ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ಯುರೋಪಿನಲ್ಲಿ ಇಗ್ನಿಸ್ ಕಾರಿನ ರೆಡ್ ಮತ್ತು ವೈಟ್ ಎಂಬ ಸ್ಪೆಷಲ್ ಎಡಿಷನ್ ಮಾದರಿಗಳನ್ನು ಯುರೋಪಿನ ಮಾರುಕಟ್ಟೆಯಲ್ಲಿ ಪರಿಚಯಿಸಿದೆ, ಈ ಇಗ್ನಿಸ್ ರೆಡ್ ಮತ್ತು ವೈಟ್ ಕಾರುಗಳನ್ನು ಸ್ಪೇನ್ ನಲ್ಲಿ ಕೇವಲ 100 ಯೂನಿಟ್ ಗಳಿಗೆ ಸೀಮಿತಗೊಳಿಸಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಈ ಲಿಮಿಟೆಡ್ ಎಡಿಷನ್ ರೆಡ್ ಮತ್ತು ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ರೆಡ್ ಬಣ್ಣದ ಮತ್ತು ವೈಟ್ ಬಣ್ಣದ ಅಸ್ಸೆಂಟ್ ಗಳನ್ನು ಹೊಂದಿವೆ ಭಾರತ ಸೇರಿದಂತೆ ಜಾಗತಿಕವಾಗಿ ಲಭ್ಯವಿರುವ ಸ್ಟ್ಯಾಂಡರ್ಡ್ ಮಾದರಿಗಳಿಗಿಂತ ರೇರ್ ಮೀರರ್ಸ್ ಮತ್ತು ಸಿ-ಪಿಲ್ಲರ್‌ನಲ್ಲಿರುವ ಹಿಂಭಾಗದ ಗಿಲ್ಸ್ ಸಹ ಬಣ್ಣದ ಅಸ್ಸೆಂಟ್ ಗಳನ್ನು ಪಡೆದುಕೊಂಡಿದೆ. ಕಲರ್ ಥೀಮ್ ಕ್ಯಾಬಿನ್ ಒಳಗೆ ನಿರಂತರತೆಯನ್ನು ನಿರ್ವಹಿಸುತ್ತದೆ, ಈ ಇಗ್ನಿಸ್ ಲಿಮಿಟೆಡ್ ಎಡಿಷನ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಈ ಲಿಮಿಟೆಡ್ ಎಡಿಷನ್ ಸೆಂಟರ್ ಕನ್ಸೋಲ್‌ನ ಕೆಳ ಭಾಗದಲ್ಲಿ ಕೆಂಪು ಅಸ್ಸೆಂಟ್ ಗಳು, ಏರ್ ವೆಂಟ್‌ಗಳು ಅಥವಾ ಆರ್ಮ್‌ರೆಸ್ಟ್‌ಗಳು. ಸ್ಟೀಯರಿಂಗ್ ವೀಲ್ ಮಲ್ಟಿಫಂಕ್ಷನ್ ಕಂಟ್ರೋಲ್, ಬ್ಲೂಟೂತ್ ಮತ್ತು ಯುಎಸ್ ಬಿ ಕನೆಕ್ಟಿವಿಟಿಯನ್ನು ಇತರ ಫೀಚರ್ ಗಳ ನಡುವೆ ಪಡೆಯುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಲಿಮಿಟೆಡ್ ಎಡಿಷನ್ ಸುಜುಕಿ ಇಗ್ನಿಸ್ ರೆಡ್ ಮತ್ತು ವೈಟ್ 16 ಇಂಚಿನ ವ್ಹೀಲ್ ಗಳನ್ನು ಹೊಂದಿವೆ. ಈ ಲಿಮಿಟೆಡ್ ಎಡಿಷನ್ ನಲ್ಲಿ ಆಲ್-ವೀಲ್ ಡ್ರೈವ್ ಸಿಸ್ಟಂನೊಂದಿಗೆ ನೀಡಲಾಗಿದೆ. ಹುಡ್ ಅಡಿಯಲ್ಲಿ 1.2-ಲೀಟರ್ ಡ್ಯುಯಲ್ ಜೆಟ್ ಎಂಜಿನ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಇದು 83 ಎಚ್ ಪಿ ಪವರ್ ಮತ್ತು 107 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ವವನ್ನು ಹೊಂದಿದೆ. ಇಗ್ನಿಸ್ ರೆಡ್ & ವೈಟ್ ಆಲ್ ಗ್ರಿಪ್ ಆಟೋ ಆಲ್-ವೀಲ್ ಡ್ರೈವ್ ನೊಂದಿಗೆ ಕೂಡ ಲಭ್ಯವಿದೆ

