Just In
- 11 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 12 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 13 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 14 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಚ್ಚ ಹೊಸ ಸ್ಲಾವಿಯಾ ಸೆಡಾನ್ ಕಾರಿನ ಟಿವಿ ಜಾಹೀರಾತು ಬಿಡುಗಡೆ ಮಾಡಿದ ಸ್ಕೋಡಾ
ಸ್ಕೋಡಾ ಕಂಪನಿಯು ತನ್ನ ಬಹುನೀರಿಕ್ಷಿತ ಸ್ಲಾವಿಯಾ ಸೆಡಾನ್ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಂಪನಿಯು ಸ್ಲಾವಿಯಾ ಕಾರಿನ ಟಿವಿ ಜಾಹೀರಾತು ಪ್ರಕಟಿಸಿದೆ.
ಹೊಸ ಸ್ಲಾವಿಯಾ ಕಾರು ಮಾದರಿಯನ್ನು ಸ್ಕೋಡಾ ಕಂಪನಿಯು ಫೋಕ್ಸ್ವ್ಯಾಗನ್ ಕಂಪನಿ ಜೊತೆಗಿನ ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಯೋಜನೆಯೊಂದಿಗೆ ಎರಡು ಕಂಪನಿಗಳು ಒಟ್ಟು ನಾಲ್ಕು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಯೋಜಿಸಿವೆ.
ಹೊಸ ಯೋಜನೆ ಅಡಿ ಎರಡು ಕಂಪನಿಗಳು ಈಗಾಗಲೇ ಕುಶಾಕ್, ಟೈಗುನ್ ಕಂಪ್ಯಾಕ್ಟ್ ಎಸ್ಯುವಿ ಬಿಡುಗಡೆ ಮಾಡಿದ್ದು, ಇದೀಗ ಮೂರನೇ ಕಾರು ಮಾದರಿಯಾಗಿ ಸ್ಲಾವಿಯಾ ಕಾರು ಬಿಡುಗಡೆ ಮಾಡುತ್ತಿವೆ.
ಇಂಡಿಯಾ 2.0 ಪ್ರೊಜೆಕ್ಟ್ ಯೋಜನೆ ಅಡಿಯಲ್ಲಿ ಕುಶಾಕ್ ನಂತರ ಟೈಗುನ್ ಬಿಡುಗಡೆ ಮಾಡಿದ್ದ ಸ್ಕೋಡಾ ಮತ್ತು ಫೋಕ್ಸ್ವ್ಯಾಗನ್ ಕಂಪನಿಗಳು ಇದೀಗ ಮೊದಲ ಹಂತವಾಗಿ ಸ್ಲಾವಿಯಾ ಹಾಗೂ ಸ್ಲಾವಿಯಾ ಬಿಡುಗಡೆಯಾದ ಕೆಲ ತಿಂಗಳಿನ ನಂತರ ವರ್ಚಸ್ ಎನ್ನುವ ಮತ್ತೊಂದು ಸೆಡಾನ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.
ಹೊಸ ಪ್ಲ್ಯಾಟ್ಫಾರ್ಮ್ ಆಧರಿಸಿರುವ ಸ್ಲಾವಿಯಾ ಕಾರು ರ್ಯಾಪಿಡ್ ಸೆಡಾನ್ ಬದಲಾಗಿ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಸ್ಲಾವಿಯಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಪ್ರಮುಖ ಮಧ್ಯಮ ಶ್ರೇಣಿಯಲ್ಲಿರುವ ಸೆಡಾನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ. ಸದ್ಯ ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿರುವ ಸ್ಕೋಡಾ ಕಂಪನಿಯು ಹೊಸ ಕಾರನ್ನು ಅಧಿಕೃತವಾಗಿ 2022ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಬಿಡುಗಡೆಯ ನಂತರ ರ್ಯಾಪಿಡ್ ಸೆಡಾನ್ ಕಾರು ಮಾರಾಟವು ಸ್ಥಗಿತಗೊಳ್ಳಲಿದೆ.
