Just In
- 11 hrs ago
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- 12 hrs ago
ಮ್ಯೂಸಿಕಲ್ ಸ್ಕೂಟರ್ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ
- 13 hrs ago
ಕೋಟಿ ಬೆಲೆಯ ಮರ್ಸಿಡಿಸ್ ಜಿಎಲ್ಎಸ್ ಎಸ್‍ಯುವಿ ಖರೀದಿಸಿದ ನಟ ವರುಣ್ ಧವನ್
- 15 hrs ago
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
Don't Miss!
- News
Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾದ 2022ರ ಮಾರುತಿ ಬ್ರೆಝಾ
ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕ ಭಾರತೀಯ ಮಾರುಕಟ್ಟೆಯಲ್ಲಿ 2016ರ ಆರಂಭದಿಂದಲೂ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಸದ್ಯ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮರಾಟವಾಗುವ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ.

2016ರ ಆರಂಭದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಪ್ರಬಲ್ಯವನ್ನು ಸಾಧಿಸುತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಸೋಲಿಸುವ ಮೂಲಕ ವಿಟಾರಾ ಬ್ರೆಝಾ ನಿಜವಾಗಿಯೂ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಇದೀಗ ದೇಶದ ಅತಿದೊಡ್ಡ ಕಾರು ತಯಾರಕರು ತನ್ನ ಬ್ರೆಝಾವನ್ನು ನವೀಕರಿಸಿದೆ. ಇತ್ತೀಚೆಗೆ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಹೊಸ ಮಾರುತಿ ಬ್ರೆಝಾ ಎಸ್‍ಯುವಿಯು ಜೂನ್ 30 ರಂದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯು ಡೀಲರ್ ಬಳಿ ಕಾಣಿಸಿಕೊಂಡ ಸ್ಪೈ ಚಿತ್ರಗಳು ಇತ್ತೀಚೆಗೆ ಬಹಿರಂಗವಾಗಿವೆ. ಈ ಸ್ಪೈ ಚಿತ್ರಗಳಲ್ಲಿ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತವೆ. ಮುಂಬರುವ ಹೊಸ 2022ರ ಮಾರುತಿ ಸುಜುಕಿ ಬ್ರೆಝಾದ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ ಮತ್ತು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಒಳಭಾಗವನ್ನು ಸಹ ಹೊಂದಿದೆ ಎಂದು ಬಹಿರಂಗಪಡಿಸುತ್ತದೆ.

ಈ ಎಸ್‍ಯುವಿಯ ಒಳಭಾಗದಲ್ಲಿನ ಅತ್ಯಂತ ಗಮನಾರ್ಹ ಬದಲಾವಣೆಗಳೆಂದರೆ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಹೊಸ ಸ್ಪೋರ್ಟಿಯರ್ ಸ್ಟೀರಿಂಗ್ ವೀಲ್ ಮತ್ತು ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್‌ನೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿದೆ.

ಒಳಭಾಗದಲ್ಲಿರುವ ಇತರ ಬದಲಾವಣೆಗಳು ಫ್ಯಾನ್ ವೇಗ ಮತ್ತು ಕ್ಲೈಮೆಂಟ್ ಕಂಟ್ರೋಲ್ ದೊಡ್ಡ ಬಟನ್‌ಗಳು ಮತ್ತು ಹೆಡ್ಸ್-ಅಪ್ ಡಿಸ್ಪ್ಲೇ (HUD), ಮತ್ತು ಹಿಂಭಾಗದ AC ವೆಂಟ್ ಗಳ ವೈಶಿಷ್ಟ್ಯಗಳನ್ನು ಹೊಂದಿವೆ.

ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಮುಂಬರುವ ಹೊಸ 2022ರ ಬ್ರೆಝಾವು ನವೀಕರಿಸಿದ ಹೊಸ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿರುವಂತೆಯೇ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರರ್ಥ ಹೊಸ 2022ರ ಬ್ರೆಝಾ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಸಂಪರ್ಕಿತ ಕಾರ್ ಟೆಕ್, Apple CarPlay ಮತ್ತು Android Auto ಸಂಪರ್ಕದೊಂದಿಗೆ ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಎಬಿಎಸ್, ಇಬಿಡಿ, 6 ಏರ್‌ಬ್ಯಾಗ್‌ಗಳು ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರಲಿದೆ.

ಮುಂಬರುವ ಈ ಹೊಸ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಟಾಪ್-ಎಂಡ್ ರೂಪಾಂತರಗಳಲ್ಲಿ ಸನ್‌ರೂಫ್ ಅನ್ನು ಹೊಂದಿರುತ್ತದೆ ಎಂದು ಡೀಲರ್‌ಶಿಪ್ ಯಾರ್ಡ್‌ನ ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತವೆ.

ಕಾಂಪ್ಯಾಕ್ಟ್ ಎಸ್‍ಯುವಿ ಬ್ರೆಝಾ ಹೆಸರಿನಿಂದ ಹೋಗುವುದರಿಂದ ವಿಟಾರಾ ಹೆಸರನ್ನು ಕೈಬಿಡುವ ನಿರೀಕ್ಷೆಯಿದೆ ಮತ್ತು ಇದು ಫೇಸ್‌ಲಿಫ್ಟೆಡ್ ಎರ್ಟಿಗಾ ಮತ್ತು XL6 ಮಾದರಿಗಳಲ್ಲಿರುವ 1.5-ಲೀಟರ್ ನಾಲ್ಕು-ಸಿಲಿಂಡರ್ K15C ಪೆಟ್ರೋಲ್ ಮೈಲ್ಡ್-ಹೈಬ್ರಿಡ್ ಎಂಜಿನ್ ಹೊಂದಿರಲಿದೆ.

ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 136.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ 6-ಸ್ಪೀಡ್ ಎಟಿ ಯೊಂದಿಗೆ ಜೋಡಿಯಾಗಲಿದೆ.

ಆಟೋಮ್ಯಾಟಿಕ್ ರೂಪಾಂತರವು ಪ್ಯಾಡಲ್ ಶಿಫ್ಟಿಂಗ್ ಕಾರ್ಯವನ್ನು ಪಡೆಯುತ್ತದೆ ಮತ್ತು ಆಯ್ದ ಟ್ರಿಮ್‌ಗಳಲ್ಲಿ ಸಿಎನ್‌ಜಿ ರೂಪಾಂತರದ ಚೊಚ್ಚಲ ಪ್ರವೇಶದೊಂದಿಗೆ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಬಹುದು. ಮುಂಬರುವ ಬ್ರೆಝಾವು ಹೊಸ ಕ್ರೋಮ್ ಫ್ರಂಟ್ ಗ್ರಿಲ್‌ನ ಉಪಸ್ಥಿತಿಯೊಂದಿಗೆ ಸಂಪೂರ್ಣವಾಗಿ ಪರಿಷ್ಕೃತ ಮುಂಭಾಗದ ಫಾಸಿಕ ಒಳಪಟ್ಟಿರುತ್ತದೆ ಮತ್ತು ಹೆಡ್‌ಲ್ಯಾಂಪ್‌ಗಳನ್ನು ಟ್ವಿನ್-ಪಾಡ್ ಕ್ಲಸ್ಟರ್ ಮತ್ತು ಎಲ್ಇಡಿ ಲೈಟಿಂಗ್‌ನೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತದೆ.

ಈ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ಗಟ್ಟಿಮುಟ್ಟಾದ ಬೂದು ರೂಫ್ ರೈಲ್ ಗಳೊಂದಿಗೆ ನೀವು ಸಮಗ್ರ ಸ್ಪಾಯ್ಲರ್ ಅನ್ನು ಸಹ ನೋಡಬಹುದು. ನೇರವಾದ ಸುಜುಕಿ ಬ್ಯಾಡ್ಜ್ ಸಮತಲವಾದ ಕಪ್ಪು ಪ್ಯಾನೆಲ್‌ನಲ್ಲಿ ತಾಜಾ ವೈಬ್ ಅನ್ನು ತರುತ್ತದೆ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು ಹೊಂದಿರಲಿವೆ.

ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಪರಿಷ್ಕರಿಸಲಾಗುತ್ತದೆ. ಏಕೆಂದರೆ ಹಿಂದಿನದು ಹೊಸ ಫಾಗ್ ಲ್ಯಾಂಪ್ ಹೌಸಿಂಗ್‌ಗಳು ಮತ್ತು ಪ್ರಮುಖ ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ. ಹೊಸ ಸ್ಕಿಡ್ ಪ್ಲೇಟ್ ಅನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ ಮತ್ತು ಹಿಂಭಾಗದ ಬಂಪರ್ ಸಣ್ಣ ಹೊಂದಾಣಿಕೆಗಳನ್ನು ಹೊಂದಿರುತ್ತದೆ.

ಈ ಮಾರುತಿ ಬ್ರೆಝಾ ಎಸ್‍ಯುವಿ ಸೈಡ್ ಪ್ರೊಫೈಲ್ ಹೊರಹೋಗುವ ಮಾದರಿಯಂತೆಯೇ ಉಳಿದಿದೆ ಎತ್ತರದ ಪಿಲ್ಲರ್‌ಗಳು, ದಪ್ಪ ಕಪ್ಪು ಬಾಡಿ ಕ್ಲಾಡಿಂಗ್, ಬಾಡಿ ಬಣ್ಣದ ಡೋರ್ ಹ್ಯಾಂಡಲ್‌ಗಳು, ಕಪ್ಪು ಫಿನಿಶ್ಡ್ ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮೀರರ್ಸ್ ಮತ್ತು ಆಯತಾಕಾರದ ವ್ಹೀಲ್ ಅರ್ಚರ್ ಗಳನ್ನು ಹೊಂದಿರಲಿವೆ.

ಹೊಸ ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ಸುರಕ್ಷತೆಗಾಗಿ, ಹೆಚ್ಚಿನ ಏರ್‌ಬ್ಯಾಗ್‌ಗಳನ್ನು (ಪ್ರಸ್ತುತ ಮಾದರಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುವುದರಿಂದ) ನೀಡಬಹುದು. ಬ್ರೆಝಾವನ್ನು ಸುಜುಕಿ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಬಹುದು. ಇದು ನಾಲ್ಕು ಸ್ಟಾರ್‌ಗಳ ಪ್ರಸ್ತುತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಸುರಕ್ಷತಾ ರೇಟಿಂಗ್ ಅನ್ನು ಇನ್ನಷ್ಟು ಸುಧಾರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಬ್ರೆಝಾವನ್ನು 2016ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಯಶ್ವಸಿಯನ್ನು ಪಡೆದುಕೊಂಡಿದೆ. ಈ ಬ್ರೆಝಾದ ಮುಂಬರುವ ನವೀಕರಿಸಿದ ಮಾದರಿಯು ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಕಂಪನಿಗೆ ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಲು ಮತ್ತು ಸುಧಾರಿಸಲು ನಾವು ನಿರೀಕ್ಷಿಸುತ್ತೇವೆ. 2022ರ ಮಾರುತಿ ಬ್ರೆಝಾ.ಸನ್‌ರೂಫ್ ಸೇರಿದಂತೆ ಹಲವು ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬರಲಿದೆ.