ಕಾರ್ ಸಬ್‌ಸ್ಕ್ರೈಬ್ ಆರಂಭಿಸಲು ಸಿದ್ದವಾದ ವೊಲ್ವೊ ಇಂಡಿಯಾ
ಕೋವಿಡ್ ಪರಿಣಾಮ ಇಳಿಕೆಯಾಗಿರುವ ಮಾರಾಟ ಮಾರಾಟವನ್ನು ಸುಧಾರಿಸಲು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿವೆ.

ಆಟೋ ಕಂಪನಿಗಳಿಗೆ ಕೋವಿಡ್‌ನಿಂದಾಗುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ವೊಲ್ವೊ ಇಂಡಿಯಾ ಕಂಪನಿಯು ಕೂಡಾ ತನ್ನ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಆಸಕ್ತ ಗ್ರಾಹಕರಿಗೆ ಸಬ್‌ಸ್ಕ್ರೈಬ್ ಆಯ್ಕೆ ಪರಿಚಯಿಸುತ್ತಿದೆ.

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಖರೀದಿ ಯೋಜನೆಯಲ್ಲಿರುವ ಗ್ರಾಹಕರು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಗ್ರಾಹಕರು ಹೊಸ ಕಾರು ಮಾದರಿಯನ್ನು ಪ್ರತಿ ತಿಂಗಳು ನಿರ್ದಿಷ್ಠ ಲೀಸ್ ದರದ ಆಧಾರ ಮೇಲೆ 12, 24, 36 ತಿಂಗಳ ಅವಧಿಗೆ ಮಾಲೀಕತ್ವ ಪಡೆದುಕೊಳ್ಳಬಹುದಾಗಿದ್ದು, ಕಾರುಗಳು ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳ ಲೀಸ್ ದರ ಅನ್ವಯವಾಗುತ್ತದೆ.

ಲೀಸ್ ಪಡೆದ ಕಾರುಗಳ ಚಂದಾ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿರುವ ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12 ರಿಂದ 24, 36 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

ಲೀಸ್‌ಗೆ ಪಡೆದ ಕಾರುಗಳು ವಾರ್ಷಿಕವಾಗಿ ನಿಗದಿಪಡಿಸಿದ ಕಿ.ಮೀಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಗೆ ಇಂತಿಷ್ಟು ಹೆಚ್ಚುವರಿ ಪಾವತಿ ಮಾಡಬೇಕಿದ್ದು, ತುರ್ತು ಸಂದರ್ಭಗಳಲ್ಲಿ ರೋಡ್ ಅಸಿಸ್ಟ್ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ಚಂದಾದಾರಿಕೆಯ ನಂತರ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿದ್ದು, ಯುರೋಪ್ ಮತ್ತು ಅಮೆರಿಕದಲ್ಲಿ ಹೆಚ್ಚು ಜನಪ್ರಿಯತೆಯಲ್ಲಿರುವ ಕಾರ್ ಸಬ್‌ಸ್ಕ್ರೈಬ್ ಆಯ್ಕೆಗಳು ಇದೀಗ ದೇಶಿಯ ಮಾರುಕಟ್ಟೆಯಲ್ಲೂ ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿವೆ.


Click it and Unblock the Notifications








