2021ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

2021ರಲ್ಲಿ ಭಾರತೀಯ ಇಂಟರ್‌ನೆಟ್ ಬಳಕೆದಾರರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ಎಲೆಕ್ಟ್ರಿಕ್ ಕಾರುಗಳು(Electric Cars) ಮಾಹಿತಿಗೆ ಸಂಬಂಧಿಸಿದಂತೆ ಆಟೋ ಟ್ರೆಂಡಿಂಗ್ ಪಟ್ಟಿಯು ಬಿಡುಗಡೆಗೊಂಡಿದ್ದು, ಟಾಪ್ 10ರ ಪಟ್ಟಿಯಲ್ಲಿ ದೇಶಿಯವಾಗಿ ಉತ್ಪಾದನೆಯಾಗುತ್ತಿರುವ ಇವಿ ಕಾರುಗಳೇ ಮುಂಚೂಣಿಯಲ್ಲಿವೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಇಂಧನ ಚಾಲಿತ ವಾಹನಗಳಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಇಂಧನಗಳ ಬೆಲೆ ಏರಿಕೆ ಪರಿಣಾಮ ವಿವಿಧ ರಾಷ್ಟ್ರಗಳು 2030ರಿಂದಲೇ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟವನ್ನು ಶೇ.50 ರಷ್ಟು ತಗ್ಗಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಭಾರತದಲ್ಲಿ ಈಗಾಗಲೇ ಪ್ರಮುಖ ಕಾರು ಕಂಪನಿಗಳು ಪರಿಸರ ವಾಹನಗಳ ಮಾರಾಟದತ್ತ ಆದ್ಯತೆ ನೀಡುತ್ತಿದ್ದು, ಕಳೆದ ಕೆಲ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿವೆ. 2021ರಲ್ಲಿ ಪ್ರಮುಖ ಇವಿ ವಾಹನಗಳು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು, ಗೂಗಲ್ ಸರ್ಚ್‌ನಲ್ಲಿ ಗ್ರಾಹಕರ ಹುಡುಕಾಟವು ಜೋರಾಗಿದೆ. ಹಾಗಾದರೆ ಪ್ರಸಕ್ತ ವರ್ಷದಲ್ಲಿ ಅತಿ ಹುಡುಕಾಟ ನಡೆಸಿದ ಇವಿ ಕಾರುಗಳ ಪೈಕಿ ಯಾವೆಲ್ಲಾ ಕಾರುಗಳು ಮುಂಚೂಣಿಯಲ್ಲಿವೆ ಎನ್ನುವುದನ್ನು ಇಲ್ಲಿ ತಿಳಿಯೋಣ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಟಾಟಾ ನೆಕ್ಸಾನ್ ಇವಿ (Tata Nexon EV)

ಎಲೆಕ್ಟ್ರಿಕ್ ಕಾರುಗಳ ಗೂಗಲ್ ಹುಡುಕಾಟದಲ್ಲಿ ಟಾಟಾ ನಿರ್ಮಾಣದ ನೆಕ್ಸಾನ್ ಇವಿ ಮೊದಲ ಸ್ಥಾನದಲ್ಲಿದೆ. 2021ರ ಅವಧಿಯಲ್ಲಿ ನೆಕ್ಸಾನ್ ಇವಿ ಕಾರಿನ ಮಾಹಿತಿಗಳಿಗೆ ಸಂಬಂಧಿಸಿದಂತೆ ಸುಮಾರು 1.35 ಲಕ್ಷ ಇಂಟರ್‌ನೆಟ್ ಬಳಕೆದಾರರು ಗೂಗಲ್ ಸರ್ಚ್ ಮಾಡಿದ್ದಾರೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಮೂರು ಪ್ರಮುಖ ವೆರಿಯೆಂಟ್‌ಗಳೊಂದಿಗೆ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರುವ ನೆಕ್ಸಾನ್ ಇವಿ ಕಾರು ಜಿಪ್‌ಟ್ರಾನ್ ತಂತ್ರಜ್ಞಾನ ಪ್ರೇರಿತ 95kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಹೊಂದಿದ್ದು, 30kWh ಲಿಥೀಯಂ ಅಯಾನ್ ಬ್ಯಾಟರಿ ಮೂಲಕ ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ನೆಕ್ಸಾನ್ ಇವಿ ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.24 ಲಕ್ಷದಿಂದ ಮತ್ತು ಟಾಪ್ ಎಂಡ್ ಮಾದರಿಯು ರೂ. 16.65 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದರಲ್ಲಿ ಕಪ್ಪು ಬಣ್ಣದ ಆಯ್ಕೆ ಹೊಂದಿರುವ ಡಾರ್ಕ್ ಎಡಿಷನ್ ಮಾದರಿಯು ರೂ. 15.99 ಲಕ್ಷ ಬೆಲೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಟಾಟಾ ಟಿಗೋರ್ ಇವಿ (Tata Tigor EV)

