ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ಜಪಾನ್ ಮೂಲದ ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ವಿಟಾರಾ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗೆ ಉತ್ತಮ ಪೈಪೋಟಿಯನ್ನು ನೀಡಲು ಪ್ರಮುಖ ಬದಲಾವಣೆಗಳೊಂದಿಗೆ ಹೊಸ ವಿಟಾರಾ ಮಾದರಿಯು ಬರಲಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ಬಹುನಿರೀಕ್ಷಿತ ನ್ಯೂ ಜನರೇಷನ್ ಸುಜುಕಿ ವಿಟಾರಾ ಕಾಂಪ್ಯಾಕ್ಟ್ ಎಸ್‍ಯುವಿಯು ಅಕ್ಟೋಬರ್‌ ತಿಂಗಳಿನಲ್ಲಿ ಅನಾವರಣವಾಗಲಿದೆ ಎಂದು ವರದಿಗಳಾಗಿದೆ. ಇನ್ನು ಮುಂದಿನ ವರ್ಷದ ಆರಂಭದಲ್ಲಿ ವಿಟಾರಾ ಎಸ್‍ಯುವಿಯು ಜಾಗಾತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. 2022ರ ಸುಜುಕಿ ವಿಟಾರಾ ಕಾಂಪ್ಯಾಕ್ಟ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

2022ರ ಸುಜುಕಿ ವಿಟಾರಾ ಮಾದರಿಯು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ಎತ್ತರ, ಅಗಲ ಮತ್ತು ಉದ್ದವಾಗಿರುತ್ತದೆ. ಇದು ಹೆಚ್ಚು ಸಿಲೂಯೆಟ್, ಹೆಚ್ಚು ಲೈನ್ ಗಳು ಮತ್ತು ಅಗ್ರೇಸಿವ್ ಗ್ರಿಲ್‌ನೊಂದಿಗೆ ಬರಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ವಿಟಾರಾದ ಕ್ಯಾಬಿನ್ ಕೂಡ ನವೀಕರಿಸಲಿದೆ. ಪ್ರತಿಸ್ಪರ್ಧಿಗಳಿಗೆ ಹೆಚ್ಚಿನ ಪೈಪೋಟಿ ನೀಡಲು ಹೆಚ್ಚು ಪ್ರೀಮಿಯಂ ನವೀಕರಣಗಳನ್ನು ಪಡೆಯಬಹುದು. ಇದು ಹೊಸ ಮಲ್ಟಿಮೀಡಿಯಾ ಸಿಸ್ಟಂಗಾಗಿ ದೊಡ್ಡ ಟಚ್‌ಸ್ಕ್ರೀನ್ ಡಿಸ್ ಪ್ಲೇ ಪಡೆಯುವ ಸಾಧ್ಯತೆಯಿದೆ..

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ಇನ್ನು ಈ 2022ರ ವಿಟಾರಾ ಎಸ್‍ಯುವಿಯಲ್ಲಿ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ವೈರ್‌ಲೆಸ್ ಚಾರ್ಜಿಂಗ್ ಸಿಸ್ಟಂ ಮತ್ತು ಸುಧಾರಿತ ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ಕೂಡ ಪಡೆಯಲಿದೆ. ಇದರೊಂದಿಗೆ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಕೂಡ ಹೊಂದಿರಲಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ನ್ಯೂ ಜನರೇಷನ್ ವಿಟಾರಾ ಅಸ್ತಿತ್ವದಲ್ಲಿರುವ ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಮಾರ್ಪಡಿಸಿದ ಆವೃತ್ತಿಯನ್ನು ಆಧರಿಸಿದೆ, ಇದರಿಂದ ಈ ಎಸ್‍ಯುವಿಯ ಕ್ಯಾಬಿನ್ ಸ್ಪೇಸ್ ಹೆಚ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ವಿಟಾರಾ 2,500 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ನ್ಯೂ ಜನರೇಷನ್ ವಿಟಾರಾ ಎಸ್‍ಯುವಿಯು 1.4-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಮತ್ತು ಫ್ರಂಟ್-ವ್ಹೀಲ್-ಡ್ರೈವ್ ಆಯ್ಕೆಗಳನ್ನು ಸ್ಟ್ಯಾಂಡರ್ಡ್ ಆಗಿ ಲಭ್ಯವಿರುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ಇದರ ಸುಧಾರಿತ ಇಂಧನ ದಕ್ಷತೆಗಾಗಿ 10 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್, 48-ವೋಲ್ಟ್ ಬ್ಯಾಟರಿಗಳು ಮತ್ತು ರಿಜನರೇಟ್ ಬ್ರೇಕಿಂಗ್ ಸಿಸ್ಟಂ ಒಳಗೊಂಡಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದಿಂದ ಈ ಎಂಜಿನ್‌ಗೆ ಅನುಕೂಲವಾಗಲಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ವಿಟಾರಾದ ಎಂಟ್ರಿ-ಲೆವೆಲ್ ರೂಪಾಂತರಗಳು 1.0 ಎಲ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಒಳಗೊಂಡಿರಬಹುದು ಹೊಸ ವಿಟಾರಾಕ್ಕಾಗಿ ಸುಜುಕಿ ಟೊಯೊಟಾದ ಫುಲ್ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಕೂಡ ಪಡೆಯುವ ಸಾಧ್ಯತೆಗಳಿದೆ. ಆದರೆ ಇತರ ಬಗ್ಗೆ ಅಧಿಕೃತ ಮಾಹಿತಿಗಳು ಬಹಿರಂಗವಾಗಿದೆ.

ಕಿಯಾ ಸೆಲ್ಟೋಸ್ ಎಸ್‍ಯುವಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಸುಜುಕಿ ವಿಟಾರಾ

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ವಿಟಾರಾ ಮಾದರಿಯು ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್, ಹ್ಯುಂಡೈ ಕೋನಾ, ಟೊಯೋಟಾ ಸಿ-ಹೆಚ್ಆರ್ ಮತ್ತು ಇತರ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2022 Suzuki Vitara To Unveil By October 2021. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X