ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ದೇಶದ ಅತಿ ದೊಡ್ಡ ಮತ್ತು ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಎಲ್ಲಾ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಮಾರುತಿ ಸಿಯಾಜ್ ಮಿಡ್ ಸೈಜ್ ಸೆಡಾನ್ ಮಾದರಿ ಕೂಡ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಸಿಯಾಜ್ ಮಿಡ್ ಸೈಜ್ ಸೆಡಾನ್‌ಗಾಗಿ ನಾಲ್ಕು ಹೊಸ ಬಣ್ಣಗಳ ಆಯ್ಕೆಯನ್ನು ಸೇರಿಸಿದೆ. ಕುತೂಹಲಕಾರಿಯಾಗಿ, ಮುಂಬರುವ ಬಲೆನೊ ಫೇಸ್‌ಲಿಫ್ಟ್‌ನಲ್ಲಿ ಕಂಡುಬರುವ ಅದೇ ಬಣ್ಣಗಳ ಆಯ್ಕೆಗೆ ಹೋಲುತ್ತದೆ. ಇದೀಗ ಮಾರುತಿ ಸಿಯಾಜ್ ಮಾದರಿಯು ಸೆಲೆಸ್ಟಿಯಲ್ ಬ್ಲೂ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್ ಮತ್ತು ಗ್ರ್ಯಾಂಡ್ಯೂರ್ ಗ್ರೇ: ಪ್ರೈಮ್ ಡಿಗ್ನಿಟಿ ಬ್ರೌನ್, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ದೇಶದ ಅತಿದೊಡ್ಡ ಕಾರು ತಯಾರಕರು ಸಿಯಾಜ್ ಕಾರಿನ ನೆಕ್ಸಾ ಬ್ಲೂ, ಸಾಂಗ್ರಿಯಾ ರೆಡ್ ಮತ್ತು ಮ್ಯಾಗ್ಮಾ ಗ್ರೇ ಬಣ್ಣಗಳ ಆಯ್ಕೆಗಳನ್ನು ಸ್ಥಗಿತಗೊಳಿಸಿದ್ದಾರೆ. ಪ್ರಸ್ತುತ ಮಾರುತಿ ಸಿಯಾಜ್ ಕಾರಿನ ಬೆಲೆಯು ಎಕ್ಸ್ ಶೋ ರೂಂ ಪ್ರಕಾರ ರೂ.8.87 ಲಕ್ಷಗಳಾಗಿದೆ. ಹೊಸ ಬಣ್ಣಗಳ ಆಯ್ಕೆಯನ್ನು ಹೊರತಾಗಿ ಉಳಿದಂತೆ ಯಾವುದೇ ಬದಲಾವಣೆಗಳನ್ನು