ನೆಕ್ಸಾನ್ ಇವಿ ನಂತರ ಗೂಗಲ್ ಸರ್ಚ್‌ನಲ್ಲಿ ಎರಡನೇ ಅತಿ ಹೆಚ್ಚು ಹುಡುಕಾಟ ನಡೆಸಲಾದ ಇವಿ ಕಾರುಗಳಲ್ಲಿ ಟಿಗೋರ್ ಇವಿ ಮುಂಚೂಣಿಯಲ್ಲಿದೆ. ಟಿಗೋರ್ ಇವಿ ಮಾದರಿಯ ಮಾಹಿತಿಗಾಗಿ ಸುಮಾರು 74 ಸಾವಿರ ಗೂಗಲ್ ಬಳಕೆದಾರರು ಸರ್ಚ್ ಮಾಡಿದ್ದು, ಟಿಗೋರ್ ಇವಿ ಮಾದರಿಯು ನೆಕ್ಸಾನ್ ಇವಿ ಮಾದರಿಯಲ್ಲೇ ಅತ್ಯುತ್ತಮ ಮೈಲೇಜ್, ಪರ್ಫಾಮೆನ್ಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

55kW ಎಲೆಕ್ಟ್ರಿಕ್ ಮೋಟಾರ್‌ ಮತ್ತು 26kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯು ಕಾರಿನ ಕಾರ್ಯಕ್ಷಮತೆ ಹೆಚ್ಚಳದೊಂದಿಗೆ ಮೈಲೇಜ್‌ನಲ್ಲೂ ಸಾಕಷ್ಟು ಸುಧಾರಣೆಗೊಂಡಿದ್ದು, ಹೊಸ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 306 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 13.14 ಲಕ್ಷ ಬೆಲೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಎಂಜಿ ಜೆಡ್ಎಸ್ ಇವಿ (MG ZS EV)

ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಟ ನಡೆಸಲಾದ ಇವಿ ಕಾರುಗಳ ಪೈಕಿ ಎಂಜಿ ನಿರ್ಮಾಣದ ಜೆಡ್ಎಸ್ ಇವಿ ಮೂರನೇ ಸ್ಥಾನದಲ್ಲಿದ್ದು, ಜೆಡ್ಎಸ್ ಇವಿ ಮಾದರಿಗಾಗಿ 60 ಸಾವಿರ ಗೂಗಲ್ ಬಳಕೆದಾರರು ಸರ್ಚ್ ಮಾಡಿದ್ದಾರೆ. ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯಲ್ಲಿ ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 44.5 kWh ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು ಸುಧಾರಿತ ಬ್ಯಾಟರಿ ಪ್ಯಾಕ್ ಜೋಡಣೆಯ ನಂತರ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ ಈ ಹಿಂದಿನ ಮಾದರಿಯಲ್ಲಿನ 340 ಕಿಮೀ ನಿಂದ 419 ಕಿಮೀ ಗೆ ಏರಿಕೆಯಾಗಿದ್ದು, ಎಕ್ಸೈಟ್ ಮಾದರಿಯು ರೂ. 20,99,800 ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24,68,000 ಬೆಲೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಆಡಿ ಇ-ಟ್ರಾನ್ (Audi e-tron)

