ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಸ್ಕೋಡಾ ಆಕ್ಟೀವಿಯಾ ಕಾರು
ಸ್ಕೋಡಾ ಕಂಪನಿಯು ತನ್ನ ನ್ಯೂ ಜನರೇಷನ್ ಆಕ್ಟೀವಿಯಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಪ್ರಮುಖ ಬದಲಾವಣೆಗಳೊಂದಿಗೆ ಇದೇ ತಿಂಗಳ 10ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಕರೋನಾ ಸೋಂಕಿನಿಂದ ಈ ಸ್ಕೊಡಾ ಆಕ್ಟೀವಿಯಾ ಕಾರಿನ ಬಿಡುಗಡೆಯು ತಡವಾಗಿದೆ. ಇನ್ನು ಸ್ಕೋಡಾ ಕಂಪನಿಯು ಔರಂಗಾಬಾದ್‌ನ ಘಟಕದಲ್ಲಿ ತನ್ನ ಆಕ್ಟೀವಿಯಾ ಕಾರಿನ ಉತ್ಪಾದನೆಯನ್ನು ಈಗಗಾಲೇ ಪ್ರಾರಂಭಿಸಿದೆ. ಈ ನಾಲ್ಕನೇ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿದೆ. ಇದರ ಇಂಟಿರಿಯರ್ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಸ್ಕೋಡಾ ಆಕ್ಟೀವಿಯಾದ ಹಿಂದಿನ ತಲೆಮಾರಿನಕಾರನ್ನು 2013ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದ್ದರು.

ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯೊಂದಿಗೆ ಉತ್ತಮ ಮಾರಾಟವನ್ನು ಕಂಡಿತು. ಇದರಿಂದ ಸ್ಕೋಡಾ ಆಕ್ಟೀವಿಯಾ ಕಾರನ್ನು ಹಲವು ಹೊಸ ಬದಲಾವಣೆಗಳೊಂದಿಗೆ ಭಾರತದಲ್ಲಿ ಮತ್ತೊಮ್ಮೆ ಬಿಡುಗಡೆಗೊಳಿಸುತ್ತಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಸ್ಕೋಡಾ ಆಕ್ಟೀವಿಯಾ ಸೆಡಾನ್‌ನ ಕೆಲವು ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕಾರಿನ ಒಳಭಾಗದ ಮತ್ತು ಹೊರಭಾಗದ ಮಾಹಿತಿಗಳು ಬಹಿರಂಗವಾಗಿವೆ. 2021ರ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ಹೊಸ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಹೊಸ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ (ವರ್ಚುವಲ್ ಕಾಕ್‌ಪಿಟ್ ಡಿಸ್ ಪ್ಲೇ) ಯನ್ನು ಹೊಂದಿದೆ.

ಈ ಹೊಸ ಕಾರಿನಲ್ಲಿ ಮಲ್ಟಿ-ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಸಹ ಪಡೆಯಲಿದೆ. ಇದು ಸ್ಟೀಯರಿಂಗ್ ವ್ಹೀಲ್‌ನ ಹಿಂದೆ ಪ್ಯಾಡಲ್ ಶಿಫ್ಟರ್‌ಗಳ ಜೊತೆಗೆ ವಿಡಬ್ಲ್ಯೂ ಗ್ರೂಪ್‌ನ ಹೊಸ ಶಿಫ್ಟ್-ಬೈ-ವೈರ್ ಗೇರ್ ಸೆಲೆಕ್ಟರ್ ಅನ್ನು ಸಹ ಪಡೆಯುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಸ್ಕೋಡಾ ಆಕ್ಟೀವಿಯಾ ಸೆಡಾನ್ ಇ-ಪಾರ್ಕಿಂಗ್ ಬ್ರೇಕ್ ಅನ್ನು ಪಡೆಯಲಿದೆ, ಜೊತೆಗೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಕ್ಯಾಂಟನ್ ಆಡಿಯೊ ಸಿಸ್ಟಮ್ ಮತ್ತು ಆಂಬಿಯೆಂಟ್ ಕ್ಯಾಬಿನ್ ಲೈಟಿಂಗ್ ಸಿಸ್ಟಮ್ನಂತಹ ಕೆಲವು ವೈಶಿಷ್ಟ್ಯಗಳನ್ನು ಹೊಂದಿರಿರುತ್ತದೆ.

ಹೊಸ ಆಕ್ಟೀವಿಯಾ ಕಾರಿನಲ್ಲಿ ವಿಡಬ್ಲ್ಯೂ ಗ್ರೂಪ್‌ನ 2.0 ಎಲ್ ಟಿಎಸ್‌ಐ ಟರ್ಬೋಚಾರ್ಜ್ಡ್ ಡೈರೆಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಸ್ಕೋಡಾ ಆಕ್ಟೀವಿಯಾ ಸೆಡಾನ್ ಸಿಗ್ನೇಚರ್ ಗ್ರಿಲ್ ಜೊತೆಗೆ ಬೈ-ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು (ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ) ಮತ್ತು ಮುಂಭಾಗದಲ್ಲಿ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಪಡೆಯುತ್ತದೆ. ಸೆಡಾನ್ ಕೂಪ್ ತರಹದ ಸ್ಲೋಪಿಂಗ್ ರೂಫ್ ಅನ್ನು ಹೊಂದಿದೆ.

ಮಲ್ಟಿಸ್ಪೋಕ್ ವಿನ್ಯಾಸದೊಂದಿಗೆ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ. ಹಿಂಭಾಗದಲ್ಲಿ ಡೈನಾಮಿಕ್ ಎಲ್ಇಡಿ ಟರ್ನ್ ಇಂಡಿಕೇಟರ್ ಗಳೊಂದಿಗೆ ಎಲ್ಇಡಿ ಟೈಲೈ ಗೇತ್ ಅನ್ನು ಪಡೆಯುತ್ತದೆ. ಇನ್ನು ಇದರಲ್ಲಿ 600 ಲೀಟರ್ ಗಳಷ್ತು ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಹೊಸ ಸ್ಕೋಡಾ ಆಕ್ಟೀವಿಯಾ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. ಈ ಹೊಸ ಸ್ಕೋಡಾ ಆಕ್ಟೀವಾ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಬಿಡುಗಡೆಯಾದ ಬಳಿಕ ಹ್ಯುಂಡೈ ಎಲಾಂಟ್ರಾ ಕಾರಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