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಇಗ್ನಿಸ್ ಫೇಸ್‌ಲಿಫ್ಟ್ ಕಾರನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಮಾರುತಿ ಸುಜುಕಿ ಕಂಫನಿಯು ಇಗ್ನಿಸ್ ಕಾರನ್ನು ಭಾರತದಲ್ಲಿ ನೆಕ್ಸಾ ಪ್ರೀಮಿಯಂ ಡೀಲರ್ ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಮಾರುತಿ ಇಗ್ನಿಸ್ ಕಾರನ್ನು ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆಯಾದ ಆರಂಭದಲ್ಲಿ ಇಗ್ನಿಸ್ ಕಾರು ಬಲೆನೊ ಹ್ಯಾಚ್‌ಬ್ಯಾಕ್‌ನಷ್ಟು ದೊಡ್ಡ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ನಂತರದ ದಿನಗಳಲ್ಲಿ ಇಗ್ನಿಸ್ ಫೇಸ್‌ಲಿಫ್ಟ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿತು.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಇಗ್ನಿಸ್ ಕಾರು ಸಿಲ್ಕಿ ಸಿಲ್ವರ್, ಗ್ಲಿಸ್ಟನಿಂಗ್ ಗ್ರೇ, ಪರ್ಲ್ ವೈಟ್, ಲ್ಯೂಸೆಂಟ್ ಆರೆಂಜ್, ಲ್ಯೂಸೆಂಟ್ ಆರೆಂಜ್ ವಿಥ್ ಬ್ಲ್ಯಾಕ್ ರೂಫ್, ಟರ್ಕಿಷ್ ಬ್ಲೂ, ನೆಕ್ಸಾ ಬ್ಲೂ, ಬ್ಲ್ಯಾಕ್ ರೂಫ್ ನೊಂದಿಗೆ ನೆಕ್ಸಾ ಬ್ಲೂ, ಮತ್ತು ಸಿಲ್ವರ್ ರೂಫ್ ನೊಂದಿಗೆ ನೆಕ್ಸಾ ಬ್ಲೂ ಬಣ್ಣಗಳ ಆಯ್ಜೆಯಲ್ಲಿ ಲಭ್ಯವಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ತಿಂಗಳಿಗೊಮ್ಮೆ ಮಾರುತಿ ಇಗ್ನಿಸ್ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಮಾರುತಿ ಸುಜುಕಿ ಕಂಪನಿಯು ಇಗ್ನಿಸ್ ಹ್ಯಾಚ್‌ಬ್ಯಾಕ್‌ ಕಾರಿನ ಜೆಟ್ಟಾ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಸ್ಮಾರ್ಟ್‌ಪ್ಲೇ ಇನ್ಫೋಟೇನ್‌ಮೆಂಟ್ ಸಿಸ್ಟಂನೊಂದಿಗೆ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಿತು.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಇಗ್ನಿಸ್ ಕಾರನ್ನು ಸಿಗ್ಮಾ, ಡೆಲ್ಟಾ, ಜೆಟ್ಟಾ ಮತ್ತು ಆಲ್ಫಾ ಎಂಬ ನಾಲ್ಕು ರೂಪಾಂತರಗಳಲ್ಲಿ ಮಾರಾಟ ಮಾಡಲಾತ್ತದೆ. ಇಗ್ನಿಸ್ ನೆಕ್ಸಾ ಶೋರೂಂನಿಂದ ಮಾರಾಟವಾದ ಮೊದಲ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಈ ಮಾರುತಿ ಸುಜುಕಿ ಇಗ್ನಿಸ್ ಫೇಸ್‌ಲಿಫ್ಟ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್-ಇಬಿಡಿ, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಡ್ರೈವರ್ ಸೇಫ್ಟಿ ಅಲರ್ಟ್ ಗಳನ್ನು ನೀಡಲಾಗಿದೆ. ಫೇಸ್‌ಲಿಫ್ಟ್ ಕಾರಿನಲ್ಲಿ ಲೈವ್ ಟ್ರಾಫಿಕ್, ವಾಯ್ಸ್ ರೆಕಗ್ನಿಷನ್, ವೆಹಿಕಲ್ ಇನ್ಫಾರ್ಮೆಷನ್ ಅಲರ್ಟ್ ನಂತಹ ನೂತನ ಫೀಚರ್ ಗಳನ್ನು ನೀಡಲಾಗಿದೆ. ಟ್ ಆಧಾರಿತ ಹ್ಯಾಚ್‍‍ಬ್ಯಾಕ್‍‍ಗಳಿಂದಾಗಿ ಮಾರುತಿ ಸುಜುಕಿ ಕಂಪನಿಯು ಹೆಚ್ಚು ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಇಗ್ನಿಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕಂಪನಿಯ ಹ್ಯಾಚ್‍‍ಬ್ಯಾಕ್‍ಗಳಿಗೆ ಪೈಪೋಟಿ ನೀಡುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಬಹುನಿರೀಕ್ಷಿತ ನ್ಯೂ ಜನರೇಷನ್ ಸೆಲೆರಿಯೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2021ರ ಮಾರುತಿ ಸೆಲೆರಿಯೊ ಮಾದರಿಯು ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2014ರಲ್ಲಿ ಬಿಡುಗಡೆಗೊಳಿಸಿದರು. ಆದರೆ ಇತರ ಮಾದರಿಗಳ ಮಾದರಿಯಂತೆ ದೊಡ್ಡ ಯಶ್ವಸಿಯನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಹೊಸ ವಿನ್ಯಾಸದಲ್ಲಿ ಸೆಲೆರಿಯೊ ಕಾರನ್ನು ಮಾರುತಿ ಸುಜುಕಿ ಕಂಪನಿ ಬಿಡುಗಡೆಗೊಳಿಸಲು ಮುಂದಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ Ignis ಲಿಮಿಟೆಡ್ ಎಡಿಷನ್ ಪರಿಚಯಿಸಿದ Suzuki

ಇನ್ನು ಮಾರುತಿ ಸುಜುಕಿ ಇಗ್ನಿಸ್ ಭಾರತದಲ್ಲಿ ಶೀಘ್ರದಲ್ಲೇ ಫೇಸ್ ಲಿಫ್ಟ್ ಆವೃತ್ತಿಯನ್ನು ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಮಾದರಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,5.02 ಲಕ್ಷಗಳಾಗಿದೆ. ಸುಜುಕಿ ಇಗ್ನಿಸ್ ರೆಡ್ ಮತ್ತು ವೈಟ್ ಎಡಿಷನ್ ಕೇವಲ 100 ಯುನಿಟ್ ಗಳಿಗೆ ಸೀಮಿತಗೊಳಿಸಲಾಗಿದೆ, ಇದನ್ನು ಯುರೋಪಿಯನ್ ಮಾರುಕಟ್ಟೆಗಳಿಗೆ ಪರಿಚಯಿಸಲಾಗಿದೆ. ಮಾರುತಿ ಇದನ್ನು ಭಾರತದಲ್ಲೂ ತರಲು ಯೋಜಿಸುತ್ತಿದೆಯೇ ಎಂಬುದಕ್ಕೆ ಇನ್ನೂ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ,

Most Read Articles

Kannada
English summary
Suzuki introduced the ignis red and white limited edition details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X