ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಕೊನೆಗೂ ಯುರೋಪಿಯನ್ ಮಾರುಕಟ್ಟೆಗೆ ಅನಾವರಣಗೊಳಿಸಿದೆ. ಈ ಹೊಸ ಸುಜುಕಿ ಎಸ್-ಕ್ರಾಸ್(Suzuki S-Cross) ಸಮಗ್ರ ವಿನ್ಯಾಸ ಬದಲಾವಣೆಗಳು ಮತ್ತು ವೈಶಿಷ್ಟ್ಯಗಳ ನವೀಕರಣಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ನ್ಯೂ ಜನರೇಷನ್ ಎಸ್-ಕ್ರಾಸ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸುಜುಕಿ ಕಂಪನಿಯು ಸಜ್ಜಾಗುತ್ತಿದೆ. ಹಂಗೇರಿಯಲ್ಲಿರುವ ಸುಜುಕಿಯ ಎಸ್‌ಟರ್‌ಗಾಮ್ ಆಧಾರಿತ ಘಟಕದಲ್ಲಿ ಹೊಸ ಸ್-ಕ್ರಾಸ್‌ ಕಾರನ್ನು ಉತ್ಪಾದಿಸಲಾಗುತ್ತದೆ. ಈ ನ್ಯೂ ಜನರೇಷನ್ ಎಸ್-ಕ್ರಾಸ್ ಹೊಸ ವಿನ್ಯಾಸ ಬದಲಾವಣೆಗಳು ಮತ್ತು ಫೀಚರ್ಸ್ ಗಳ ನವೀಕರಣಗಳನ್ನು ಪಡೆದುಕೊಂಡಿವೆ ಆದರೆ ಎಂಜಿನ್ ಬದಲಾಗದೆ ಉಳಿದಿದೆ. ಈ ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಕಾರಿನ ಬಗ್ಗೆ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ವಿನ್ಯಾಸ

ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಮಾದರಿಯು ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಕದೊಂದಿಗೆ ಬರುತ್ತದೆ. ಇದು ಪಿಯಾನೋ-ಬ್ಲ್ಯಾಕ್ ಗ್ರಿಲ್ ಜೊತೆಗೆ ಹೊಸ ಬಂಪರ್, ಟ್ವೀಕ್ ಮಾಡಲಾದ ಟ್ರಿಪಲ್-ಬೀಮ್ ಹೆಡ್‌ಲ್ಯಾಂಪ್‌ಗಳು ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಫಾಗ್ ಲ್ಯಾಂಪ್ ಅಸೆಂಬ್ಲಿಯನ್ನು ಕೂಡ ಒಳಗೊಂಡಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಬಾನೆಟ್ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಇದು ವಿಶಾಲವಾದ ಸೆಂಟ್ರಲ್ ಏರ್ ಇನ್ ಟೆಕ್ ಮತ್ತು ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಸಹ ಹೊಂದಿದೆ. ಸೈಡ್ ಪ್ರೊಫೈಲ್ ಅನ್ನು ಬ್ಲ್ಯಾಕ್ ಬಾಡಿ ಕ್ಲಾಡಿಂಗ್, 17-ಇಂಚಿನ ಅಲಾಯ್ ವ್ಹೀಲ್ ಗಳು, ಕ್ರೋಮ್ಡ್ ವಿಂಡೋ ಲೈನ್ ಮತ್ತು ಬಾಡಿ-ಕಲರ್ ಡೋರ್ ಹ್ಯಾಂಡಲ್‌ಗಳೊಂದಿಗೆ ಸ್ಕ್ವಾರಿಶ್ ವೀಲ್ ಆರ್ಚ್‌ಗಳಿಂದ ಅಲಂಕರಿಸಲಾಗಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಇನ್ನು ಹಿಂದಿನ ವಿಭಾಗವು ಈಗ ಸ್ವಲ್ಪ ಟ್ವೀಕ್ ಮಾಡಲಾದ ಬಂಪರ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿದೆ, ಇವುಗಳನ್ನು ದಪ್ಪ ಕ್ರೋಮ್ ಬಾರ್ ಮೂಲಕ ಸಂಪರ್ಕಿಸಲಾಗಿದೆ. ಇದು ಹೆಚ್ಚಿನ ಮೌಂಟೆಡ್ ಸ್ಟಾಪ್ ಲ್ಯಾಂಪ್, ಇಂಟಿಗ್ರೇಟೆಡ್ ರಿಯರ್ ಸ್ಪಾಯ್ಲರ್ ಮತ್ತು ನೇರವಾದ ಬೂಟ್ ಲಿಡ್ ಅನ್ನು ಕೂಡ ಪಡೆಯಲಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಇಂಟಿರಿಯರ್ ಮತ್ತು ಫೀಚರ್ಸ್

ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಕಾರಿನ ಒಳಭಾಗದಲ್ಲಿ ಮೋಷನ್ ಟ್ರಿಮ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬಂದರೆ, ಅಲ್ಟ್ರಾ ಮಾದರಿಯು ಸೆಟ್ ಲೈಟ್ ನ್ಯಾವಿಗೇಷನ್‌ನೊಂದಿಗೆ 9.0-ಇಂಚಿನ ಯುನಿಟ್ ಅನ್ನು ಪಡೆಯುತ್ತದೆ. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಹೀಟೆಡ್ ಫ್ರಂಟ್ ಸೀಟ್‌ಗಳು, ಕೀಲೆಸ್ ಎಂಟ್ರಿ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳು ಮಾದರಿ ಶ್ರೇಣಿಯಾದ್ಯಂತ ಸ್ಟ್ಯಾಂಡರ್ಡ್ ಆಗಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಅಲ್ಟ್ರಾ ಟ್ರಿಮ್ ಅನ್ನು ಪ್ರತ್ಯೇಕವಾಗಿ ಪನೋರಮಿಕ್ ಸನ್‌ರೂಫ್, ಲೆದರ್ ಸೀಟ್ ಅಪ್ಹೋಲ್ಸ್ಟರಿ ಮತ್ತು 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದೊಂದಿಗೆ ನೀಡಲಾಗುತ್ತದೆ. ಇದರೊಂದಿಗೆ ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳು, ಟ್ರಾಫಿಕ್-ಸೈನ್ ರೆಕಗ್ನಿಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್‌ಸ್ಪಾಟ್ ಮಾನಿಟರಿಂಗ್‌ನಂತಹ ಹಲವಾರು ಡ್ರೈವಿಂಗ್ ಅಸಿಸ್ಟ್ ಸಿಸ್ಟಂಗಳೊಂದಿಗೆ ಬರುತ್ತದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಈ ಹೊಸ ಸುಜುಕಿ ಎಸ್-ಕ್ರಾಸ್ ಮಾದರಿಯು ಸಿಲ್ಕಿ ಸಿಲ್ವರ್, ಮೆಟಾಲಿಕ್ ಟೈಟಾನ್ ಡಾರ್ಕ್ ಗ್ರೇ, ಸ್ಪಿಯರ್ ಬ್ಲೂ, ಸಾಲಿಡ್ ವೈಟ್, ಎನರ್ಜಿಟಿಕ್ ರೆಡ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ 6 ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಆಯಮಾಗಳು

ನ್ಯೂ ಜನರೇಷನ್ ಸುಜುಕಿ ಎಸ್-ಕ್ರಾಸ್ ಕಾರು 4,300 ಎಂಎಂ ಉದ್ದ, 1,785 ಎಂಎಂ ಅಗಲ, 1,585 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಒಟ್ಟಾರೆ ಎತ್ತರವು ವಾಸ್ತವವಾಗಿ 10 ಎಂಎಂ ಚಿಕ್ಕದಾಗಿದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಎಂಜಿನ್

ಈ ಹೊಸ ಸುಜುಕಿ ಎಸ್-ಕ್ರಾಸ್ ಕಾರು 1.4 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಎಂಜಿನ್‌ನಿಂದ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ತನ್ನ ಪವರ್ ಪಡೆಯುವುದನ್ನು ಮುಂದುವರೆಸಿದೆ. ಈ ಮೊಟಾರ್ 127 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಇನ್ನು ಈ ಕಾರು 9.5 ಸೆಕೆಂಡುಗಳಲ್ಲಿ 0 ದಿಂದ 62 ಮೈಲ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 121 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ನ್ಯೂ ಜನರೇಷನ್ ಎಸ್-ಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮೊದಲು ಎಸ್-ಕ್ರಾಸ್ ಬಿಎಸ್ -4 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದರಿಂದ, ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ವೇಳೆ ಸ್ಥಗಿತಗೊಳಿಸಲಾಗಿತ್ತು. ನಂತರ ಮಾರುತಿ ಸುಜುಕಿ ಕಂಪನಿಯು ಎಸ್-ಕ್ರಾಸ್ ಕಾರನ್ನು ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದ್ದರು. ಪೆಟ್ರೋಲ್ ಎಂಜಿನ್ ಖಂಡಿತವಾಗಿಯೂ ಬಿಎಸ್-6 ಮಾರುತಿ ಸುಜುಕಿ ಎಎಸ್‌-ಕ್ರಾಸ್‌ಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲು ಸಹಾಯ ಮಾಡಿತು.

ಬಿಡುಗಡೆಯಾಗಲಿರುವ ನ್ಯೂ ಜನರೇಷನ್ Suzuki S-Cross ಕಾರಿನ ವಿಶೇಷತೆಗಳು

ಈ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಬಿಎಸ್-6 ಮಾರುತಿ ಎಸ್-ಕ್ರಾಸ್ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯ ಜೊತೆ ವಿನ್ಯಾಸದಲ್ಲಿ ಮತ್ತು ಫೀಚರ್ ಗಳನ್ನು ಕೂಡ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿತ್ತು. ನ್ಯೂ ಜನರೇಷನ್ ಎಸ್-ಕ್ರಾಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿಯು ಮುಂದಿನ ವರ್ಷಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Top highlights of upcoming new suzuki s cross details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X