ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

Maruti Suzuki ಕಂಪನಿಯು ಭಾರತದಲ್ಲಿ ದೇಶದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತದೆ. Maruti Suzuki ಕಂಪನಿಯ ಕಾರುಗಳು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಮಾರಾಟದಲ್ಲಿ ನಂಬರ್ 1 ಆಗಿವೆ. Maruti Suzuki ಕಂಪನಿಯು ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಕಾಂಪ್ಯಾಕ್ಟ್ ಎಸ್‌ಯುವಿಗಳವರೆಗೆ ಹಲವು ಶ್ರೇಣಿಯ ಕಾರುಗಳನ್ನು ಮಾರಾಟ ಮಾಡುತ್ತದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

ವಿಶ್ವಾಸಾರ್ಹ ಎಂಜಿನ್, ಹೆಚ್ಚಿನ ಮೈಲೇಜ್ ಹಾಗೂ ದೇಶದ ಎಲ್ಲಾ ರಾಜ್ಯಗಳಲ್ಲಿ ಹರಡಿರುವ ಸೇವಾ ನೆಟ್‌ವರ್ಕ್ ಕಾರಣಕ್ಕೆ Maruti Suzuki ಕಾರುಗಳು ಜನಪ್ರಿಯವಾಗಿವೆ. ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ Maruti Suzuki ಕಂಪನಿಯ ಪಾಲು 45% ಗಿಂತ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಗ್ರಾಹಕರು Maruti Suzuki ಕಾರುಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಆದರೆ ಸುರಕ್ಷತೆಯ ವಿಚಾರದಲ್ಲಿ Maruti Suzuki ಕಾರುಗಳು ನಿರಾಸೆ ಮೂಡಿಸುತ್ತವೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

ವಾಸ್ತವವಾಗಿ Maruti Suzuki ಕಂಪನಿಯ ಯಾವುದೇ ಕಾರು 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿಲ್ಲ. ಇತ್ತೀಚೆಗಷ್ಟೇ ಕ್ರಾಶ್ ಟೆಸ್ಟ್ ನಲ್ಲಿ ಪಾಲ್ಗೊಂಡಿದ್ದ Maruti Baleno ಕಾರಿನ ಸುರಕ್ಷತೆ ರೇಟಿಂಗ್ ಸಹ ಬೆಚ್ಚಿ ಬೀಳಿಸುವಂತಿವೆ. ಹೊಸ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಭಾಗವಹಿಸಿದ್ದ Maruti Suzuki ಕಂಪನಿಯ ಕಾರುಗಳು ಸುರಕ್ಷತೆಗಾಗಿ ಪಡೆದ ರೇಟಿಂಗ್ ಗಳೆಷ್ಟು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

1. Maruti Suzuki Alto - 0 ಸ್ಟಾರ್ ರೇಟಿಂಗ್

Alto ಅತಿ ಹೆಚ್ಚು ಮಾರಾಟವಾಗುವ Maruti Suzuki ಕಂಪನಿಯ ಸಣ್ಣ ಕಾರ್ ಆಗಿದೆ. ಈ ಕಾರು ಕೈಗೆಟುಕುವ ಬೆಲೆ ಹಾಗೂ ಅತ್ಯುತ್ತಮ ಮೈಲೇಜ್‌ನಿಂದ ಜನಪ್ರಿಯವಾಗಿದೆ. ಆದರೆ ಸುರಕ್ಷತೆಯ ವಿಷಯದಲ್ಲಿ Maruti Alto ಕಾರಿನ ರೇಟಿಂಗ್ ತುಂಬಾ ನಿರಾಶಾದಾಯಕವಾಗಿದೆ. ಸುರಕ್ಷತೆಗಾಗಿ ಕಾರುಗಳಿಗೆ ರೇಟಿಂಗ್ ನೀಡುವ ಏಜೆನ್ಸಿಯಾದ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ (ಎನ್‌ಸಿಎಪಿ) ಕ್ರ್ಯಾಶ್ ಟೆಸ್ಟ್ ನಲ್ಲಿ Alto ಕಾರಿಗೆ ಶೂನ್ಯ ರೇಟಿಂಗ್ ನೀಡಿದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

