ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಬಲೆನೊ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಹೊಸ ಮಾದರಿಯು ಪರಿಷ್ಕೃತ ಸ್ಟೈಲಿಂಗ್, ಗಮನಾರ್ಹವಾಗಿ ಪರಿಷ್ಕೃತ ಒಳಾಂಗಣ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

2022ರ ಮಾರುತಿ ಬಲೆನೊ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೊರೂಂ ಪ್ರಕಾರ ರೂ.6.35 ಲಕ್ಷಗಳಾಗಿದೆ. ಹೊಸ 2022ರ ಮಾರುತಿ ಬಲೆನೊ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಹೊಸ ಕಾರಿಗೆ ಮಾರುತಿ ಸುಜುಕಿ ಕಂಪನಿಯು ಕೇವಲ 44 ದಿನಗಳಲ್ಲಿ 50,000 ಬುಕ್ಕಿಂಗ್‌ಗಳನ್ನು ದಾಖಲಿಸಿದೆ. ಹೆಚ್ಚುತ್ತಿರುವ ಬುಕ್ಕಿಂಗ್‌ಗಳೊಂದಿಗೆ,ಹೊಸ ಬಲೆನೊ ಪ್ರಸ್ತುತ 3-4 ತಿಂಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮಾರುತಿ ಸುಜುಕಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಈ 2022ರ ಮಾರುತಿ ಬಲೆನೊ ಕಾರಿನಲ್ಲಿ ಲೀಟರ್ 4-ಸಿಲಿಂಡರ್ ಡ್ಯುಯಲ್ ಜೆಟ್ ಯುನಿಟ್ ಒಂದೇ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಲಾಗಿದೆ. ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಮತ್ತು ಎಎಂಟಿ ಸೇರಿವೆ. ಈ ಕಾರು 22.95 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಹೊಸ ಮಾರುತಿ ಬಲೆನೊ ಫೇಸ್‌ಲಿಫ್ಟ್ ಮಾದರಿಯ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗೊಂಡಿದ್ದು, ನೆಕ್ಸಾವೆವ್ ಹನಿಕೊಂಬ್ ಗ್ರಿಲ್, ಫ್ಲಾಟರ್ ಕ್ಲಾಮ್‌ಶೆಲ್ ಬಾನೆಟ್ ಮತ್ತು ಪರಿಷ್ಕೃತ ಮುಂಭಾಗದ ಬಂಪರ್ ಜೊತೆಗೆ ದೊಡ್ಡ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಹೊಂದಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

2022ರ ಮಾರುತಿ ಬಲೆನೊ ಕಾರಿನಲ್ಲಿ ಸೈಡ್ ಪ್ರೊಫೈಲ್ ಹಿಂದಿನ ಮಾದರಿಯಂತೆಯೇ ಕಂಡರೂ ಕ್ರೋಮ್ ಸ್ಟ್ರಿಪ್ ಅನ್ನು ಹೊರತುಪಡಿಸಿ ಈಗ ಕೆಳಗಿನ ವಿಂಡೋ ಲೈನ್‌ನಿಂದ ಹಿಂದಿನ ಕ್ವಾರ್ಟರ್ ಗ್ಲಾಸ್‌ಗೆ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಹಿಂಭಾಗದಲ್ಲಿ ಹೊಸ ಬಲೆನೊ ಹೊಸ ಟೈಲ್‌ಗೇಟ್ ವಿನ್ಯಾಸ, ಹೊಸ ಸಿ-ಆಕಾರದ ಎಲ್‌ಇಡಿ ಟೈಲ್-ಲೈಟ್‌ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್ ಅನ್ನು ಹೊಂದಿದೆ. ಇನ್ನು ಈ ಬಲೆನೊ ಕಾರು ಪರ್ಲ್ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯುಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಎನ್ನುವ ಆರು ಬಣ್ಣಗಳ ಆಯ್ಕೆಯನ್ನು ಒಳಗೊಂಡಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಹೊಸ ವೈಶಿಷ್ಟ್ಯತೆಗಳಲ್ಲಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯೊಂದಿಗೆ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹಿಂದಿನ ಮಾದರಿಗಳಿಂತೆ ಎಸಿ ವೆಂಟ್‌ಗಳು, ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್‌, ಹೆಡ್ ಅಪ್ ಡಿಸ್ಪ್ಲೇ (ಹೆಚ್‌ಯುಡಿ) ಅನ್ನು ಒಳಗೊಂಡಿದೆ,

