ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಜಪಾನಿನ ಮಾರುಕಟ್ಟೆಯಲ್ಲಿ ವ್ಯಾಗನ್ಆರ್(WagonR) ಕಾರಿನ ಆರನೇ ತಲೆಮಾರಿನ ಮಾದರಿ ಮಾರಾಟದಲ್ಲಿದೆ. ಆರನೇ ತಲೆಮಾರಿನ ಸುಜುಕಿ ವ್ಯಾಗನಾರ್ ಕಾರನ್ನು 2017 ರಲ್ಲಿ ಜಪಾನ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು ಸುಜುಕಿ ವ್ಯಾಗನ್ಆರ್ ಕಾರು 2003 ರಿಂದ ಜಪಾನ್‌ನಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಇದೀಗ ಸುಜುಕಿ ಕಂಪನಿಯು ನ್ಯೂ ಜನರೇಷನ್ ವ್ಯಾಗನ್ಆರ್ ಕಾರನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಈ ಹೊಸ ವ್ಯಾಗನ್ಆರ್ ಕಾರು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ನ್ಯೂ ಜನರೇಷನ್ ವ್ಯಾಗನ್ಆರ್ ಹೊರಭಾಗವು ಪ್ರಮುಖ ಪರಿಷ್ಕರಣೆಗೆ ಒಳಗಾಗುತ್ತದೆ. ಇದರ ಮುಂಭಾಗದ ಫಾಸಿಕ ಈಗ ಹೆಚ್ಚು ಕಾರ್ವೆ ಪ್ರೊಫೈಲ್ ಅನ್ನು ಹೊಂದಿದೆ, ಇದನ್ನು ಸುಧಾರಿತ ಏರೋಡೈನಾಮಿಕ್ ವಿನ್ಯಾಸ ಹೊಂದಿರಬಹುದು. ಇದು ಕಾರಿಗೆ ಆಹ್ಲಾದಕರ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿರುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಈ ಬದಲಾವಣೆಯೊಂದಿಗೆ ವ್ಯಾಗನಾರ್‌ನ ಬಾಕ್ಸಿ ನೋಟವನ್ನು ದುರ್ಬಲಗೊಳಿಸಲಾಗಿದೆ, ಇದು ಕಣ್ಣುಗಳಿಗೆ ಹೆಚ್ಚು ಸ್ವೀಕಾರಾರ್ಹವಾಗಿ ಕಾಣುತ್ತದೆ. ಬಾನೆಟ್, ಫ್ರಂಟ್ ಗ್ರಿಲ್, ಹೆಡ್ ಲ್ಯಾಂಪ್, ಮತ್ತು ಏರ್ ಡ್ಯಾಮ್ ಸೇರಿದಂತೆ ಹೆಚ್ಚಿನ ಯುನಿಟ್ ಗಳನ್ನು ರಿಫ್ರೆಶ್ ಮಾಡಲಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಇನ್ನು ಸೈಡ್ ಪ್ರೊಫೈಲ್ ಪರಿಚಿತವಾಗಿರುವಂತೆ ಕಾಣುತ್ತದೆ, ಆದರೆ ಇದು ವ್ಜೀಲ್ ಗಳ ಮೇಲೆ ಹೊಸ ಚೌಕಾಕಾರದ ಗ್ರೊವ್ಸ್ ಪಡೆಯುತ್ತದೆ. ಡೋರ್ ಪ್ಯಾನಲ್‌ಗಳು ಸಮತಟ್ಟಾಗಿ ಕಾಣುತ್ತವೆ ಮತ್ತು ಈಗಿರುವ ಮಾದರಿಯಲ್ಲಿ ಕಾಣುವ ಪ್ರಮುಖ ಲೈನ್ ಅನ್ನು ಹೊಂದಿಲ್ಲ. ಹೊಸ ವ್ಯಾಗನಾರ್ ಹೊಸ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ ಇನ್ನು ಹಿಂಭಾಗದಲ್ಲಿ ಹ್ಯಾಚ್ ಹೊಸ ಟೈಲ್ ಲೈಟ್‌ಗಳನ್ನು ಪಡೆಯುತ್ತದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಹೊಸ ಜನರೇಷನ್ ವ್ಯಾಗನ್ಆರ್ ಸುಜುಕಿ ಕೆಲವು ಹೊಸ ಬಣ್ಣ ಆಯ್ಕೆಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಅದರ ಪ್ರಸ್ತುತ ರೂಪದಲ್ಲಿ, ವ್ಯಾಗನಾರ್ ಅನ್ನು ಆಕ್ಟಿವ್ ಯೆಲ್ಲೋ, ಫೀನಿಕ್ಸ್ ರೆಡ್ ಪರ್ಲ್, ಬ್ಲಿಸ್ಕ್ ಬ್ಲೂ ಮೆಟಾಲಿಕ್, ಅರ್ಬನ್ ಬ್ರೌನ್ ಪರ್ಲ್ ಮೆಟಾಲಿಕ್, ಬ್ಲೂಯಿಶ್ ಬ್ಲ್ಯಾಕ್ ಪರ್ಲ್ ಮತ್ತು ಮೂನ್ ಲೈಟ್ ವೈಲೆಟ್ ಪರ್ಲ್ ಮೆಟಾಲಿಕ್ ನಂತಹ ಹಲವು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಈ ಬಣ್ಣದ ಆಯ್ಕೆಗಳು ಭಾರತ-ಸ್ಪೆಕ್ ಮಾರುತಿ ವ್ಯಾಗನ್ ಆರ್ ಗೆ ಲಭ್ಯವಿರುವ ಆಯ್ಕೆಗಳಿಗಿಂತ ಭಿನ್ನವಾಗಿವೆ. ಈ ಸಮಯದಲ್ಲಿ ನಿಖರವಾದ ವಿವರಗಳು ಲಭ್ಯವಿಲ್ಲದಿದ್ದರೂ, ಒಳಾಂಗಣಗಳನ್ನು ಸಹ ನವೀಕರಿಸುವ ಸಾಧ್ಯತೆಯಿದೆ. ಪ್ರಸ್ತುತ ಮಾದರಿಗಾಗಿ, ಬಳಕೆದಾರರು ಬ್ಲ್ಯಾಕ್ ಅಥವಾ ಬೀಜ್ ಬಣ್ಣದ ಥೀಮ್‌ಗಳ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ವ್ಯಾಗನ್ಆರ್ ಹೊಂದಾಣಿಕೆಯ ಸೀಟ್ ಗಳೊಂದಿಗೆ ಬರುತ್ತದೆ ಮತ್ತು ಅದನ್ನು ವಿವಿಧ ರೀತಿಯ ಫೀಚರ್ಸ್ ಮತ್ತು ತಂತ್ರಜ್ಙಾನಗಳಿಗೆ ಪಡೆಯಬಹುದು. ಇದರಲ್ಲಿ ಅಂಬೆರೆಲಾ ಹೋಲ್ಡರ್, ಡೋರ್ ಪಾಕೆಟ್ಸ್, ಶಾಪಿಂಗ್ ಹುಕ್ ಮತ್ತು ಪ್ಯಾಸೆಂಜರ್ ಸೀಟ್ ಅಂಡರ್‌ಬಾಕ್ಸ್‌ನಂತಹ ಹಲವಾರು ಉಪಯುಕ್ತ ಸ್ಥಳಗಳನ್ನು ಒದಗಿಸಲಾಗಿದೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಏಳನೇ ತಲೆಮಾರಿನ ವ್ಯಾಗನಾರ್ R06D ಇನ್-ಲೈನ್ 3-ಸಿಲಿಂಡರ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಇದು EGR ಹೊಸ ತಂತ್ರಜ್ಞಾನಗಳನ್ನು ಹೊಂದಿದೆ. ವ್ಯಾಗನಾರ್‌ನ ಮೈಲ್ದ್-ಹೈಬ್ರಿಡ್ ರೂಪಾಂತರಕ್ಕೆ ಸುಧಾರಣೆಗಳನ್ನು ಮಾಡಲಾಗುವುದು. ಅದರ ಪ್ರಸ್ತುತ ರೂಪದಲ್ಲಿ, ವ್ಯಾಗನ್ಆರ್ 658 ಸಿಸಿ ಆರ್ 06 ಡಿ ಡಿಒಹೆಚ್ಸಿ ಮೋಟಾರ್ ನಿಂದ ಚಾಲಿತವಾಗಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು CVT ಸೇರಿವೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಈ ಹೊಸ ವ್ಯಾಗನಾರ್ ಹಗುರವಾದ ಹಾರ್ಟೆಕ್ಟ್ ಫ್ಲಾಟ್ ಫಾರ್ಮ್ ಅನ್ನು ಬಳಸುವುದನ್ನು ಮುಂದುವರಿಸುತ್ತದೆ. ಇದು ಹಲವಾರು ಹೊಸ ಸುಧಾರಣೆಗಳು ಮತ್ತು ಪರಿಷ್ಕರಣೆಗಳನ್ನು ಒಳಗೊಂಡಿರುತ್ತದೆ. ನವೀಕರಿಸಿದ ಎಂಜಿನ್ ನೊಂದಿಗೆ ಳಕೆದಾರರು ಸುಧಾರಿತ ಚಾಲನಾ ಡೈನಾಮಿಕ್ಸ್ ಮತ್ತು ನಿರ್ವಹಣೆಯನ್ನು ನಿರೀಕ್ಷಿಸಬಹುದು