ವಯಸ್ಕರ ಸುರಕ್ಷತೆಗಾಗಿ ಈ ಕಾರು 17 ಅಂಕಗಳಿಗೆ 0 ಹಾಗೂ ಮಕ್ಕಳ ಸುರಕ್ಷತೆಗಾಗಿ 49 ಅಂಕಗಳಿಗೆ 17.57 ಅಂಕಗಳನ್ನು ಪಡೆದಿದೆ. Maruti Alto ಕಾರಿನ ರಚನೆಯು ಅಸಮತೋಲಿತವಾಗಿದ್ದು, ಅಪಘಾತವಾದಾಗ ಕಾರು ಉರುಳಬಹುದು ಎಂದು ಕಂಪನಿ ಒಪ್ಪಿಕೊಂಡಿದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

2. Maruti Suzuki WagonR - 2 ಸ್ಟಾರ್ ರೇಟಿಂಗ್

Alto ಕಾರಿನಂತೆ WagonR ಕಾರು ಸಹ ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತದೆ. ಈ ಟಾಲ್‌ಬಾಯ್ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸ್ಪೇಸ್ ಹೊಂದಿದೆ. ಆದರೆ ಸುರಕ್ಷತೆಯ ವಿಷಯದಲ್ಲಿ WagonR ಕಾರು ಗ್ರಾಹಕರನ್ನು ನಿರಾಶೆಗೊಳಿಸುತ್ತದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

2019 ರ ಜಿಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ Maruti WagonR ಕಾರು ಸುರಕ್ಷತೆಗಾಗಿ ಕೇವಲ 2 ಸ್ಟಾರ್‌ಗಳನ್ನು ಪಡೆದಿದೆ. ಇನ್ನು GNCAP ಸಂಸ್ಥೆಯು WagonR ಕಾರಿನ ಬಾಡಿ ದುರ್ಬಲವಾಗಿರುವುದರಿಂದ ಅಪಘಾತವಾದಾಗ ವಯಸ್ಕ ಪ್ರಯಾಣಿಕರ ಕಾಲುಗಳನ್ನು ರಕ್ಷಿಸಲು ಸಾಧ್ಯವಿಲ್ಲವೆಂದು ಹೇಳಿದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

3. Maruti Suzuki Baleno - 0 ಸ್ಟಾರ್ ರೇಟಿಂಗ್

Baleno, Maruti Suzuki ಕಂಪನಿಯ ಅತ್ಯುತ್ತಮ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಆದರೆ ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಕಾರಿನ ಸುರಕ್ಷತಾರೇಟಿಂಗ್ ತುಂಬಾ ಕಳಪೆಯಾಗಿದೆ. Baleno ಕಾರು ಈ ಕ್ರ್ಯಾಶ್‌ ಟೆಸ್ಟ್ ನಲ್ಲಿ 0 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ. ಈ ಕಾರು ವಯಸ್ಕರ ಸುರಕ್ಷತೆಗಾಗಿ 20.03%, ಮಕ್ಕಳ ಸುರಕ್ಷತೆಗಾಗಿ 17.06%, ಪಾದಚಾರಿ ಸುರಕ್ಷತೆಗಾಗಿ ಹಾಗೂ ರಸ್ತೆ ಬಳಕೆದಾರರ ಸುರಕ್ಷತೆಗಾಗಿ 64.06% ಹಾಗೂ ಸುರಕ್ಷತೆ ಸಹಾಯಕ ಪೆಟ್ಟಿಗೆಯಲ್ಲಿ 6.98% ರೇಟಿಂಗ್ ಪಡೆದಿದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

