ವಿನೂತನ ವಿನ್ಯಾಸದ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಹೊಸ ಕಾರುಗಳು

ಫ್ರೆಂಚ್ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ರೆನಾಲ್ಟ್ ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾರು ಮಾರಾಟ ಜಾಲ ಹೊಂದಿದ್ದು, ಕಂಪನಿಯು ಶೀಘ್ರದಲ್ಲೇ ತನ್ನ ಕಾರು ಮಾದರಿಗಳಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ವಿನೂತನ ವಿನ್ಯಾಸದ ಲೊಗೊ ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಗಲೇ ಹಲವು ಕಾರು ಕಂಪನಿಗಳು ತಮ್ಮ ನ್ಯೂ ಜನರೇಷನ್ ಕಾರು ಮಾದರಿಗಳಲ್ಲಿ ಹೊಸ ವಿನ್ಯಾಸದ ಲೊಗೊ ಪರಿಚಯಿಸುತ್ತಿದ್ದು, ರೆನಾಲ್ಟ್ ಕಂಪನಿಯು ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲೊಗೊ ವಿನ್ಯಾಸದಲ್ಲೇ ತುಸು ಬದಲಾವಣೆ ಪರಿಚಯಿಸುವ ಮೂಲಕ ನ್ಯೂ ಜನರೇಷನ್ ಗ್ರಾಹಕರನ್ನು ಸೆಳೆಯುವ ಯೋಜನೆಯಲ್ಲಿದೆ.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ವಾಹನ ಉತ್ಪಾದನೆಯಲ್ಲಿ ಸುಮಾರು 122 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ರೆನಾಲ್ಟ್ ಕಂಪನಿಯು ಇದುವರೆಗೆ ಸುಮಾರು 15 ಬಾರಿ ತನ್ನ ಬ್ರಾಂಡ್ ಲೊಗೊದಲ್ಲಿ ಬದಲಾವಣೆ ತಂದಿದ್ದು, ಪ್ರಸ್ತುತ ಕಾರುಗಳಲ್ಲಿ ಲೊಗೊ ವಿನ್ಯಾಸವನ್ನು ಕಳೆದ 2015ರಲ್ಲಿ ಬದಲಾವಣೆಗೊಳಿಸಲಾಗಿತ್ತು.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಇದೀಗ ಪ್ರಸ್ತುತ ಲೊಗೊದಲ್ಲಿ ಮತ್ತೆ ಬದಲಾವಣೆ ತರುತ್ತಿರುವ ರೆನಾಲ್ಟ್ ಕಂಪನಿಯು ವಜ್ರಾಕೃತಿಯಲ್ಲಿರುವ ಗ್ರಾಫಿಕ್ಸ್ ಲೊಗೊ ಪ್ರದರ್ಶನಗೊಳಿಸಿದ್ದು, ಹೊಸ ಲೊಗೊವನ್ನು ಕಳೆದ ವರ್ಷದ ಪ್ರದರ್ಶನಗೊಳಿಸಲಾಗಿದ್ದ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರುಗಳಲ್ಲಿ ಪರಿಚಯಿಸಿತ್ತು.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಆದರೆ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಪ್ರಕ್ರಿಯೆಯು ಕಾರಣಾಂತರಗಳಿಂದ ತಡವಾಗುತ್ತಿರುವುದಕ್ಕೆ ಹೊಸ ವಿನ್ಯಾಸದ ಲೊಗೊವನ್ನು ಡಾಸಿಯಾ ಎಸ್‌ಯುವಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಹೊಸ ಲೊಗೊ ಹೊಂದಿರುವ ಕಾರು ಮಾದರಿಯು 2022ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಡಾಸಿಯಾ ಕಾರಿನಲ್ಲಿ ಹೊಸ ಲೊಗೊ ಪರಿಚಯಿಸಿದ ನಂತರ ಹಂತ ಹಂತವಾಗಿ 2024ರ ವೇಳೆಗೆ ಎಲ್ಲಾ ವಾಹನಗಳಲ್ಲೂ ಹೊಸ ಲೊಗೊದೊಂದಿಗೆ ಉನ್ನತೀಕರಿಸಲಿದೆ.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

