ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಮತ್ತು ಭಾರತೀಯ ಮಾರುಕಟ್ಟೆಗಾಗಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಜಪಾನೀಸ್ ಬ್ರ್ಯಾಂಡ್‌ನ ಮುಂದಿನ ದೊಡ್ಡ ಮಾದರಿಯು ಹೊಸ ಎಸ್-ಕ್ರಾಸ್ ಆಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಹೊಸ ಎಸ್-ಕ್ರಾಸ್ ಕಾರು ಇದೇ ತಿಂಗಳ 25 ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. 2022ರ ಸುಜುಕಿ ಎಸ್-ಕ್ರಾಸ್ ಕಾರಿನ ಸ್ಪೈ ಚಿತ್ರಗಳು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಈ ಸ್ಪೈ ಚಿತ್ರಗಳು 2022ರ ಸುಜುಕಿ ಎಸ್-ಕ್ರಾಸ್ ಕ್ರಾಸ್‌ಒವರ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬಹಿರಂಗಪಡಿಸುತ್ತವೆ. ಇತ್ತೀಚಿನ ಚಿತ್ರಗಳಲ್ಲಿ ಕಾರಿನ ಮುಂಭಾಗ, ಅಡ್ಡ ಮತ್ತು ಹಿಂಭಾಗದ ಪ್ರೊಫೈಲ್ ಮಾಹಿತಿಗಳನ್ನು ಬಹಿರಂಗಪಡಿಸುತ್ತದೆ. ಹೊಸ ಮಾದರಿಯು ಮೊದಲು ಯುರೋಪ್‌ನಲ್ಲಿ ಮಾರಾಟವಾಗಲಿದೆ, ಏಕೆಂದರೆ ಡೀಲರ್ ಗಳಿಗೆ ರವಾನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

2022ರ ಸುಜುಕಿ ಎಸ್-ಕ್ರಾಸ್ ಕೂಡ ಮುಂದಿನ 1-2 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. 2022ರ ಸುಜುಕಿ ಎಸ್-ಕ್ರಾಸ್ ಎಲ್ಲಾ ಹೊಸ ವಿನ್ಯಾಸದೊಂದಿಗೆ ಬರಲಿದೆ ಎಂದು ಸ್ಪೈ ಚಿತ್ರಗಳು ಖಚಿತಪಡಿಸುತ್ತವೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಹೊರಹೋಗುವ ಮಾದರಿಯಲ್ಲಿ ಕ್ರಾಸ್ಒವರ್ ನಿಲುವಿಗೆ ವಿರುದ್ಧವಾಗಿ ಇದು ನೇರವಾದ ಎಸ್‍ಯುವಿ-ಇಶ್ ಪ್ರೊಫೈಲ್ ಅನ್ನು ಪಡೆಯುತ್ತದೆ. ಸೈಡ್ ಮತ್ತು ಹಿಂಬದಿಯ ಪ್ರೊಫೈಲ್ ಇದಕ್ಕೆ ಕ್ರಾಸ್ಒವರ್ ಶೈಲಿಯನ್ನು ನೀಡುತ್ತದೆ, ಏಕೆಂದರೆ ಇದು ಫ್ಲೋಟಿಂಗ್ ರೂಫ್ ಮತ್ತು ಹಿಂಬದಿಯನ್ನು ಹೊಂದಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಈ 2022ರ ಸುಜುಕಿ ಎಸ್-ಕ್ರಾಸ್ ಕಾರು ಹೊಸದಾಗಿ ವಿನ್ಯಾಸಗೊಳಿಸಿದ ಮುಂಭಾಗದ ಫಾಸಿಕವನ್ನು ಹೊಂದಿದ್ದು, ಹೊಸ ಗ್ರಿಲ್ ಅನ್ನು ಹೊಂದಿದೆ. ಇದು ಹೊಸ ಟ್ರಿಪಲ್-ಬೀಮ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ (ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು) ಪಡೆಯುತ್ತದೆ. ಈ ಹೆಡ್‌ಲೈಟ್ ಕ್ಲಸ್ಟರ್‌ಗಳನ್ನು ಸಂಪರ್ಕಿಸುವ ದಪ್ಪ ಕ್ರೋಮ್ ಬಾರ್ ಇದೆ. ಕ್ರಾಸ್ಒವರ್ ಹೊಸ ಫಾಗ್ ಲ್ಯಾಂಪ್ ಮತ್ತು ಹೊಸ ಲೋ ಏರ್-ಡ್ಯಾಮ್ ಅನ್ನು ಅಳವಡಿಸುವ ಮಸ್ಕಲರ್ ಮುಂಭಾಗದ ಬಂಪರ್ ಅನ್ನು ಒಳಗೊಂಡಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಮುಂಭಾಗದಲ್ಲಿ ಸಿಲ್ವರ್-ಫಿನಿಶ್ಡ್ ಸ್ಕಿಡ್ ಪ್ಲೇಟ್ ಮತ್ತು ಮುಂಭಾಗದ ಗ್ರಿಲ್, ಏರ್ ಡ್ಯಾಮ್‌ಗಳು ಮತ್ತು ಪ್ಲಾಸ್ಟಿಕ್ ಕ್ಲಾಡಿಂಗ್‌ನಲ್ಲಿ ಬ್ಲ್ಯಾಕ್ಡ್-ಔಟ್ ಟ್ರೀಟ್‌ಮೆಂಟ್ ಸಹ ಗೋಚರಿಸುತ್ತದೆ. ಇನ್ನು ORVM ಗಳನ್ನು ಈಗ ವಿಂಡೋಗಳ ಬದಲಿಗೆ ಸೈಡ್ ಪ್ಯಾನೆಲ್‌ಗಳಲ್ಲಿ ಇರಿಸಲಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

