ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಹೊಸ 2022 ಮಾರುತಿ ಸುಜುಕಿ ಬ್ರೆಝಾ ಅಧಿಕೃತವಾಗಿ ಬಿಡುಗಡೆಯಾದ ಕೇವಲ ಎರಡೇ ತಿಂಗಳೊಳಗೆ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಸಬ್-ಕಾಂಪ್ಯಾಕ್ಟ್ SUV ಪ್ರಸ್ತುತ ರೂ. 7.99 ಲಕ್ಷದಿಂದ ರೂ. 13.96 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆ ಹೊಂದಿದೆ.

Recommended Video

New Maruti Alto K10 KANNADA Review | What’s New On The Affordable Hatchback? Mileage & Comfort

ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ ಈ ವರ್ಷದ ಜೂನ್‌ನಲ್ಲಿ ಈ ಹೊಸ-ಜೆನರೇಷನ್ ಬ್ರೆಝಾವನ್ನು ಬಿಡುಗಡೆ ಮಾಡಿತು. ಅದರ ಬುಕಿಂಗ್ ಜೂನ್ 20 ರಂದು ಪ್ರಾರಂಭವಾಯಿತು, ಆದರೆ ಅದರ ಅಧಿಕೃತ ಬೆಲೆಗಳನ್ನು ಜೂನ್ 30 ರಂದು ಘೋಷಿಸಲಾಯಿತು.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಹೊಸ ತಲೆಮಾರಿನ ಬ್ರೆಝಾ ಮೊದಲ ದಿನದಂದೇ 4,400 ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಅಲ್ಲದೇ ಅದರ ಅಧಿಕೃತ ಬಿಡುಗಡೆಗೂ ಮುಂಚೆಯಿಂದಲೇ ಎಂಟು ದಿನಗಳಲ್ಲಿ ಬರೋಬ್ಬರಿ 45,000 ಕ್ಕೂ ಹೆಚ್ಚು ಮುಂಗಡ ಬುಕಿಂಗ್‌ಗಳನ್ನು ಪಡೆದುಕೊಂಡಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ಈ ಹೊಸ ಮಾದರಿಗೆ ಯಾವ ಮಟ್ಟಿಗೆ ಗ್ರಾಹಕರಲ್ಲಿ ಕ್ರೇಜ್ ಇದೆ ಎಂಬುದನ್ನು ತಿಳಿದುಕೊಳ್ಳಬಹುದು.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಹೊಸ ಮಾರುತಿ ಸುಜುಕಿ ಬ್ರೆಝಾವು ವೇರಿಂಟ್ ಮತ್ತು ಗ್ರಾಹಕರ ಸ್ಥಳವನ್ನು ಅವಲಂಭಿಸಿ ಐದು ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇದು ಪ್ರಮುಖ ಕಾಸ್ಮೆಟಿಕ್ ಕೂಲಂಕುಷ ಪರೀಕ್ಷೆ, ಹೊಸ ಹೈಟೆಕ್ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಪವರ್‌ಟ್ರೇನ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಮಾರುತಿ ಸುಜುಕಿಯು ಈ ಹೊಸ 2022ರ ಮಾದರಿಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಬದಲಾವಣೆಗಳೊಂದಿಗೆ ಬಿಡುಗಡೆಗೊಳಿಸಿದೆ. ಈ ಹೊಸ ಎಸ್‍ಯುವಿ ಮಾದರಿಯು ಎಲ್ಎಕ್ಸ್‌ಐ, ವಿಎಕ್ಸ್ಐ, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ವೆಂಟ್‌ಗಳನ್ನು ಹೊಂದಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿ ಮಾದರಿಯು ಈ ಬಾರಿ ಸಾಕಷ್ಟು ನವೀಕೃತ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಒಂದೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಕಂಪನಿಯು 2022ರ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಯಲ್ಲಿ ನೀಡಲಾಗಿರುವ ಅದೇ 1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

