india kiger in south africa details
Story first published: Monday, September 13, 2021, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X