1899ರಲ್ಲಿ ಮೊದಲ ಬಾರಿಗೆ ವಾಹನ ಆರಂಭಿಸಿದ ಅವಧಿಯಿಂದಲೂ ನಿರಂತರವಾಗಿ ಹೊಸ ಉತ್ಪಾದನೆಯಲ್ಲಿನ ಬದಲಾವಣೆಯ ಜೊತೆಗೆ ಲೊಗೊ ವಿನ್ಯಾಸದಲ್ಲೂ ಬದಲಾವಣೆ ತಂದಿರುವ ರೆನಾಲ್ಟ್ ಕಂಪನಿಯು ಜಾಗತಿಕವಾಗಿ ಪ್ರಮುಖ ಬ್ರಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಸದ್ಯ ವಿಶ್ವಾದ್ಯಂತ 128 ದೇಶಗಳಲ್ಲಿ ಕಾರು ಮಾರಾಟ ಜಾಲ ಹೊಂದಿರುವ ರೆನಾಲ್ಟ್ ಕಂಪನಿಯು ನಿಸ್ಸಾನ್ ಕಂಪನಿಯೊಂದಿಗಿನ ಸಹಭಾಗಿತ್ವದ ನಂತರ ವಿಶ್ವದ ಮೂರನೇ ಅತಿ ದೊಡ್ಡ ಮೋಟಾರ್ ಕಂಪನಿಯಾಗಿ ಗುರುತಿಸಿಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ರೆನಾಲ್ಟ್ ಕಂಪನಿಯು ಕೇವಲ ಬಜೆಟ್ ಕಾರುಗಳನ್ನು ಮಾತ್ರವಲ್ಲ ಐಷಾರಾಮಿ ಕಾರುಗಳು, ಸ್ಪೋರ್ಟ್ ಕಾರುಗಳು, ವಾಣಿಜ್ಯ ವಾಹನಗಳು, ಮೋಟಾರ್‌ಸೈಕಲ್ ನಿರ್ಮಾಣದಲ್ಲೂ ಗುರುತಿಸಿಕೊಂಡಿದ್ದು, ಇದುವರೆಗೆ ಸಾವಿರಾರು ವಿವಿಧ ವಾಹನ ಮಾದರಿಗಳನ್ನು ನಿರ್ಮಾಣ ಮಾಡಿದೆ.

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಭಾರತದಲ್ಲಿ ಇತರೆ ಕಾರು ಕಂಪನಿಗಳಿಂತಲೂ ಕಡಿಮೆ ಪ್ರಮಾಣದ ಕಾರು ಮಾರಾಟ ಹೊಂದಿದ್ದರೂ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಹೊಂದಿರುವ ರೆನಾಲ್ಟ್ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳ ಮೂಲಕ ಇನ್ನಷ್ಟು ಬೇಡಿಕೆ ಪಡೆದುಕೊಳ್ಳಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಲೊಗೊದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ ರೆನಾಲ್ಟ್ ಕಾರುಗಳು

ಹೊಸ ಮಾದರಿಯ ವಾಹನಗಳಿಗೆ ಪೂರಕವಾಗಿ ಆಕರ್ಷಕ ವಿನ್ಯಾಸದ ಲೊಗೊ ರೆನಾಲ್ಟ್ ಕಾರುಗಳಿಗೆ ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದ್ದು, ಹೊಸ ಲೊಗೊ ಪ್ರೇರಿತ ಕಾರುಗಳು ಭಾರತದಲ್ಲಿ 2022ರ ಮಧ್ಯಂತರದಲ್ಲಿ ಖರೀದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

Most Read Articles

Kannada
English summary
Renault unveils new brand logo to be changed from 2022. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X