ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ದಕ್ಷಿಣ ಕೊರಿಯಾ ಕಾರು ಉತ್ಪಾದನಾ ಕಂಪನಿ ಸ್ಯಾಂಗ್‌ಯಾಂಗ್ ತನ್ನ ಮೊದಲ ಕೊರಂಡೊ ಇ-ಮೋಷನ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಈ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಸ್ಯಾಂಗ್‌ಯಾಂಗ್ ಕೊರಂಡೊ ಇ-ಮೋಷನ್ ಅನ್ನು ಮಹೀಂದ್ರಾ ಎಲೆಕ್ಟ್ರಿಕ್ ಸ್ಕೇಲೆಬಲ್ ಮತ್ತು ಮಾಡ್ಯುಲರ್ ಆರ್ಕಿಟೆಕ್ಚರ್ (ಮೆಸ್ಮಾ) ಪ್ಲಾಟ್‌ಫಾರ್ಮ್‌ನಡಿಯಲ್ಲಿ ತಯಾರಿಸಲಾಗಿದೆ. ಇದು ಭಾರತದಲ್ಲಿ ಬಿಡುಗಡೆಯಾಗಲಿರುವ ಇಎಕ್ಸ್‌ಯುವಿ 300 ಮಾದರಿಯಲ್ಲಿರುವ ಅದೇ ಪ್ಲಾಟ್‌ಫಾರ್ಮ್‌ ಆಗಿದೆ. ಮಾಡ್ಯುಲರ್ ಆರ್ಕಿಟೆಕ್ಚರ್ ಕಡಿಮೆ-ಸೆಟ್, ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಮಲ್ಟಿ-ಮೋಟಾರ್ ಸಂರಚನೆಗಳನ್ನು ಬೆಂಬಲಿಸುತ್ತದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ ಕಳೆದ ವರ್ಷ ಪರೀಕ್ಷೆಗೆ ಒಳಗಾಗಿದ್ದ ಸ್ಯಾಂಗ್‌ಯಾಂಗ್‌ನ ಟಿವೊಲಿ ಇವಿ ಮಾದರಿಗೂ ಆಧಾರವಾಗಿದೆ. ಕೊರಂಡೊ ಇ-ಮೋಷನ್ ಎಲೆಕ್ಟ್ರಿಕ್ ಎಸ್‍ಯುವಿಯು 61.5 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಸ್ಯಾಂಗ್‌ಯಾಂಗ್ ಕೊರಂಡೊ ಇ-ಮೋಷನ್ ಎಲೆಕ್ಟ್ರಿಕ್ ಎಸ್‍ಯುವಿಯು 322 ಕಿ,ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಅಳವಡಿಸುವ ಎಲೆಕ್ಟ್ರಿಕ್ ಮೋಟಾರ್ 190 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲ. ಆದರೆ ಸ್ಯಾಂಗ್‌ಯಾಂಗ್ "ಅತ್ಯುತ್ತಮ-ದರ್ಜೆಯ" ವೇಗವರ್ಧನೆ ಮತ್ತು 152 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿರಬಹುದು ಎಂದು ವರದಿಗಳಾಗಿದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಸ್ಯಾಂಗ್‌ಯಾಂಗ್ ಕೊರಂಡೊ ಇ-ಮೋಷನ್ ಎಲೆಕ್ಟ್ರಿಕ್ ಎಸ್‌ಯುವಿಯು ಮೊದಲ ನೋಟವು ಮಹೀಂದ್ರಾ ಇಎಕ್ಸ್‌ಯುವಿ 300 ಮಾದರಿಗೆ ಹೋಲುವಂತಿದೆ. ಈ ಇಎಕ್ಸ್‌ಯುವಿ 300 ಮಾದರಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಕೊರಂಡೊ ಇ-ಮೋಷನ್ ಇವಿ ಎಲೆಕ್ಟ್ರಿಕ್ ಎಸ್‌ಯುವಿಯು ಸಾಮಾನ್ಯ ಕೊರಂಡೊ ಎಸ್‌ಯುವಿಯಿಂದ ಪ್ರತ್ಯೇಕಿಸಲು ಸಹಾಯ ಮಾಡಲು ಕೆಲವು ಸ್ಟೈಲಿಂಗ್ ಟ್ವೀಕ್‌ಗಳನ್ನು ಪಡೆಯುತ್ತದೆ. ಇದರ ಮುಂಭಾಗ ಸುಗಮ ಮುಂಭಾಗದ ಬಂಪರ್ ವಿನ್ಯಾಸ ಮತ್ತು ಏರೋಡೈನಾಮಿಕ್ ವಿನ್ಯಾಸಕ್ಕೆ ಸಹಾಯ ಮಾಡಲು ಮುಂಭಾಗದ ಗ್ರಿಲ್ ಅನ್ನು ಒಳಗೊಂಡಿದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ವಿಭಿನ್ನವಾದ ಅಲಾಯ್ ವ್ಹೀಲ್ ಗಳು ಮತ್ತು ಬ್ಲೂ ಬಣ್ಣದ ಬಂಪರ್ ಅನ್ನು ಹೊಂದಿದೆ. ಹೊಸ ಸ್ಯಾಂಗ್‌ಯಾಂಗ್ ಕೊರಂಡೊ ಇ-ಮೋಷನ್ ಎಲೆಕ್ಟ್ರಿಕ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಸ್ಯಾಂಗ್‌ಯಾಂಗ್ ಕಂಪನಿ ಜೊತೆಗಿನ ಯೋಜನೆಗಳಿಂದ ಸತತ ನಷ್ಟ ಮತ್ತು ಕರೋನಾ ವೈರಸ್ ಪರಿಣಾಮ ನೆಲಕಚ್ಚಿರುವ ಆಟೋ ಉದ್ಯಮದಲ್ಲಿನ ಸಂಕಷ್ಟಕರ ಪರಿಸ್ಥಿತಿಯಿಂದ ಸಹಭಾಗಿತ್ವ ಯೋಜನೆಗೆ ಬ್ರೇಕ್ ಹಾಕಿರುವ ಮಹೀಂದ್ರಾ ಕಂಪನಿಯು ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ಹೂಡಿಕೆಯನ್ನು ಹಿಂಪಡೆಯಲು ನಿರ್ಧರಿಸಿತು.

ಅನಾವರಣವಾಯ್ತು ಅಧಿಕ ರೇಂಜ್ ಹೊಂದಿರುವ ಹೊಸ ಸ್ಯಾಂಗ್‌ಯಾಂಗ್ ಎಲೆಕ್ಟ್ರಿಕ್ ಎಸ್‍ಯುವಿ

ಸುಮಾರು 10 ವರ್ಷಗಳ ಹಿಂದೆ ಭಾರತದಲ್ಲಿ ಸ್ಯಾಂಗ್‌ಯಾಂಗ್ ಪರಿಚಯಿಸಿದ್ದ ಮಹೀಂದ್ರಾ ಕಂಪನಿಯು ಸತತ ನಷ್ಟವಾಗುತ್ತಿರುವ ಹಿನ್ನಲೆ ಹೊಸ ಹೂಡಿಕೆದಾರರತ್ತ ಮುಖ ಮಾಡಿದೆ. ಸ್ಯಾಂಗ್‌ಯಾಂಗ್ ಮಾರಾಟ ಒಪ್ಪಂದದ ಮಾತುಕತೆಗಳು ಇನ್ನೂ ನಡೆಯುತ್ತಿವೆ.

Most Read Articles

Kannada
English summary
SsangYong Korando E-motion Ev Revealed. Read In Kannada.
Story first published: Wednesday, June 16, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X