ಭಾರತದಲ್ಲಿ ಉತ್ಪಾದನೆಯಾದ Baleno ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗಿದೆ. ಲ್ಯಾಟಿನ್ NCAP ಸಂಸ್ಥೆಯು Baleno ಕಾರಿನ ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಮಾರ್ಜಿನಲ್ ವಿಪ್ಲ್ಯಾಶ್ ಪ್ರೊಟೆಕ್ಷನ್, ಸ್ಟ್ಯಾಂಡರ್ಡ್ ಸೈಡ್ ಬಾಡಿಯಲ್ಲಿ ನ್ಯೂನತೆಗಳನ್ನು ಕಂಡು ಹಿಡಿದಿದೆ. ಇದಲ್ಲದೆ ಈ ಕಾರು ಹೆಡ್ ಪ್ರೊಟೆಕ್ಷನ್ ಹಾಗೂ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಗಳನ್ನು ಸಹ ಹೊಂದಿಲ್ಲ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

4. Maruti Suzuki Swift - 0 ಸ್ಟಾರ್ ರೇಟಿಂಗ್

ಲ್ಯಾಟಿನ್ NCAP ಸಹ ಈ ವರ್ಷದ ಆಗಸ್ಟ್‌ನಲ್ಲಿ Maruti Suzuki ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ Swift ಕಾರ್ ಅನ್ನು ಪರೀಕ್ಷಿಸಿತ್ತು. ಈ ಪರೀಕ್ಷೆಯಲ್ಲಿ ಮೇಡ್ ಇನ್ ಇಂಡಿಯಾ Maruti Swift ಕಾರು 0 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಸುರಕ್ಷತೆಗಾಗಿ 0 ಸ್ಟಾರ್ ಪಡೆದ ಹಿನ್ನೆಲೆಯಲ್ಲಿ Swift ಕಾರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು. Swift ಕಾರು ವಯಸ್ಕರ ಸುರಕ್ಷತೆಗಾಗಿ 15.53% ಹಾಗೂ ಮಕ್ಕಳ ಸುರಕ್ಷತೆಗಾಗಿ 0% ರೇಟಿಂಗ್ ಪಡೆದಿದೆ.

ಕ್ರಾಶ್ ಟೆಸ್ಟ್'ನಲ್ಲಿ Maruti Suzuki ಕಾರುಗಳು ಪಡೆದ ರೇಟಿಂಗ್'ಗಳಿವು

5. Maruti S Presso - 0 ಸ್ಟಾರ್ ರೇಟಿಂಗ್

Maruti Suzuki ಕಂಪನಿಯ S Presso ಕಾರ್ ಅನ್ನು 2020 ರಲ್ಲಿ GNCAP ಕ್ರ್ಯಾಶ್ ಟೆಸ್ಟ್'ಗೆ ಒಳಪಡಿಸಲಾಗಿತ್ತು. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ S Presso ಕಾರು ಸುರಕ್ಷತೆಗಾಗಿ 0 ರೇಟಿಂಗ್ ಪಡೆದಿದೆ. GNCAP ಸಂಸ್ಥೆಯು ಭಾರತದಲ್ಲಿ ಮಾರಾಟವಾಗುವ S Presso ಮಾದರಿಯು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಮಾದರಿಗಿಂತ ಹೆಚ್ಚು ದುರ್ಬಲವಾಗಿದೆ ಎಂದು ಹೇಳಿದೆ. ಭಾರತದಲ್ಲಿ ಮಾರಾಟವಾಗುವ S Presso ಕಾರು ಕೇವಲ ಒಂದು ಏರ್‌ಬ್ಯಾಗ್‌ ಹೊಂದಿದೆ. ಆದರೆ ಸೀಟ್‌ಬೆಲ್ಟ್ ಪ್ರಿ-ಟೆನ್ಷನರ್ ಹಾಗೂ ಲೋಡ್ ಲಿಮಿಟರ್‌ನಂತಹ ಫೀಚರ್ ಗಳನ್ನು ಹೊಂದಿಲ್ಲ.

Most Read Articles

Kannada
English summary
Safety ratings obtained by maruti suzuki cars in ncap crash test details
Story first published: Saturday, October 30, 2021, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X