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಈ ಮಾರುತಿ ಸಿಯಾಜ್ ಕಾರಿನಲ್ಲಿ ಮುಂಭಾಗದ ಗ್ರಿಲ್, ನಯವಾದ ಬಂಪರ್ ಮತ್ತು ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಪಡೆದುಕೊಂಡಿತು. ಹಲವಾರು ಕ್ರೋಮ್ ಅಲಂಕಾರಗಳೂ ಇವೆ, ಮತ್ತು ಸ್ಟೀರಿಂಗ್ ವೀಲ್, ಒಳಗಿನ ಡೋರ್ ಹ್ಯಾಂಡಲ್‌ಗಳು, ಎಸಿ ಲೌವ್ರೆಸ್ ನಾಬ್ ಮತ್ತು ಪಾರ್ಕಿಂಗ್ ಬ್ರೇಕ್ ಲಿವರ್ ನಂತಹ ಸೆಡಾನ್ ಸುತ್ತಲೂ ಕಾಣಬಹುದು.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಸಿಯಾಜ್ ಕಾರಿನ ಒಳಭಾಗದಲ್ಲಿ, ಸಿಯಾಜ್ 4.2 ಇಂಚಿನ ಟಿಎಫ್‌ಟಿ ಮಲ್ಟಿ-ಇನ್ಫರ್ಮೇಷನ್ ಡಿಸ್‌ಪ್ಲೇ (ಎಂಐಡಿ) ಯೊಂದಿಗೆ ಬರುತ್ತದೆ. ಪ್ರಯಾಣಿಕರಿಗೆ ಸ್ಟ್ಯಾಂಡರ್ಡ್ ಆಗಿ ಹಿಂಭಾಗದ ಎಸಿ ವೆಂಟ್‌ಗಳಿವೆ. ಮುಂದಿನ ಸೀಟುಗಳು ಮತ್ತು ಹಿಂಭಾಗದ ಸೀಟುಗಳು ಸೆಂಟರ್ ಆರ್ಮ್‌ರೆಸ್ಟ್ ಅನ್ನು ಕೂಡ ಪಡೆಯುತ್ತವೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಮುಂಭಾಗದ ಸೀಟಿನ ಆರ್ಮ್‌ರೆಸ್ಟ್ ಅದರ ಅಡಿಯಲ್ಲಿ ಸ್ಟ್ರೋರೇಂಜ್ ಸ್ಪೇಸ್ ಹೊಂದಿದ್ದರೆ ಹಿಂಭಾಗದ ಸೀಟಿನ ಆರ್ಮ್‌ರೆಸ್ಟ್ ಕಪ್ ಹೋಲ್ಡರ್‌ಗಳನ್ನು ಪಡೆಯುತ್ತದೆ .ಸಿಯಾಜ್ ಅನ್ನು ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಒಆರ್‌ವಿಎಮ್‌ಗಳು ಮತ್ತು ಇತರ ಫೀಚರ್‌ಗಳನ್ನು ಕೂಡ ಒಳಗೊಂಡಿವೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಇನ್ನು ಈ ಮಾರುತಿ ಸಿಯಾಜ್ ಕಾರಿನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ, ಸಿಯಾಜ್ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಡ್ರೈವರ್ ಮತ್ತು ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ಫೀಚರ್ಸ್ ಅನ್ನು ನೀಡಲಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಈ ಮಾರುತಿ ಸುಜುಕಿ ಸಿಯಾಜ್ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 103 ಬಿಎಚ್‌ಪಿ ಪವರ್ ಮತ್ತು 138 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ನಾಲ್ಕು-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಮಾರುತಿ ಸುಜುಕಿ ಇಂಡಿಯಾ 2022ರ ಜನವರಿ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ಇನ್ನು 2021ರ ಜನವರಿ ತಿಂಗಳಿನಲ್ಲಿ 160,752 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದರು. ಇಂಡೋ-ಜಪಾನೀಸ್ ಕಾರು ತಯಾರಕರು ವರ್ಷದಿಂದ ವರ್ಷಕ್ಕೆ ಸುಮಾರು ಶೇ.4 ರಷ್ಟು ಕುಸಿತವನ್ನು ಕಂಡಿದ್ದಾರೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಇನ್ನು ಮಾರುತಿ ಸುಜುಕಿ ಕಂಪನಿಯು 2021ರ ಡಿಸೆಂಬರ್ ತಿಂಗಳಿನಲ್ಲಿ 153,149 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ. ಇದನ್ನು ಮಾರಾಟದಲ್ಲಿನ ತಿಂಗಳ-ತಿಂಗಳ ವ್ಯತ್ಯಾಸವು ಸಮತಟ್ಟಾಗಿದೆ. ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ವಾಹನಗಳ ಉತ್ಪಾದನೆಯ ಮೇಲೆ ಸಣ್ಣ ಪರಿಣಾಮ ಬೀರಿತು. ಮುಖ್ಯವಾಗಿ ದೇಶೀಯ ಮಾರುಕಟ್ಟೆಯ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾರುತಿ ಸುಜುಕಿ ಹೇಳಿದೆ. ಇದರಿಂದ ಮಾರುತಿ ಸುಜುಕಿ ಕಾರುಗಳ ದೀರ್ಘಾವಧಿಯ ಕಾಯುವಿಕೆ ಅವಧಿಯು ಗ್ರಾಹಕರ ಭಾವನೆಗಳನ್ನು ತಡೆಯುತ್ತಿದೆ ಎಂಬ ಅಂಶವನ್ನು ನಾವು ಪರಿಗಣಿಸಬೇಕು.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಹೆಚ್ಚುವರಿಯಾಗಿ, ಕಂಪನಿಯು ಟಾಟಾ ಮೋಟಾರ್ಸ್‌ನಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ, 2022ರಲ್ಲಿ ಟಾಟಾ 51 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ತನ್ನ ಅತ್ಯಧಿಕ ಪ್ರಯಾಣಿಕ ವಾಹನ ಮಾರಾಟವನ್ನು ದಾಖಲಿಸಿದೆ. ದೇಶೀಯ ಮಾರಾಟಕ್ಕೆ ಸಂಬಂಧಿಸಿದಂತೆ, ಕಳೆದ ತಿಂಗಳು ಮಾರುತಿ ಸುಜುಕಿ ಇಂಡಿಯಾದ ಒಟ್ಟು ಪ್ರಯಾಣಿಕ ವಾಹನ ಮಾರಾಟವು 128,924 ಯುನಿಟ್‌ಗಳಷ್ಟಿದೆ. 2021ರ ಜನವರಿ ತಿಂಗಳಿನಲ್ಲಿ ಮಾರಾಟವಾದ 139,002 ಯುನಿಟ್‌ಗಳಿಗೆ ಹೋಲಿಸಿದರೆ ಶೇ.7.2 ಇಳಿಕೆಯಾಗಿದೆ.

ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡ 2022ರ ಮಾರುತಿ ಸಿಯಾಜ್ ಕಾರು

ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಹಲವು ಜನಪ್ರಿಯ ಮಾದರಿಗಳು ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ, ಇದರ ಮೂಲಕ ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

Article Published On: Wednesday, February 9, 2022, 15:29 [IST]
English summary
2022 maruti suzuki ciaz midsize sedan gets new colour options in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+