Just In
- 22 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಬಿಡುಗಡೆಯನ್ನು ಮುಂದೂಡಿದ ರೆನಾಲ್ಟ್
ಬಜೆಟ್ ಕಾರುಗಳ ಮಾರಾಟದಲ್ಲಿ ವಿವಿಧ ಕಾರು ಮಾದರಿಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ರೆನಾಲ್ಟ್ ಇಂಡಿಯಾ ಕಂಪನಿಯು ಟ್ರೈಬರ್ ಕಾರು ಮಾದರಿಯಲ್ಲಿನ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಸದ್ಯಕ್ಕೆ ಹೊಸ ಕಾರಿನಲ್ಲಿ ಟರ್ಬೊ ಪೆಟ್ರೋಲ್ ಆವೃತ್ತಿಯ ಬಿಡುಗಡೆಯನ್ನು ಕಾರಣಾಂತರಗಳಿಂದ ಮುಂದೂಡಿಕೆ ಮಾಡಿದೆ.

ಹೊಸ ಕಾರು ಮಾದರಿಗಾಗಿ ಸದ್ಯಕ್ಕೆ ನಿಸ್ಸಾನ್ ಜೊತೆಗೂಡಿ ಒಂದೇ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ವಿವಿಧ ಕಾರು ಮಾದರಿಗಳ ಉತ್ಪಾದನೆಗೆ ಚಾಲನೆ ನೀಡಿರುವ ರೆನಾಲ್ಟ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಲಾದ ಕಿಗರ್ ಮಾದರಿಯಲ್ಲಿ ಟರ್ಬೊ ಆವೃತ್ತಿಯನ್ನು ಪರಿಚಯಿಸಲಾದರೂ ಟ್ರೈಬರ್ ಕಾರು ಮಾದರಿಯಲ್ಲಿ ಹೊಸ ಎಂಜಿನ್ ಆಯ್ಕೆಯನ್ನು ಸದ್ಯಕ್ಕೆ ಬಿಡುಗಡೆ ಮಾಡದಿರಲೂ ಕಂಪನಿಯು ನಿರ್ಧರಿಸಿದೆ.

ಟ್ರೈಬರ್ ಕಾರಿನಲ್ಲಿ ಟರ್ಬೊ ಆವೃತ್ತಿಯ ಬಿಡುಗಡೆಯ ವಿಳಂಬಕ್ಕೆ ಪ್ರಮುಖ ಕಾರಣವೆಂದರೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವ ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಲ್ಲಿ ಒಂದೇ ಮಾದರಿಯ ಟರ್ಬೊ ಪೆಟ್ರೋಲ್ ಎಂಜಿನ್ ನೀಡಿರುವುದು ಟ್ರೈಬರ್ ಟರ್ಬೊ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ.

ಸದ್ಯಕ್ಕೆ ಹೊಸ ವಿನ್ಯಾಸ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಲ್ಲಿನ ಟರ್ಬೊ ಮಾದರಿಗಳ ಪೂರೈಕೆಯ ಮೇಲೆ ಹೆಚ್ಚಿನ ಗಮನಹರಿಸಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಯು ಹೊಸ ಕಾರುಗಳಲ್ಲಿನ ಟರ್ಬೊ ಮಾದರಿಯನ್ನು ಟ್ರೈಬರ್‌ನಲ್ಲಿ ಅಳವಡಿಸುವ ಯೋಜನೆಯನ್ನು ಮುಂದೂಡಿಕೆ ಮಾಡಿವೆ.

ಮಾಹಿತಿಗಳ ಪ್ರಕಾರ ರೆನಾಲ್ಟ್ ಕಂಪನಿಯು ಮುಂದಿನ ಒಂದು ವರ್ಷ ಸಂಪೂರ್ಣವಾಗಿ ಕಿಗರ್ ಕಾರಿನ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದು, 2022ರ ಟ್ರೈಬರ್ ಮಾದರಿಯಲ್ಲಿ ಹೊಸ ಟರ್ಬೊ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ. ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 72-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸದಾಗಿ ಟ್ರೈಬರ್ ಮಾದರಿಯಲ್ಲಿ ಜೋಡಣೆಗೆ ನಿರ್ಧರಿಸಲಾಗಿರುವ ಟರ್ಬೊ ಪೆಟ್ರೋಲ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 100 ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಟ್ರೈಬರ್ ಮಾದರಿಯಲ್ಲಿ ಟರ್ಬೊ ಮಾದರಿಗೂ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದರೂ ಕಿಗರ್ ಮತ್ತು ಮ್ಯಾಗ್ನೈಟ್ ಕಾರುಗಳಿಗಾಗಿ ಹೊಸ ಆವೃತ್ತಿಯ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗುತ್ತಿದ್ದು, 2022ರ ಆವೃತ್ತಿಯಲ್ಲಿ ಹೊಸ ಮಾದರಿಯ ಬಿಡುಗಡೆ ಖಚಿತವಾಗಿದೆ.
MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಇನ್ನು ಟ್ರೈಬರ್ ಕಾರು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡ ನಂತರ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.20 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 7.50 ಲಕ್ಷ ಬೆಲೆ ಪಡೆದುಕೊಂಡಿರುತ್ತದೆ. ಇದರಲ್ಲಿ ಎಎಂಟಿ ಮಾದರಿಯು ಆರಂಭಿಕವಾಗಿ ರೂ. 6.43 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ.7.50 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೈ ಎಂಡ್ ವೆರಿಯೆಂಟ್‌ನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್ ಸೌಲಭ್ಯಗಳನ್ನು ನೀಡಲಾಗಿದೆ.
MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಇದರೊಂದಿಗೆ ಬಜೆಟ್ ಬೆಲೆ ಎಂಪಿವಿ ಕಾರು ಮಾದರಿಯಲ್ಲೇ ವಿಶೇಷ ಎನ್ನಿಸಲಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಗ್ರಾಹಕರ ಆಕರ್ಷಕಣೆ ಕಾರಣವಾಗಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಂತ ಅತಿ ಕಡಿಮೆ ಬೆಲೆ ಜೊತೆಗೆ ಉತ್ತಮ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸುತ್ತಿದೆ.