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯು ಈ ಬಾರಿ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ, ಟಾಪ್ ರೂಪಾಂತರದಲ್ಲಿ ಒಟ್ಟು 6 ಏರ್‌ಬ್ಯಾಗ್‌ಗಳ ಜೊತೆಗೆ ಹಲವು ಸುರಕ್ಷತಾ ಫೀಚರ್ಸ್ ಗಳೊಂದಿಗೆ ನವೀಕರಿಸಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಇದರೊಂದಿಗೆ ಹೆಚ್ಚುವರಿ ಏರ್‌ಬ್ಯಾಗ್ ಸೌಲಭ್ಯದ ಜೊತೆಗೆ ಹೊಸ ಬಲೆನೊದಲ್ಲಿ ಹೊಸ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಎಬಿಎಸ್, ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಇಎಸ್‌ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಲಿದ್ದು, ಸುಜುಕಿ ಕಾರ್ ಕನೆಕ್ಟ್ ತಂತ್ರಜ್ಞಾನದಲ್ಲೂ ಸಹ ಸುಧಾರಿತ ವೈಶಿಷ್ಟ್ಯತೆಗಳನ್ನು ನೀಡಿದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯ ಹೊಸ ಸುಜುಕಿ ಕನೆಕ್ಟ್ ಟೆಕ್ನಾಲಜಿ ಮೂಲಕ 40ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಸ್ಮಾರ್ಟ್‌ಫೋನ್ ಮೂಲಕವೇ ನಿರ್ವಹಣೆ ಮಾಡಬಹುದಾಗಿದ್ದು, ಅಮೆಜಾನ್ ಅಲೆಕ್ಸಾ ವಾಯ್ಸ್ ಕಮಾಂಡ್ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದು.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಜೊತೆಗೆ ತುರ್ತುಸೇವೆಗಳಿಗಾಗಿ ಸುಧಾರಿತ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಒಳಗೊಂಡಿರಲಿದ್ದು, ಸುಜುಕಿ ಕಾರ್ ಕನೆಕ್ಟ್ ಫೀಚರ್ಸ್‍ಗಳನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಮೂಲಕ ಇಂಧನ ಲಭ್ಯತೆ, ಸಾಗಬಹುದಾದ ದೂರ, ಓಡೋಮೀಟರ್, ಕಾರ್ ಡಯಾಗ್ನೋಸಿಸ್, ಒಳಗೊಂಡಂತೆ ವಿವಿಧ ಮಾಹಿತಿಗಳ ಸಂಪೂರ್ಣ ಡೇಟಾ ಪಡೆದುಕೊಳ್ಳಬಹುದು. ಇನ್ನು ಕನೆಕ್ಟೆಡ್ ಕಾರ್ ಟೆಕ್ ವೈಶಿಷ್ಟ್ಯದ ಜೊತೆಗೆ ಮಾರುತಿ ಕಂಪನಿಯು ಹೊಸ ಬಲೆನೊದಲ್ಲಿ 9-ಇಂಚಿನ ಡಿಜಿಟಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಈ ವಿಭಾಗದ ಮೊದಲ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ನೆಕ್ಸಾ ಮಾದರಿಗಳು ಸಿಎನ್‌ಜಿ ಆವೃತ್ತಿಗಳಾಗಿ ನವೀಕರಿಸಲಾಗುತ್ತಿದೆ. ಬಲೆನೊ ತಂತ್ರಜ್ಞಾನವನ್ನು ಪಡೆಯುವ ಸಾಲಿನಲ್ಲಿ ಮೊದಲನೆಯದು ಎಂದು ನಿರೀಕ್ಷಿಸಲಾಗಿದೆ. ಫ್ಯಾಕ್ಟರಿ ಫಿಟೆಡ್ ಸಿಎನ್‌ಜಿ ಅನ್ನು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಪರಿಚಯಿಸಲಾಗುವುದು. ಈ ಸಿಎನ್‌ಜಿ ರೂಪಾಂತರದಲ್ಲಿ ಕಾರ್ಯಕ್ಷಮತೆಯ ಅಂಕಿಅಂಶಗಳು ಕಡಿಮೆಯಾಗುವುದನ್ನು ನಾವು ನಿರೀಕ್ಷಿಸಬಹುದು ಮತ್ತು ಐದು-ಸ್ಪೀಡ್ ಮ್ಯಾನ್ಯುವಲ್ ಆಗಿರುವ ಏಕೈಕ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇದನ್ನು ಆಯ್ದ ಟ್ರಿಮ್‌ಗಳಲ್ಲಿ ಮಾರಾಟ ಮಾಡಬಹುದು.

ಕಡಿಮೆ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ಮಾರುತಿ ಬಲೆನೊ

ಇನ್ನು ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್ ಮಾದರಿಯ 2022ರ ಆವೃತ್ತಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದೆ. ಈ ಹೊಸ ಬಲೆನೊ ಪ್ರೀಮಿಯಂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಹೋಂಡಾ ಜಾಝ್, ಫೋಕ್ಸ್‌ವ್ಯಾಗನ್ ಪೊಲೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Wednesday, March 23, 2022, 10:46 [IST]
English summary
2022 maruti baleno clocks 50k bookings within 2 months details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+