ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಕಾರನ್ನು 2021ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋ (ಜಿಐಐಎಎಸ್) ನಲ್ಲಿ ಪ್ರದರ್ಶಿಸಿದ್ದಾರೆ. ಈ ಹೊಸ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಎಂಪಿವಿಯು ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ನ್ಯೂ ಸ್ಪೋರ್ಟ್ ಎಫ್‌ಎಫ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರಲಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಈ ಹೊಸ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಕಾರಿನ ಅನಾವರಣಗೊಳಿಸಿದ ಬಳಿಕ ಸುಜುಕಿ ಇಂಡೋನೇಷ್ಯಾ ಅಧ್ಯಕ್ಷ ಶಿಂಗೋ ಸೆಜಾಕಿ ಮಾತನಾಡಿ, ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಮತ್ತು "ಅಸಾಧಾರಣ ಚಾಲನಾ ಅನುಭವ" ನೀಡಲು ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ಈ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಹೆಚ್ಚು ಯುವಗ್ರಾಹರನ್ನು ಸೆಳೆಯುವಂತಹ ವಿನ್ಯಾಸವನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಹೊಸ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್ಎಫ್ ಸಾಮಾನ್ಯ ಮಾದರಿಗಿಂತ ಹಲವಾರು ಕಾಸ್ಮೆಟಿಕ್ ವರ್ಧನೆಗಳನ್ನು ಪಡೆಯುತ್ತದೆ. ಡ್ಯುಯಲ್-ಟೋನ್ ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೊಸ ರೂಪಾಂತರವು ಹೊಸ ಮೆಶ್ ಗ್ರಿಲ್, ಸ್ಕರ್ಟ್ ಮಾದರಿಯ ಬಂಪರ್ ವಿಸ್ತರಣೆಯಲ್ಲಿ ಸ್ಪೋರ್ಟಿ ರೆಡ್ ಅಸ್ಸೆಂಟ್ ಗಳು ಮತ್ತು ಮುಂಭಾಗದ ತುದಿಯಲ್ಲಿ ಅಪ್ ಸೈಡ್ ಡೌನ್ ಎಲ್-ಆಕಾರದ ಎಲ್‌ಇಡಿ ಡಿಆರ್‌ಎಲ್ ಮತ್ತು ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ರೆಡ್ ಅಸ್ಸೆಂಟ್ ಗಳು ಮತ್ತು ಬ್ಲ್ಯಾಕ್ ಡೆಕಾಲ್‌ಗಳೊಂದಿಗೆ ಬ್ಲ್ಯಾಕ್ಡ್ ಔಟ್ ORVM ಗಳು ಅದರ ಸೈಡ್ ಪ್ರೊಫೈಲ್ ಅನ್ನು ಅಲಂಕರಿಸುತ್ತವೆ. ಬಂಪರ್ ವಿಸ್ತರಣೆಗಳು, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಬೂಟ್‌ನಲ್ಲಿ ರೆಡ್ ಅಲಂಕಾರದೊಂದಿಗೆ ಹಿಂಭಾಗದ ವಿಭಾಗವನ್ನು ಸಹ ಪರಿಷ್ಕರಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಹೊಸ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್ಎಫ್ ಕಾರಿನಲ್ಲಿ ಡ್ಯಾಶ್‌ಬೋರ್ಡ್‌ನಾದ್ಯಂತ ದಪ್ಪ ಫಾಕ್ಸ್ ವುಡ್ ಪಟ್ಟಿಯನ್ನು ಹೊಂದಿರುವ ಬ್ಲ್ಯಾಕ್ ಆಂತರಿಕ ಥೀಮ್ ಇದನ್ನು ಸಾಮಾನ್ಯ ಮಾದರಿಯಿಂದ ಪ್ರತ್ಯೇಕಿಸುತ್ತದೆ. ಹೊಸ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಐಆರ್‌ವಿಎಂ ಇಂಟಿಗ್ರೇಟೆಡ್ ರಿಯರ್ ಪಾರ್ಕಿಂಗ್ ಡಿಸ್‌ಪ್ಲೇ ಮತ್ತು ರೆಡ್ ಆಕ್ಸೆಂಟ್‌ಗಳೊಂದಿಗೆ ಹೊಸ ಸೀಟ್ ಅಪ್ಹೋಲ್ಸ್ಟರಿಯನ್ನು ಪಡೆಯುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಹೊಸ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್‌ನ ಒಟ್ಟಾರೆ ಆಂತರಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಮಾದರಿಯಂತೆಯೇ ಇವೆ. ವೈಶಿಷ್ಟ್ಯಗಳ ವಿಷಯದಲ್ಲಿ, ಇದು 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋಮ್ಯಾಟಿಕ್ ಎಸಿ ಯುನಿಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಇಬಿಡಿಯೊಂದಿಗೆ ಎಬಿಎಸ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹೆಚ್ಚಿನದನ್ನು ಒಳಗೊಂಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಈ ಹೊಸ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್ಎಫ್ ಕಾರಿನಲ್ಲಿ ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 ಬಿಹೆಚ್‌ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗಿದೆ,

