ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಮೂರನೇ ತಲೆಮಾರಿನ ಡಸ್ಟರ್ ಎಸ್‌ಯುವಿಯನ್ನು ಅಭಿವೃದ್ದಿ ಪಡಿಸುತ್ತಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‌ಯುವಿಯು ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಒರಟಾದ ವಿನ್ಯಾಸ ಮತ್ತು ಹೊಸ ಎಂಜಿನ್ ಅನ್ನು ಹೊಂದಿರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಎರಡನೇ ತಲೆಮಾರಿನ ಡಸ್ಟರ್ ಈಗಾಗಲೇ ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ. ಆದರೆ ರೆನಾಲ್ಟ್ ಪ್ರಸ್ತುತ ಭಾರತದಲ್ಲಿ ಮೊದಲ ತಲೆಮಾರಿನ ಡಸ್ಟರ್ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಇನ್ನು ಮೂರನೇ ತಲೆಮಾರಿನ ರೆನಾಲ್ಟ್/ಡೇಸಿಯಾ ಡಸ್ಟರ್ ಅಭಿವೃದ್ಧಿಯಲ್ಲಿದೆ. ಈ ಎಸ್‍ಯುವಿಯನ್ನು 2024 ರಲ್ಲಿ ಪರಿಚಯಿಸಲಾಗುವುದು ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ. ಹೊಸ ಮಾದರಿಯು ಕಾಸ್ಮೆಟಿಕ್ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ಪ್ರಮುಖ ಬದಲಾವಣೆಗಳನ್ನು ತರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಎರಡನೇ ತಲೆಮಾರಿನ ಡಸ್ಟರ್ ಬಿಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ನ್ಯೂ ಜನರೇಷನ್ ಡಸ್ಟರ್ ಎಸ್‌ಯುವಿ ರೆನಾಲ್ಟ್-ನಿಸ್ಸಾನ್ ಅಲೈಯನ್ಸ್‌ನ ಸಿಎಂಎಫ್-ಬಿ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಹೊಸ ಲೋಗನ್ ಮತ್ತು ಸ್ಯಾಂಡೆರೊಗೆ ಆಧಾರವಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಹೊಸ ಪ್ಲಾಟ್‌ಫಾರ್ಮ್ ಸುರಕ್ಷತೆ ಮತ್ತು ಚಾಲನೆಯ ಸಾಮರ್ಥ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ನೀಡುತ್ತದೆ. ಎಲೆಕ್ಟ್ರಿಫಿಕೇಷನ್ ಸೇರಿಸುವ ಆಯ್ಕೆಯನ್ನು ಸಹ ನೀಡುತ್ತದೆ. ನ್ಯೂ ಜನರೇಷನ್ ಡಸ್ಟರ್ ಹೈಬ್ರಿಡ್ ಪವರ್‌ಟ್ರೇನ್‌ಗೆ ಹೊಂದಿಕೊಳ್ಳುತ್ತದೆ. ಈ ಎಸ್‌ಯುವಿಯು ಹೊಸ ಇ-ಟೆಕ್ ಮಾದರಿಯ ಹೈಬ್ರಿಡ್ ಸೆಟಪ್ ಅನ್ನು ಸ್ವೀಕರಿಸುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇದನ್ನು ರೆನಾಲ್ಟ್ ಹೈಬ್ರಿಡ್ ಆವೃತ್ತಿಯಲ್ಲಿ ಬಳಸಿದ ಕ್ಲಿಯೊ ಮತ್ತು ಕ್ಯಾಪ್ಚರ್ ಅನ್ನು ಯುರೋಪ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು 1.6-ಲೀಟರ್ ಪೆಟ್ರೋಲ್ ಎಂಜಿನ್ ಬದಲಿಗೆ, ಹೊಸ ರೆನಾಲ್ಟ್ ಡಸ್ಟರ್ 1.8-ಲೀಟರ್ -ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಸ್ವೀಕರಿಸುತ್ತದೆ. ಇದು ಅಟ್ಕಿನ್ಸನ್ ಸೈಕಲ್ ಅನ್ನು ಬೆಂಬಲಿಸುತ್ತದೆ (ಟೊಯೋಟಾ ಹೈಬ್ರಿಡ್ ಕಾರುಗಳು ಬಳಸುತ್ತದೆ),

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇನ್ನು 1.6ಎಲ್ ಎಂಜಿನ್ ಗಿಂತ 1.8ಎಲ್ ಎಂಜಿನ್ ಡಸ್ಟರ್ ಗಾತ್ರಕ್ಕೆ ಹೆಚ್ಚು ಸೂಕ್ತ ಎಂದು ವರದಿ ಹೇಳುತ್ತದೆ. ಸಂಪೂರ್ಣ ಹೈಬ್ರಿಡ್ ಸೆಟ್ ಅನ್ನು ರೂಪಿಸಲು ಈ ಸಿಸ್ಟಂ ಅನು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಸಹ ಹೊಂದಿರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಈ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ವಿನ್ಯಾಸವು ಬಿಗ್‌ಸ್ಟರ್ ಎಸ್‌ಯುವಿ ಕೆನ್ಸಾಪ್ಟ್ ನಿಂದ ಸ್ಫೂರ್ತಿ ಪಡೆದಿದೆ, ಇದನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ಈ ಎಸ್‍ಯುವಿಯು ಅಗ್ರೇಸಿವ್ ಆಗಿ ಕಾಣುವ ಫುಲ್-ಅಗಲ ಗ್ರಿಲ್ ಮತ್ತು ಡಾಸಿಯ ವೈ-ಆಕಾರದ ಸಿಗ್ನೇಚರ್ ಹೆಡ್‌ಲೈಟ್‌ನ ಇತ್ತೀಚಿನ ಆವೃತ್ತಿಯನ್ನು ಹೊಂದಿರುತ್ತದೆ. ಇದು ಎಲ್ಇಡಿ ಲ್ಯಾಂಪ್ ಗಳನ್ನು ಪಡೆಯುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಯುರೋಪ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಭಾರತಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಮೊದಲ ವರ್ಷದ ಜನ್ ಡಸ್ಟರ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ನಮ್ಮ ಮಾರುಕಟ್ಟೆಯಲ್ಲಿ ನಿಲ್ಲಿಸಲಾಗುವುದು. ಮುಂದಿನ ಜನ್ ಮಾದರಿಯು 2023 ರಲ್ಲಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಮುಂಭಾಗದ ಬಂಪರ್‌ನಿಂದ ಚೌಕಾಕಾರವಾಗಿದೆ, ಇದು ಒಂದು ದೊಡ್ಡ ಸೆಂಟ್ರಲ್ ಗ್ರಿಲ್ ಅನ್ನು ಒಂದು ಜೋಡಿ ಲಂಬವಾದ ಏರ್ ಟೆಕ್ ಅನ್ನು ಹೊಂದಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ರೆನಾಲ್ಟ್ ಬ್ರ್ಯಾಂಡ್ ಡಸ್ಟರ್ ಎಸ್‍ಯುವಿಯನ್ನು ನವೀಕರಿಸಿ ಫೇಸ್‌ಲಿಫ್ಟ್ ಮಾದರಿಯನ್ನು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ, ಡೇಸಿಯಾ ಡಸ್ಟರ್ ಮಿಡ್-ಸೈಕಲ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿದೆ, ಆಧುನಿಕ ದಿನಗಳಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಕ್ಯಾಬಿನ್ ಒಳಗೆ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಅದೇ ರೀತಿ ಹೊರಭಾಗದ ವಿನ್ಯಾಸದಲ್ಲಿಯು ಕೂಡ ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ನವೀಕರಣದಿಂದ ಯುರೋಪಿನ ಮಾರುಕಟ್ಟೆಗಳಲ್ಲಿ ಸ್ಕೋಡಾ ಕರೋಕ್ ಮತ್ತು ಸೀಟ್ ಅಟೆಕಾ ಎಸ್‌ಯುವಿಗಳಿಗೆ ಪೈಪೋಟಿ ನೀಡಲು ಸಹಾಯ ಮಾಡುತ್ತದೆ. ಡೇಸಿಯಾ ಡಸ್ಟರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಹಲವು ಬಗೆಯ ಎಂಜಿನ್ ಆಯ್ಕೆಗಳನ್ನು ಹೊಂದಿವೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇದರಲ್ಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಟಿಸಿ 90 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 89 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ 1.3-ಲೀಟರ್ ಟಿಸಿ 130 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 128 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 1.3-ಲೀಟರ್ ಟಿಸಿ 150, ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 148 ಬಿಹೆ‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ರೆನಾಲ್ಟ್ ಡಸ್ಟರ್ ಎಸ್‍ಯುವಿಯು 2012ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಈ ಡಸ್ಟರ್ ಮಿಡ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಾರಂಭದಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು. ಡಸ್ಟರ್ ಎಸ್‍ಯುವಿಯು ಬಾರತದಲ್ಲಿ ಕಡಿಮೆ ಅವಧಿಯಲ್ಲಿ ಗ್ರಾಹಕರ ಗಮನಸೆಳೆಯಲು ಯಶಸ್ವಿಯಾಗಿತ್ತು. ರೆನಾಲ್ಟ್ ಡಸ್ಟರ್ 2014ರಲ್ಲಿ ಎಡಬ್ಲ್ಯೂಡಿ ರೂಪಾಂತರವನ್ನು ಪಡೆದುಕೊಂಡಿತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 2016ರಲ್ಲಿ ಮಿಡ್-ಸೈಕಲ್ ನವೀಕರಣವಾಗಿತ್ತು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್

ಇನ್ನು ಮೊದಲ ತಲೆಮಾರಿನ ಡಸ್ಟರ್ ಎಸ್‍ಯುವಿಯುನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಇತ್ತೀಚೆಗೆ ಅನಾವರಣಗೊಂಡ ಹೊಸ ತಲೆಮಾರಿನ ಡಸ್ಟರ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಯುರೋಪ್‌ಗೆ ಪಾದಾರ್ಪಣೆ ಮಾಡುವ ಮುನ್ನವೇ ಭಾರತಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಮುಂದಿನ ತಲೆಮಾರಿನ ಮಾದರಿಯು 2023 ರಲ್ಲಿ ಬರಬಹುದೆಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Renault working on new gen duster suv with hybrid powertrain details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X