ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಸುಜುಕಿ ಜಿಮ್ನಿ ಹಲವು ದಶಕಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಐಕಾನಿಲ್ ಆಫ್-ರೋಡರ್ ಆಗಿದೆ. ಸುಜುಕಿ ಜಿಮ್ನಿ ಮಿನಿ ಎಸ್‍ಯುವಿಯ ಪ್ರಸ್ತುತ ಮಾದರಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಮುಂದಿನ ವರ್ಷದ ಆರಂಭದಲ್ಲಿ ಜಿಮ್ನಿ ಭಾರತದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಗಳಿದೆ. ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಡೋರಿನ ಮಾದರಿಗಳನ್ನು ಬಿಡುಗಡೆಗೊಳಿಸಬಹುದು. ಇನ್ನು ಜಪಾನ್ ವಾಹನ ತಯಾರಕರಾದ ಸುಜುಕಿ ತನ್ನ ಜಿಮ್ನಿ ಮಿನಿ ಎಸ್‍ಯುವಿಯ ಲೈಟ್ ಮಾದರಿಯನ್ನು ಪರಿಚಯಿಸಿದ್ದಾರೆ. ಆದರೆ ಈ ಮಾದರಿಯು ಪ್ರಸ್ತುತ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಆಸ್ಟ್ರೇಲಿಯಾದಲ್ಲಿ ಭರ್ಜರಿ ಬೇಡಿಕೆಯನ್ನು ಕಂಡು ಈ ಸುಜುಕಿ ಜಿಮ್ನಿ ಲೈಟ್‌ನ ಲೈಟ್‌ನ ವ್ಯಾಪ್ತಿಯನ್ನು ವಿಸ್ತರಿಸಬಹುದು. ಪ್ರಸ್ತುತ ಇದರ ಬೆಲೆ ಸುಮಾರು ರೂ.16 ಲಕ್ಷಗಳಾಗಿದೆ. ಲೈಟ್ ವೆರಿಯೆಂಟ್ ಮಾದರಿಯ ಬೆಲೆಯನ್ನು ರೂ.12 ಅಥವಾ ರೂ.13 ಲಕ್ಷಕ್ಕೆ ಇಳಿಸಬಹುದು.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ನಮ್ಮ ಹೆಚ್ಚು ಬೇಡಿಕೆಯಿರುವ ವಾಹನಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಈ ಹೊಸ ಜಿಮ್ನಿ ಲೈಟ್ ವೆರಿಯೆಂಟ್ ಅನ್ನು ಪರಿಚಯಿಸಲಾಗಿದೆ ಎಂದು ಸುಜುಕಿಯ ಆಸ್ಟ್ರೇಲಿಯಾ ವಿಭಾಗ ಹೇಳಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಸುಜುಕಿ ಜಿಮ್ನಿ ಲೈಟ್ ಅನ್ನು ಜಪಾನ್‌ನಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಡೌನ್ ಅಂಡರ್ ಸಾಗಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಉತ್ತಮ ಬೇಡಿಕೆ ಇರುವುದರಿಂದ ಜಿಮ್ನಿ ಲೈಟ್‌ನ ವ್ಯಾಪ್ತಿಯನ್ನು ಇತರ ಮಾರುಕಟ್ಟೆಗಳಿಗೂ ವಿಸ್ತರಿಸಬಹುದು.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಈ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ವೈಟಿಂಗ್ ಪಿರೇಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೆಸರೇ ಸೂಚಿಸುವಂತೆ, ಹೊಸ 'ಲೈಟ್' ಮಾದರಿಯು ಹಗುರವಾದ ವೈಶಿಷ್ಟ್ಯಗಳ ಪಟ್ಟಿಯನ್ನು ಹೊಂದಿರುತ್ತದೆ. ಈ ಜಿಮ್ನಿ ಲೈಟ್‌ನ ಹೊರಭಾಗದಲ್ಲಿನ ಬದಲಾವಣೆಗಳಲ್ಲಿ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಗ್ ಲ್ಯಾಂಪ್ ಗಳು ಹಾಗೂ ಪ್ಲಾಸ್ಟಿಕ್-ವಿನ್ಯಾಸ ಒಆರ್ವಿಎಂ ಕವರ್‌ಗಳು ಸೇರಿವೆ

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಇನ್ನು ಈ ಹೊಸ ಸುಜುಕಿ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ನಲ್ಲಿ ಅಲಾಯ್ ವ್ಹೀಲ್ ಗಳನ್ನು ಹೊಸ 15 ಇಂಚಿನ ಸ್ಟೀಲ್ ರಿಮ್‌ಗಳಿಂದ ಬದಲಾಯಿಸಲಾಗಿದೆ. ಇದು ಪ್ರಸ್ತುತ ಜಿಮ್ನಿಯಲ್ಲಿ ಲಭ್ಯವಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಬದಲಿಗೆ ಮೂಲ ರೇಡಿಯೋ/ಸಿಡಿ ಪ್ಲೇಯರ್ ಅನ್ನು ಹೊಂದಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಈ ಹೊಸ ಸುಜುಕಿ ಜಿಮ್ನಿ ಲೈಟ್ ಬೇಸ್ ವೆರಿಯೆಂಟ್ ಮ್ಯಾಕನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಇದರಲ್ಲಿ 1.5-ಲೀಟರ್ ನಾಲ್ಕು ಸಿಲಿಂಡರ್ ಕೆ-ಸೀರಿಸ್ ಇನ್-ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸ್ಟ್ಯಾಂಡರ್ಡ್‌ನಂತೆ ಜೋಡಿಸಲಾಗಿದ್ದು, ನಾಲ್ಕು-ಸ್ಪೀಡ್ ಟಾರ್ಕ್ ಕರ್ನವಾಟರ್ ಯುನಿಟ್ ಆಯ್ಕೆಯನ್ನು ಹೊಂದಿದೆ.

ಕಡಿಮೆ ಬೆಲೆಯ ಸುಜುಕಿ ಜಿಮ್ನಿ ಲೈಟ್ ಮಿನಿ ಎಸ್‍ಯುವಿಯ ವಿಶೇಷತೆಗಳು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಜಿಮ್ನಿ ಆಫ್-ರೋಡರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಮಾರುತಿ ಸುಜುಕಿ ಜಿಮ್ನಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಆಫ್-ರೋಡ್ ಎಸ್‍ಯುವಿಯಾಗಿದೆ.

Most Read Articles

Kannada
English summary
New Suzuki Jimny Lite Debuts, Price And Features Dropped. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X