1.5 ಲೀಟರ್ ಕೆ15ಸಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್‌ನಲ್ಲಿ ಕಂಪನಿಯು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಕಾರು ಚಾಲನೆ ಆರಂಭಕ್ಕೂ ಮುನ್ನ ಎಂಜಿನ್ ಆರಂಭಕ್ಕೆ ಪವರ್ ಪೂರೈಕೆ ಮೂಲಕ ಇಂಧನ ವ್ಯರ್ಥವಾಗುವುದನ್ನು ತಡೆದು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಮಾರುತಿ ಸುಜುಕಿಯು ತನ್ನ ಹೊಸ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಗಳನ್ನು ತೆಗೆದುಹಾಕಿದ ನಂತರ ಡೀಸೆಲ್ ಕಾರುಗಳಲ್ಲಿದ್ದ ಮೈಲೇಜ್ ಪ್ರಮಾಣವನ್ನು ಪೆಟ್ರೋಲ್ ಮಾದರಿಗಳಲ್ಲೂ ಕಾಯ್ದುಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಆರಂಭಿಸಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಈ ಹೊಸ ಬ್ರೆಝಾ ಕಾರಿನಲ್ಲಿ ಕಂಪನಿಯು ಈ ಹಿಂದಿನ ಟಾರ್ಕ್ ಕನ್ವರ್ಟಕ್ ಗೇರ್‌ಬಾಕ್ಸ್ ಬದಲಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದೆ. ಈ ಹೊಸ ಎಂಜಿನ್ ಮೂಲಕ ಕಾರು 104.6 ಬಿಎಚ್‌ಪಿ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಇಂಧನ ದಕ್ಷತೆ ಕಾಯ್ದುಕೊಂಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಇನ್ನು ಕಂಪನಿಯ ಮಾಹಿತಿ ಪ್ರಕಾರ ಹೊಸ ಬ್ರೆಝಾ ಕಾರಿನ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 19.80 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ ಗರಿಷ್ಠ 20.15 ಕಿ.ಮೀ ಮೈಲೇಜ್ ಒದಗಿಸುತ್ತದೆ. ಈ ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಈ ಹಿಂದಿನ ವಿಟಾರಾ ಬ್ರೆಝಾ ಬ್ಯಾಡ್ಜ್ ಬದಲಾಗಿ ಕಂಪನಿಯು ಇದೀಗ ಕೇವಲ ಬ್ರೆಝಾ ಬ್ಯಾಡ್ಜ್ ಮಾತ್ರ ಬಳಕೆ ಮಾಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಈ ಹೊಸ ಎಸ್‍ಯುವಿ ಹಿಂದಿನ ಮಾದರಿಗಿಂತ 45 ಎಂಎಂ ಹೆಚ್ಚುವರಿ ಎತ್ತರವನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಎಸ್‍ಯುವಿ ಈ ಹಿಂದಿನಂತೆ 3,995 ಎಂಎಂ ಉದ್ದಳತೆ, 1,790 ಎಂಎಂ ಅಗಲ, 2,500 ವ್ಹೀಲ್‌ಬೆಸ್ ಹೊಂದಿದ್ದು, ಹೊಸ ಕಾರಿನ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಹೊಸ-ಪೀಳಿಗೆಯ ಬ್ರೆಝಾವು 9.0-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಮತ್ತು ಸಂಪರ್ಕಿತ ತಂತ್ರಜ್ಞಾನವನ್ನು ಪಡೆಯುತ್ತದೆ. SUV ಯ ಇತರ ಕೆಲವು ಹೈಟೆಕ್ ವೈಶಿಷ್ಟ್ಯಗಳೆಂದರೆ ಎಲೆಕ್ಟ್ರಿಕ್ ಸನ್‌ರೂಫ್, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ (HUD), ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ESP, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವನ್ನು ಒಳಗೊಂಡಿದೆ.

ಹೆಚ್ಚಾಗುತ್ತಲೇ ಇದೆ 2022 ಮಾರುತಿ ಬ್ರೆಝಾ ಕ್ರೇಜ್: ಕೇವಲ ಎರಡೇ ತಿಂಗಳಲ್ಲಿ ದಾಖಲೆಯ ಬುಕಿಂಗ್ಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಯಾಗಿದ್ದ ಬ್ರೆಝಾ ಕಾರು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಾರಾಟ ದಾಖಲೆ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಇದುವರೆಗೆ ಹಲವಾರು ಬದಲಾವಣೆಗಳೊಂದಿಗೆ ಸ್ಥಿರ ಮಾರುಕಟ್ಟೆ ಕಾಯ್ದುಕೊಂಡಿದೆ. ಇದೀಗ ಹೊಸ 2022 ಮಾರುತಿ ಸುಜುಕಿ ಬ್ರೆಝಾ ಮಾರುಕಟ್ಟೆಯಲ್ಲಿ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್‌ನಂತಹ ಪ್ರತಿಸ್ಪರ್ಧಿಗಳಿಗೆ ಯಾವ ಮಟ್ಟಿಗೆ ಪೈಪೋಟಿ ನೀಡಲಿದೆ ಕಾದುನೋಡಬೇಕಿದೆ.

Most Read Articles

Kannada
English summary
2022 Maruti Brezza craze continues to rise Record bookings in just two months
Story first published: Monday, August 29, 2022, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X