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯನ್ನು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಕಳೆದ ತಿಂಗಳು ಮಾರುತಿ ಸುಜುಕಿ ಎರ್ಟಿಗಾ ಮಾದರಿಯ 17,525 ಯುನಿಟ್‌ಗಳನ್ನು ಮಾರಾಟವಾಗಿವೆ. ಭಾರತದಲ್ಲಿ ಮಾರುತಿ ಸುಜುಕಿ ಎರ್ಟಿಗಾದಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಗಮನಾರ್ಹವಾದ ನವೀಕರಣವನ್ನು ನಡೆಸಲು ಸಜ್ಜಾಗಿದೆ. ಮುಂಬರುವ ತಿಂಗಳುಗಳಲ್ಲಿ ಎರ್ಟಿಗಾ ಮತ್ತು ಎಕ್ಸ್‌ಎಲ್6 ಎಂಪಿವಿಗಳು ಹೊಸ ನವೀಕರಣಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಈ ಮಾರುತಿ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್‌ಬ್ಯಾಗ್ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಬಿಎಸ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಮಾರುತಿ ಸುಜುಕಿ ಕಂಪನಿಯು ನವೆಂಬರ್ 10ರಂದು ಭಾರತದಲ್ಲಿ ತನ್ನ ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಇದಕ್ಕೂ ಮುನ್ನ ಕಂಪನಿಯು ಭಾರತದಲ್ಲಿ 2014 ರಲ್ಲಿ ಬಿಡುಗಡೆಯಾದ ಸೆಲೆರಿಯೊ ಕಾರಿನ ಎರಡನೇ ತಲೆಮಾರಿನ ಮಾದರಿಯನ್ನು ಮಾರಾಟ ಮಾಡುತ್ತಿತ್ತು. ಮಾರುತಿ ಸುಜುಕಿ ಸೆಲೆರಿಯೊ ಬಿಡುಗಡೆಯಾದಾಗಿನಿಂದಲೂ ಕಮರ್ಷಿಯಲ್ ಸೆಗ್ ಮೆಂಟಿನಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಕಾರು ಸಿ‌ಎನ್‌ಜಿ ಮಾದರಿಯಲ್ಲಿ ಲಭ್ಯವಿರುವುದರಿಂದ ಕ್ಯಾಬ್/ಫ್ಲೀಟ್ ನಿರ್ವಾಹಕರು ಈ ಕಾರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೊಸ ಸೆಲೆರಿಯೊ ಕಾರ್ ಅನ್ನು ಸಹ ಕಂಪನಿಯು ಸಿ‌ಎನ್‌ಜಿ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಮಾಹಿತಿಯ ಪ್ರಕಾರ, ಹೊಸ ಸೆಲೆರಿಯೊ ಸಿಎನ್‌ಜಿ ಮಾದರಿಯನ್ನು ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗಾಗಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಅನಾವರಣಗೊಂಡ Suzuki Ertiga Sport FF ಕಾರು

ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಕಾರಿನ ಬೆಲೆಯು RP 258,350,000 ಆಗಿದೆ. ಇನ್ನು ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್‌ಎಫ್ ಎಂಪಿವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ. ಇತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸುಜುಕಿ ಕಂಪನಿಯು ಮಾಹಿತಿಯನ್ನು ಬಹಿರಂಗಪಡಿಸಿಲ್ಲ,

Most Read Articles

Kannada
English summary
Suzuki revealed new agressive sport ff model of ertiga mpv details
Story first published: Saturday, November 13, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X