2022ರ ಸುಜುಕಿ ಎಸ್-ಕ್ರಾಸ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಹೊಸ ಮಾದರಿಯು ಉತ್ತಮ ಗುಣಮಟ್ಟದ ಮತ್ತು ವೈಶಿಷ್ಟ್ಯ-ಲೋಡ್ ಕ್ಯಾಬಿನ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ಮಾದರಿಯು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಕಾರ್ ತಂತ್ರಜ್ಞಾನ, ಸುಧಾರಿತ ವೈಶಿಷ್ಟ್ಯಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಪಡೆಯಬಹುದು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಕಾರಿನಲ್ಲಿ ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಅನ್ನು ಸಹ ಪಡೆಯಬಹುದು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಈ ಹೊಸ ಎಸ್-ಕ್ರಾಸ್ ಕಾರು HEARTECT ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿರಲಿದೆ ಎಂದು ವರದಿಯಾಗಿದೆ. ಕ್ರಾಸ್ಒವರ್ ಸುಮಾರು 4.3 ಮೀಟರ್ ಉದ್ದವನ್ನು ಅಳೆಯಬಹುದು. ಹೊಸ ಮಾದರಿಯು ಎಲ್ಲಾ ಹೊಸ ಎಂಜಿನ್ ಆಯ್ಕೆಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಸುಜುಕಿಯು ಎಸ್-ಕ್ರಾಸ್ ಹೈಬ್ರಿಡ್ ತಂತ್ರಜ್ಞಾನದ ವಿಷಯದಲ್ಲಿ ಪ್ರಮುಖ ಸುಧಾರಣೆಗಳನ್ನು ಪಡೆಯಬಹುದು. ಇದು ಹೈಬ್ರಿಡ್ ತಂತ್ರಜ್ಞಾನದ ವಿಷಯದಲ್ಲಿ ಪ್ರಮುಖ ಸುಧಾರಣೆಗಳನ್ನು ಪಡೆಯುತ್ತದೆ. ಯುರೋಪಿಯನ್ ಎಮಿಷನ್ ಮಾನದಂಡಗಳನ್ನು ಸಾಧಿಸಲು ಹೊಸ ಮಾದರಿಯು ಲೈಟ್ ಹೈಬ್ರಿಡ್ ತಂತ್ರಜ್ಞಾನವನ್ನು ಪಡೆಯುತ್ತದೆ. SHVS (ಸುಜುಕಿ ಹೈಬ್ರಿಡ್ ವೆಹಿಕಲ್ ಸಿಸ್ಟಮ್) ಎಂದು ಕರೆಯಲ್ಪಡುವ ಹೊಸ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಜೋಡಿಸಲಾಗುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಈ ಹೊಸ ಮಾದರಿಯು 48-ವೋಲ್ಟ್ ಸಿಸ್ಟಂನೊಂದಿಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರಬಹುದು. ಇದು ಸುಜುಕಿಯ AllGrip 4×4 ಡ್ರೈವ್ ಸಿಸ್ಟಮ್ ಅನ್ನು ಪಡೆಯುವ ಸಾಧ್ಯತೆಯಿದೆ. ಈ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ರಾಸ್ಒವರ್ 1.4 ಲೀಟರ್ ಟರ್ಬೊ ಎಂಜಿನ್ ಅನ್ನು ಸಹ ಪಡೆಯಬಹುದು. ಇದು 127 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೊದಲು ಎಸ್-ಕ್ರಾಸ್ ಬಿಎಸ್ -4 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದರಿಂದ, ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಸ್ಥಗಿತಗೊಳಿಸಲಾಗಿತ್ತು. ನಂತರ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಎಂಜಿನ್ ಖಂಡಿತವಾಗಿಯೂ ಬಿಎಸ್-6 ಮಾರುತಿ ಸುಜುಕಿ ಎಎಸ್‌-ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲು ಸಹಾಯ ಮಾಡಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Suzuki S-Cross ಕಾರು

ಈ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಬಿಎಸ್-6 ಮಾರುತಿ ಎಸ್-ಕ್ರಾಸ್ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯ ಜೊತೆ ವಿನ್ಯಾಸದಲ್ಲಿ ಮತ್ತು ಫೀಚರ್ ಗಳನ್ನು ಕೂಡ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿತ್ತು. ಇನ್ನು ನ್ಯೂ ಜನರೇಷನ್ ಎಸ್-ಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗಲಿದೆ.

Source: Instagram/suzukigarage

Most Read Articles

Kannada
English summary
Suzuki new gen s cross design revealed ahead of official launch through spy pics details
Story first published: Tuesday, November 16, 2021, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X