ದುಬಾರಿ ಬೆಲೆ ನಡುವೆಯೂ Skoda Kushaq ಕಂಪ್ಯಾಕ್ಟ್ ಎಸ್‌ಯುವಿ ಖರೀದಿಗೆ ಭರ್ಜರಿ ಬೇಡಿಕೆ
ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ಸ್ಕೋಡಾ ಕುಶಾಕ್(Skoda Kushaq) ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಗಾಗಿ ನೀರಿಕ್ಷೆಗೂ ಮೀರಿ ಬುಕ್ಕಿಂಗ್ ದಾಖಲಾಗುತ್ತಿದೆ.

ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕೋಡಾ ಕುಶಾಕ್ (Skoda Kushaq) ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 10 ಸಾವಿರ ಬುಕ್ಕಿಂಗ್ ಗುರಿತಲುಪಿದ್ದು, ಹೊಸ ಕಾರು ವಿತರಣೆ ಆರಂಭಿಸಿದ ನಂತರ ಇದುವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಯುನಿಟ್ ಗ್ರಾಹಕರ ಕೈಸೇರಿವೆ.

ಬುಕ್ಕಿಂಗ್ ಆಧಾರದ ಹೊಸ ಕುಶಾಕ್ ಕಾರು ವಿತರಣೆ ಆರಂಭಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರಿನೊಂದಿಗೆ ಮತ್ತಷ್ಟು ಹೊಸ ಮಾರಾಟ ಮಳಿಗೆಗಳಿಗೂ ಚಾಲನೆ ನೀಡುತ್ತಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕುಶಾಕ್ ಕಾರಿಗೆ ಇನ್ನು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ 150 ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಸ್ಕೋಡಾ ಕಂಪನಿಯು ಮುಂದಿನ ಎರಡು ವರ್ಷದೊಳಗೆ 75 ಹೊಸ ಮಾರಾಟ ಮಳಿಗೆಗಳೊಂದಿಗೆ 225 ಮಾರಾಟ ಮಳಿಗೆ ಹೊಂದುವ ಗುರಿಹೊಂದಿದ್ದು, ಹೊಸ ಮಾರಾಟ ಮಳಿಗೆಗಳು ಕುಶಾಕ್ ಸೇರಿದಂತೆ ವಿವಿಧ ಕಾರು ಮಾದರಿಗಳ ಮಾರಾಟ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗುತ್ತಿವೆ.

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರಿನ ಟಾಪ್ ಎಂಡ್ ಮಾದರಿಗೆ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಾಗಿದೆ.

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 10.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.59 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಹೊಸ ಕಾರಿನ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿವೆ.

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಇದರೊಂದಿಗೆ ಕಂಪನಿಯು ಕುಶಾಕ್ ಕಾರಿನ ಎಂಟ್ರಿ ಲೆವಲ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಹೊಸ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಆಕ್ಟಿವಾ ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸುತ್ತಿದೆ.

ಬಿಡುಗಡೆಯಾಗಲಿರುವ ಹೊಸ ಕುಶಾಕ್ ಆಕ್ಟಿವಾ ಆಟೋಮ್ಯಾಟಿಕ್ ಮಾದರಿಯು ರೂ. 12 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಅಪ್‌ಡೆಟ್ ಪಡೆದುಕೊಳ್ಳಲಿದೆ.

ಹೊಸ ಕಾರಿನಲ್ಲಿ ಸದ್ಯ ಆರಂಭಿಕ ಆಟೋಮ್ಯಾಟಿಕ್ ಮಾದರಿಯ ಬೆಲೆಯು ರೂ. 14.19 ಲಕ್ಷ ಬೆಲೆ ಹೊಂದಿದ್ದು, ಆರಂಭಿಕ ಮಾದರಿಗಳಲ್ಲೂ ಆಟೋಮ್ಯಾಟಿಕ್ ಪರಿಚಯಿಸುವಂತೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ.


Click it and Unblock the Notifications