ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ. ಮೂರನೇ ಜರೇಷನ್ ಸುಜುಕಿ ಸ್ವೀಫ್ ಕಾರು 2016 ರಿಂದ ಮಾರಾಟವಾಗುತ್ತಿದೆ. ಜಪಾನಿನ ಕಾರು ತಯಾರಕರು ಮುಂದಿನ ವರ್ಷ ಹ್ಯಾಚ್‌ಬ್ಯಾಕ್‌ಗಾಗಿ ನ್ಯೂ ಜನರೇಷನ್ ಮಾದರಿಯನ್ನು ಪರಿಚಯಿಸುವ ಕಾರ್ಯದಲಿ ನಿರತರರಾಗಿದ್ದಾರೆ ಎಂದು ವರದಿಯಾಗಿದೆ. ಭಾರತದಲ್ಲಿ ಸ್ವಿಫ್ಟ್ ಮಿಡ್ ಲೈಫ್ ಫೇಸ್ ಲಿಫ್ಟ್ ಅನ್ನು ಈ ವರ್ಷ ಬಿಡುಗಡೆಗೊಳಿಸಲಾಯಿತು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ಮುಂದಿನ ವರ್ಷ ಸುಜುಕಿ ಸ್ವಿಫ್ಟ್‌ನ ನ್ಯೂ ಜನರೇಷನ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ಜಪಾನ್‌ನ ವರದಿಗಳಾಗಿದೆ. ಇದರ ಪ್ರಕಾರ ನ್ಯೂ ಜನರೇಷನ್ ಸ್ವಿಫ್ಟ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

5ನೇ ಜನರೇಷನ್ ಸುಜುಕಿ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸುಜುಕಿ ಭರ್ಜರಿಯಾಗಿ ಸಜ್ಜಾಗುತ್ತಿದೆ. ಜಪಾನಿನ ಆಟೋಮೋಟಿವ್ ಮ್ಯಾಗಜೀನ್ ಬೆಸ್ಟ್ ಕಾರ್ ನ್ಯೂ ಜನರೇಷನ್ ಸ್ವಿಫ್ಟ್ ಕಾರಿನ 3ಡಿ ರೆಂಡರಿಂಗ್ ಚಿತ್ರವನ್ನು ಬಹಿರಂಗಪಡಿಸಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

3ಡಿ ರೆಂಡರಿಂಗ್ ಚಿತ್ರದಲ್ಲಿ ನ್ಯೂ ಜನರೇಷನ್ ಸ್ವಿಫ್ಟ್ ತುಂಬಾ ದೊಡ್ಡದಾದ ಏರ್ ಡ್ಯಾಮ್, ಅಡ್ದಲಾಗಿರುವ ಫಾಗ್ ಲ್ಯಾಂಪ್ ಮತ್ತು ಮುಂಭಾಗದಲ್ಲಿ ತೆಳ್ಳನೆಯ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ. ಸೈಡ್ ಪ್ರೊಫೈಲ್‌ನಲ್ಲಿ ಶಾರ್ಪ್ ಲೈನ್ ಗಳನ್ನು ಹೊಂದಿವೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ಪ್ರಸ್ತುತ ತಲೆಮಾರಿನ ಸುಜುಕಿ ಸ್ವಿಫ್ಟ್ ಕಾರಿನಂತೆ ಹಾರ್ಟಕ್ಟ್ ಪ್ಲಾಟ್‌ಫಾರ್ಮ್ ಅನ್ನು ಬಳಸುವುದನ್ನು ಮುಂದುವರಿಸುತ್ತದೆ,,ಆದರೂ ಕೆಲವು ಬದಲಾವಣೆಗಳೊಂದಿಗೆ ಸುರಕ್ಷತೆಯನ್ನು ಸುಧಾರಿಸುವಲ್ಲಿ ಸುಜುಕಿ ಗಮನ ಹರಿಸಬಹುದು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ದೊಡ್ಡ ಬದಲಾವಣೆಯೆಂದರೆ, ನ್ಯೂ ಜನರೇಷನ್ ಸ್ವಿಫ್ಟ್ ಆಯ್ದ ಮಾರುಕಟ್ಟೆಗಳಲ್ಲಿ ಪೂರ್ಣ-ಹೈಬ್ರಿಡ್ ಪವರ್‌ಟ್ರೇನ್‌ಗೆ ಬದಲಾಗಿ ಮೈಲ್ಡ್ -ಹೈಬ್ರಿಡ್ ಪವರ್‌ಟ್ರೇನ್ ಲಭ್ಯವಿರುತ್ತದೆ. ಹೊಸ ಮಾದರಿಯು ಪ್ರಸ್ತುತ 12-ವೋಲ್ಟ್ ಬದಲಿಗೆ 48-ವೋಲ್ಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದು.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ಇದಲ್ಲದೆ ಟಾರ್ಕ್-ಫಿಲ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಮೋಟರ್ ಐಡ್ಲಿಂಗ್‌ನಂತಹ ಹೊಸ ವೈಶಿಷ್ಟ್ಯಗಳು ಸಹ ಪಡೆಯಬಹುದು. ಜಾಗತಿಕ ಅನಾವರಣದ ಬಳಿಕ ನ್ಯೂ ಜನರೇಷನ್ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಪ್ರಸ್ತುತ ಮಾದರಿಗಿಂತ ದುಬಾರಿಯಾಗಿರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಕಾರು

ನ್ಯೂ ಜನರೇಷನ್ ಸುಜುಕಿ ಸ್ವಿಫ್ಟ್ ಪೂರ್ಣ-ಹೈಬ್ರಿಡ್ ರೂಪಾಂತರವನ್ನು ಪಡೆಯುತ್ತೇವೆಯೇ ಅಥವಾ ಮೈಲ್ಡ್-ಹೈಬ್ರಿಡ್ ರೂಪಾಂತರವನ್ನು ಪಡೆಯುತ್ತೇವೆಯೇ ಎಂಬುವುದು ಇನ್ನು ಖಚಿತವಿಲ್ಲ. ಭಾರತದಲ್ಲಿ ಸ್ವಿಫ್ಟ್ ಕಾರಿಗೆ ಹೆಚ್ಚು ಬೇಡಿಕೆ ಹೊಂದಿರುವುದರಿಂದ ನ್ಯೂ ಜನರೇಷನ್ ಸ್ವಿಫ್ಟ್ ಕಾರನ್ನು ಜಪಾನ್ ನಲ್ಲಿ ಬಿಡುಗಡೆಗೊಳಿಸಿದ ಬಳಿಕ ಭಾರತದಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

More from DriveSpark

Article Published On: Wednesday, May 12, 2021, 20:39 [IST]
English summary
Next-Generation Suzuki Swift Rendered. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+