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

7ನೇ ತಲೆಮಾರಿನ ವ್ಯಾಗನಾರ್ ಕೂಡ ಕೆಲವು ಹೊಸ ಸುರಕ್ಷತೆ ಮತ್ತು ಭದ್ರತಾ ವೈಶಿಷ್ಟ್ಯಗಳನ್ನು ಪಡೆಯಬಹುದು. ಇದು ಈಗಾಗಲೇ ರಿಯರ್ ಫಾಲ್ ಸ್ಟಾರ್ಟ್ ಸಪ್ರೆಶನ್, ರಿವರ್ಸ್ ಮಾಡುವಾಗ ಬ್ರೇಕ್ ಸಪೋರ್ಟ್ ಮತ್ತು ಘರ್ಷಣೆ ತಪ್ಪಿಸುವ ವ್ಯವಸ್ಥೆಯಂತಹ ಡ್ರೈವರ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಲೇನ್ ಡಿಪರ್ಚರ್ ವಾರ್ನಿಂಗ್ ಸಿಸ್ಟಂ, ಹೈ ಬೀಮ್ ಅಸಿಸ್ಟ್, 360 ಕ್ಯಾಮರಾ, ಹೆಡ್-ಅಪ್ ಡಿಸ್ಪ್ಲೇ, ಎರ್ಮಜನ್ಸಿ ಸ್ಟಾಪ್ ಸಿಗ್ನಲ್, ಹಿಲ್ ಹೋಲ್ಡ್ ಕಂಟ್ರೋಲ್, ಇಎಸ್‌ಪಿ ಮತ್ತು ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು ಸೇರಿವೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ವ್ಯಾಗನಾರ್ ಕೇವಲ 30 ತಿಂಗಳಲ್ಲಿ 4 ಲಕ್ಷ ಯೂನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ತಲುಪಿದೆ. ಈ ಮಾರಾಟದ ಅಂಕಿಅಂಶಗಳು ಕೇವಲ ಮೂರನೇ ತಲೆಮಾರಿನ ಮಾದರಿಯನ್ನು ಮಾತ್ರ ಒಳಗೊಂಡಿವೆ.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಇದರ ಪರಿಣಾಮವಾಗಿ, ವ್ಯಾಗನಾರ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರಾಂಡ್‌ನ ಎರಡನೇ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ. ಇದು ದೇಶದಲ್ಲಿ ಮಾರುತಿ ಸುಜುಕಿಯ ಅತಿ ಹೆಚ್ಚು ಮಾರಾಟವಾದ ಸಿಎನ್‌ಜಿ ವಾಹನವಾಗಿದೆ. ಇನ್ನು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದ್ದ ವ್ಯಾಗನ್ಆರ್ ಸಿಎನ್‌ಜಿ ಮಾದರಿಯನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿದ್ದರು.

ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ WagonR ಕಾರು

ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ.

Most Read Articles

Kannada
English summary
Suzuki preparing to launch its updated new gen wagonr details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X