ರ್ಯಾಪಿಡ್ ಸೆಡಾನ್ ಮಾದರಿಯು ಮೊದಲ ಬಾರಿಗೆ ಬಿಡುಗಡೆಯ ನಂತರವು ಕೆಲವೇ ಕೆಲವು ಬದಲಾವಣೆಗಳ ಹೊರತಾಗಿ ಯಾವುದೇ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆಗೊಳಿಸದ ಸ್ಕೋಡಾ ಕಂಪನಿಯು ಹೊಸ ತಲೆಮಾರಿನ ರ್ಯಾಪಿಡ್ ಬದಲಾಗಿ ಹೊಸ ಪ್ಲ್ಯಾಟ್ಫಾರ್ಮ್ ಆಧರಿಸಿರುವ ಸ್ಲಾವಿಯಾ ಬಿಡುಗಡೆಗೆ ಮುಂದಾಗಿದೆ.
ಹೀಗಾಗಿ ರ್ಯಾಪಿಡ್ ಮಾದರಿಯಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ತರದೆ ಮಾರಾಟ ಮಾಡುತ್ತಿರುವ ಸ್ಕೋಡಾ ಕಂಪನಿಯು ಸ್ಲಾವಿಯಾ ಬಿಡುಗಡೆ ನಂತರ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ಸ್ಲಾವಿಯಾ ಕಾರು ವಿವಿಧ ಎಂಜಿನ್ ಆಯ್ಕೆ, ಪ್ರೀಮಿಯಂ ಫೀಚರ್ಸ್ಗಳು ಮತ್ತು ಗರಿಷ್ಠ ಮಟ್ಟದ ಸೇಫ್ಟಿ ಫೀಚರ್ಸ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.
ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ರ್ಯಾಪಿಡ್ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್ವೀಲ್ಹ್ ಬೆಸ್ ಪಡೆದುಕೊಂಡಿದೆ.
ಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್ಬೇಸ್ನೊಂದಿಗೆ 560 ಲೀಟರ್ ಬೂಟ್ಸ್ಪೆಸ್ ಹೊಂದಿದ್ದು, ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಯಷ್ಟೇ ಉದ್ದಳತೆಯೊಂದಿಗೆ ತುಸು ಅಗಲವಾಗಿರುವುದಲ್ಲದೆ 51 ಎಂಎಂ ನಷ್ಟು ಹೆಚ್ಚುವರಿ ವ್ಹೀಲ್ ಬೆಸ್ ಹಾಗೂ ಹೆಚ್ಚುವರಿ 15 ಲೀಟರ್ನಷ್ಟು ಬೂಟ್ಸ್ಪೆಸ್ ಹೊಂದಿದೆ.
ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ ಪ್ರಮುಖ ಮೂರು ವೆರಿಯೆಂಟ್ಗಳೊಂದಿಗೆ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟಿಎಸ್ಐ ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿರಲಿದೆ.
ಹೊಸ ಕಾರಿನ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ 113 ಬಿಹೆಚ್ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ನೀಡಲಾಗುತ್ತದೆ.
ಹೈ ಎಂಡ್ ಮಾದರಿಯಲ್ಲಿರುವ 1.5-ಲೀಟರ್ ಎಂಜಿನ್ 148 ಬಿಹೆಚ್ಪಿ ಪವರ್ ಮತ್ತು 250 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಗೇರ್ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.
ಹಾಗೆಯೇ ಹೊಸ ಕಾರು ಸಿಗ್ನಿಚೆರ್ ಬಟರ್ಪ್ಲೈ ಗ್ರಿಲ್, ಸ್ಲಿಕ್ ಹೆಡ್ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.
ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಮಾದರಿಯನ್ನು ನೆನಪಿಸಲಿದ್ದು, 10 ಇಂಚಿನ ಇನ್ಪೋಟೈನ್ಮೆಂಟ್, 8 ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್ರೂಫ್, ವೈರ್ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.
ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್ಬ್ಯಾಗ್ಗಳು ಇಎಸ್ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.
ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.