ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದರಿಂದ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಕರ್ನಾಟಕದಲ್ಲೂ ಸಹ ಇವಿ ವಾಹನ ನೋಂದಣಿ ಪ್ರಮಾಣದ ಕಳೆದ ತಿಂಗಳಿನಿಂದ ಸಾಕಷ್ಟು ಏರಿಕೆಯಾಗಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಕಳೆದ ಕೆಲ ತಿಂಗಳ ಹಿಂದೆ ಒಟ್ಟಾರೆ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ.1ರಿಂದ ಶೇ.2 ರಷ್ಟಿದ್ದ ಇವಿ ವಾಹನಗಳ ನೋಂದಣಿ ಪ್ರಮಾಣ ಇದೀಗ ಶೇ.4ಕ್ಕೆ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳು ಇನ್ನು ಹೆಚ್ಚಿನ ಮಟ್ಟದಲ್ಲಿ ರಸ್ತೆಗಿಳಿಯುತ್ತಿವೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಬರೋಬ್ಬರಿ ಒಂದು ಸಾವಿರ ಹೊಸ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಇಂಧನ ಸಚಿವ ವಿ ಸುನಿಲ್‌ ಕುಮಾರ್‌ ಭರವಸೆ ನೀಡಿದ್ದಾರೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಮೈಸೂರು ತಾಲೂಕಿನ ಕಡಕೊಳದಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸೆಸ್ಕ್‌) ವತಿಯಿಂದ ಆಯೋಜಿಸಿದ್ದ ವಿದ್ಯುತ್‌ ಚಾಲಿತ ವಾಹನಗಳ ಮತ್ತು ಅದರ ಚಾರ್ಜಿಂಗ್‌ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದ ಸಚಿವ ವಿ ಸುನಿಲ್‌ ಕುಮಾರ್‌ ಅವರು, ಮುಂದಿನ ತಿಂಗಳಾಂತ್ಯಕ್ಕೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ, ಪ್ರವಾಸಿ ತಾಣಗಳು, ಹೆದ್ದಾರಿ ಮತ್ತು ಸರಕಾರಿ ಕಚೇರಿ ಆವರಣದಲ್ಲಿ ಕನಿಷ್ಠ ಒಂದು ಸಾವಿರ ವಿದ್ಯುತ್‌ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದರು.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ದೇಶಾದ್ಯಂತ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ವಾಯು, ಶಬ್ದ ಮಾಲಿನ್ಯ ಕಡಿಮೆ ಮಾಡಿ ಕಾರ್ಬನ್‌ ಹೊರಸೂಸುವಿಕೆ ತಗ್ಗಿಸಲು ಸಹಕಾರಿಯಾಗುತ್ತಿದ್ದು, ಇ-ವಾಹನ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಜೊತಗೆ ಇವಿ ವಾಹನಗಳಿಗೆ ಅಗತ್ಯ ವಿದ್ಯುತ್ ಪೂರೈಕೆಗಾಗಿ ಎಲ್ಲಾ ಸಿದ್ದತೆ ಮಾಡಿಕೊಂಡಿರುವುದಾಗಿ ಹೇಳಿದ ಸಚಿವರು ನವೀಕರಿಸಬಹುದಾದ ಇಂಧನ ನೀತಿ 5 ವರ್ಷಗಳಿಗೆ ಘೋಷಣೆ ಆಗಿದ್ದು, ಈ ಮೂಲಕ 30 ಸಾವಿರ ಮೆಗಾವ್ಯಾಟ್​ ವಿದ್ಯುತ್ ಉತ್ಪಾದ‌ನೆ ಗುರಿ ಹೊಂದಲಾಗಿದೆ ಎಂದರು. ಹೀಗಾಗಿ ಸಾಧ್ಯತೆ ಇರುವ ಕಡೆಗಳಲ್ಲಿ ಎಲ್ಲರೂ ವಿದ್ಯುತ್ ಚಾಲಿತ ವಾಹನ ಬಳಸಬೇಕು ಎಂದು ಕರೆ ನೀಡಿದ ಸಚಿವ ಸುನಿಲ್ ಅವರು ಪ್ರತಿಯೊಬ್ಬ ಗ್ರಾಹಕರಿಗೂ ಖರೀದಿಗೆ ಸಾಧ್ಯವಾಗುವಂತೆ ಕಂಪನಿಗಳು ಕೈಗೆಟುವ ವಾಹನಗಳನ್ನು ಬಿಡುಗಡೆ ಮಾಡುವ ಅವಶ್ಯಕತೆಯಿದೆ ಎಂದರು.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಇವಿ ವಾಹನ ಮಾರಾಟವು ಕಳೆದ ಕೆಲ ತಿಂಗಳಿನಿಂದ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ರಾಜ್ಯ ಸಾರಿಗೆ ಇಲಾಖೆಯಲ್ಲಿ ಮೊದಲ ಬಾರಿಗೆ ಇವಿ ವಾಹನಗಳ ನೋಂದಣಿ ಪ್ರಮಾಣ 1 ಲಕ್ಷ ಮಾದರಿಗಳ ಗುರಿತಲುಪಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಇವಿ ವಾಹನಗಳ ನೋಂದಣಿ ಮೊದಲ ಸ್ಥಾನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 10 ಲಕ್ಷ ಇವಿ ವಾಹನಗಳು ನೋಂದಣಿಯಾಗಿವೆ ಎನ್ನಲಾಗಿದ್ದು, ಸಾಮಾನ್ಯ ವಾಹನಗಳ ನೋಂದಣಿ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ ಪ್ರಮಾಣ ಎನ್ನಬಹುದು. ಹೀಗಾಗಿ ಇವಿ ವಾಹನಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಇವಿ ವಾಹನಗಳ ಹೆಚ್ಚಳಕ್ಕೆ ಮುಖ್ಯವಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸಲಾಗುತ್ತಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಇಂಧನ ಚಾಲಿತ ವಾಹನಗಳ ಬಳಕೆ ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಇವಿ ವಾಹನ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆಯನ್ನು ಆರಂಭಿಸುತ್ತಿವೆ.

ಜೂನ್ ಅಂತ್ಯಕ್ಕೆ ರಾಜ್ಯಾದ್ಯಂತ 1 ಸಾವಿರ ಇವಿ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಗೆ ಸಿದ್ದವಾದ ರಾಜ್ಯ ಸರ್ಕಾರ

ಕೇಂದ್ರ ವಿದ್ಯುತ್ ಸಚಿವಾಲಯದ ಪ್ರಕಾರ ದೇಶದ ಪ್ರಮುಖ ಒಂಬತ್ತು ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯು ಕಳೆದ ನಾಲ್ಕು ತಿಂಲ್ಲಿಗಳ 2.5 ಪಟ್ಟು ಹೆಚ್ಚಾಗಿದೆ ಎಂದಿದೆ.

Most Read Articles

Kannada
English summary
1000 ev charging stations to be installed in karnataka by end of june says minister sunil kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X