ಆಡಿ ಇಂಡಿಯಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಹೊಸ ಕಾರು 2021ರಲ್ಲಿನ ಗೂಗಲ್ ಬಳಕೆದಾರರ ಸರ್ಚ್ ಲಿಸ್ಟ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ಹುಡುಕಾಟ ಮಾಡಲಾದ ಕಾರು ಮಾದರಿಯಾಗಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಇ-ಟ್ರಾನ್ ಎಲೆಕ್ಟ್ರಿಕ್ ಐಷಾರಾಮಿ ಎಸ್‌‌ಯುವಿಯ ಮಾಹಿತಿಗಳಿಗೆ ಸಂಬಂಧಿಸಿದಂತೆ ಸುಮಾರು 27,100 ಗೂಗಲ್ ಬಳಕೆದಾರರು ಮಾಹಿತಿ ಹುಡುಕಾಟ ನಡೆಸಿದ್ದು, ಹೊಸ ಪ್ರಮುಖ ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಇ-ಟ್ರಾನ್ 50 ಮಾದರಿಗೆ ರೂ.99.99 ಲಕ್ಷ, ಇ-ಟ್ರಾನ್ 55 ಮಾದರಿಗೆ ರೂ. 1.16 ಕೋಟಿ ಮತ್ತು ಇ-ಟ್ರಾನ 55 ಸ್ಪೋರ್ಟ್‌ಬ್ಯಾಕ್ ಮಾದರಿಗೆ ರೂ. 1.17 ಕೋಟಿ ಬೆಲೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 380 ಕಿ.ಮೀ ಮೈಲೇಜ್ ವೈಶಿಷ್ಟ್ಯತೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಜಾಗ್ವಾರ್ ಐ-ಪೇಸ್ (Jaguar I-Pace)

ಹೊಸ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಇದೀಗ ಭಾರತದಲ್ಲೂ ಬಿಡುಗಡೆಗೊಂಡಿದ್ದು, ಹೊಸ ಕಾರು ಎಸ್, ಎಸ್ಇ ಮತ್ತು ಹೆಚ್ಎಸ್ಇ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಲಭ್ಯವಿರುತ್ತದೆ. 90kWh ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ 470 ಕಿ.ಮೀ ಮೈಲೇಜ್ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಕಾರಿನ ಮಾಹಿತಿಗಾಗಿ ಗೂಗಲ್‌ನಲ್ಲಿ ಸುಮಾರು 25 ಸಾವಿರ ಬಳಕೆದಾದರರು ಮಾಹಿತಿ ಹುಡುಕಾಟ ನಡೆಸಿದ್ದಾರೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಹೊಸ ಐ-ಪೇಸ್ ಕಾರು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.06 ಕೋಟಿಯಿಂದ ಟಾಪ್ ಎಂಡ್ ಮಾದರಿಯು ರೂ. 1.12 ಕೋಟಿ ಬೆಲೆ ಪಡೆದುಕೊಂಡಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಹ್ಯುಂಡೈ ಕೊನಾ ಎಲೆಕ್ಟ್ರಿಕ್ (Hyundai kona Electric)

ಗೂಗಲ್‌ ಬಳಕೆದಾರರ ಸರ್ಚ್ ಲಿಸ್ಟ್‌ನಲ್ಲಿ ಆರನೇ ಸ್ಥಾನದಲ್ಲಿರುವ ಹ್ಯುಂಡೈ ಕೊನಾ ಇವಿ ಕಾರಿನ ಮಾಹಿತಿಗಾಗಿ ಸುಮಾರು 22,200 ಬಳಕೆದಾರರು ಮಾಹಿತಿ ಹುಡುಕಾಟ ನಡೆಸಿದ್ದು, ಕೊನಾ ಇವಿ ಕಾರು ಮಧ್ಯಮ ಕ್ರಮಾಂಕದಲ್ಲಿರುವ ಅತ್ಯುತ್ತಮ ಇವಿ ಮಾದರಿಯಾಗಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ರೂ.24 ಲಕ್ಷ ಬೆಲೆ ಅಂತರದಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಮತ್ತು ಅತಿ ಹೆಚ್ಚು ಮೈಲೇಜ್ ನೀಡುವ ಬ್ಯಾಟರಿ ಆಯ್ಕೆ ಹೊಂದಿರುವ ಕೊನಾ ಇವಿ ಕಾರು ಪ್ರತಿ ಚಾರ್ಜ್‌ಗೆ 452 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಮಹೀಂದ್ರಾ ಇ-ವೆರಿಟೋ (Mahindra e-Verito)

ಇ-ವೆರಿಟೋ ಮಾದರಿಯು ಸದ್ಯ ಫ್ಲಿಟ್ ಬಳಕೆದಾರರಿಗಾಗಿ ಹೆಚ್ಚು ಬೇಡಿಕೆ ಹೊಂದಿರುವ ಇವಿ ಕಾರು ಮಾದರಿಯಾಗಿದ್ದು, 2021ರ ಗೂಗಲ್ ಸರ್ಚ್ ಲಿಸ್ಟ್‌ನಲ್ಲಿ 8,100 ಬಳಕೆದಾರರು ಇ-ವೆರಿಟೋ ಮಾಹಿತಿ ಹುಡುಕಾಟ ನಡೆಸಿದ್ದಾರೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಮರ್ಸಿಡಿಸ್ ಬೆಂಝ್ ಇಕ್ಯೂಸಿ (Mercedes-Benz EQC)

ಗೂಗಲ್‌ ಬಳಕೆದಾರರ ಸರ್ಚ್ ಲಿಸ್ಟ್‌ನಲ್ಲಿ ಎಂಟನೇ ಸ್ಥಾನದಲ್ಲಿರುವ ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರಿನ ಮಾಹಿತಿಗಾಗಿ ಸುಮಾರು 5,400 ಬಳಕೆದಾರರು ಮಾಹಿತಿ ಹುಡುಕಾಟ ನಡೆಸಿದ್ದು, ಐಷಾರಾಮಿ ಕಾರು ಮಾದರಿಯಾಗಿರುವ ಇಕ್ಯೂಸಿ ಆವೃತ್ತಿಯು 80kW ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ 450 ರಿಂದ 471 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಮರ್ಸಿಡಿಸ್ ಬೆಂಝ್ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿ ಗುರುತಿಸಿಕೊಂಡಿರುವ ಇಕ್ಯೂಸಿ ಆವೃತ್ತಿಯ ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.04 ಕೋಟಿ ಬೆಲೆ ಹೊಂದಿದೆ.

ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಹುಡುಕಾಡಿದ ಎಲೆಕ್ಟ್ರಿಕ್ ಕಾರುಗಳಿವು!

ಇನ್ನು ಗೂಗಲ್ ಸರ್ಚ್ ಲಿಸ್ಟ್‌ನ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮಹೀಂದ್ರಾ ನಿರ್ಮಾಣದ ಇ20 ಪ್ಲಸ್(2,400) ಮತ್ತು ಮಹೀಂದ್ರಾ ರೆವಾ(90) ಬಳಕೆದಾರರಿಂದ ಮಾಹಿತಿ ಹುಡುಕಾಟ ನಡೆದಿದ್ದು, ಇ20 ಪ್ಲಸ್ ಮತ್ತು ರೆವಾ ಹೊಸ ಕಾರುಗಳು ಮಾರಾಟದಿಂದ ಸ್ಥಗಿತಗೊಂಡಿದ್ದರೂ ಕೂಡಾ ಗ್ರಾಹಕರು ಸೆಕೆಂಡ್ ಹ್ಯಾಂಡ್ ಮಾದರಿಗಳಿಗಾಗಿ ಗೂಗಲ್‌ನಲ್ಲಿ ಮಾಹಿತಿ ಹುಡುಕಾಟ ನಡೆಸಿದ್ದಾರೆ.

Most Read Articles

Kannada
English summary
Top most searched ev cars on google in india in 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X