ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ದೇಶದ ಜನಪ್ರಿಯ ಮತ್ತು ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇದರಲ್ಲಿ ಎರ್ಟಿಗಾ ಎಂಪಿವಿ ಮಾದರಿಯು ಕೂಡ ಒಳಗೊಂಡಿದೆ. ಈ ಮಾರುತಿ ಸುಜುಕಿ ಎರ್ಟಿಗಾ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿ ಮಾದರಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಯು ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಇನ್ನು ಈ ಹೊಸ ಎಂಪಿವಿ ಮಾದರಿಯು ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವ ಸ್ಪೈ ಚಿತ್ರಗಳು ಬಹಿರಂಗವಾಗಿದೆ. ಇದರಿಂದ ಈ ಹೊಸ ಮಾರುತಿ ಎರ್ಟಿಗಾ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಈ ಹೊಸ ಮಾರುತಿ ಎರ್ಟಿಗಾ ಎಂಪಿವಿ ಮಾದರಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೆಚ್ಚು ಹೊಂದಿಲ್ಲ. ಈ ಹೊಸ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿಯಲ್ಲಿ ಮುಂಭಾಗದ ಮತ್ತು ಹಿಂಭಾಗದ ಬಂಪರ್‌ಗಳು, ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ಅಲಾಯ್ ವ್ಹೀಲ್ ಕೂಡ ಒಂದೇ ಆಗಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಈ 2022ರ ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿಯಲ್ಲಿ ಒಳಾಂಗಣದಲ್ಲಿ ಕೆಲವು ನವೀಕರಣಗಳು ಇರಬಹುದು. ಅಪ್ಹೋಲ್ಸ್ಟರಿಗಾಗಿ ಹೊಸ ವಿನ್ಯಾಸ ಮತ್ತು ಡ್ಯಾಶ್‌ಬೋರ್ಡ್‌ಗಾಗಿ ಕೆಲವು ಹೊಸ ಅಂಶಗಳು ಇರಬಹುದು. ಎರ್ಟಿಗಾ ಫೇಸ್‌ಲಿಫ್ಟ್‌ನ ಒಳಭಾಗದ ಚಿತ್ರಗಳನ್ನು ಇನ್ನೂ ಬಹಿರಂಗವಾಗಿಲ್ಲ ಆದ್ದರಿಂದ ಇನ್ನೂ ಯಾವುದನ್ನೂ ದೃಢೀಕರಿಸಲಾಗಿಲ್ಲ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಇದರಲ್ಲಿ ಅದೇ 1.5-ಲೀಟರ್, ಕೆ-ಸೀರಿಸ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪೈರಡ್ ಟ್ರೋಲ್ ಎಂಜಿನ್ ಅನ್ನು ಮುಂದುವರಿಯುತ್ತದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಪ್ರಮುಖ ಬದಲಾವಣೆಗಳು ಗೇರ್ ಬಾಕ್ಸ್ ನಲ್ಲಿರುತ್ತದೆ. ಪ್ರಸ್ತುತ, ಮಾರುತಿ ಸುಜುಕಿ ಎರ್ಟಿಗಾ 4-ಸ್ಫೀಡ್ ಟಾರ್ಕ್ ಕರ್ನ್ವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಬಳಸುತ್ತದೆ, ಅದನ್ನು ಹೊಸ 6-ಸ್ಪೀಡ್ ಟಾರ್ಕ್ಟಾರ್ಕ್ ಕರ್ನ್ವಾಟರ್ ಯುನಿಟ್ ನೊಂದಿಗೆ ಬದಲಾಯಿಸುವ ಸಾಧ್ಯತೆಗಳಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಹೆಚ್ಚಿನ ತಯಾರಕರು ಈಗ ಭಾರತದಲ್ಲಿ 6-ಸ್ಪೀಡ್ ಅಥವಾ 7-ಸ್ಪೀಡ್ ಯುನಿಟ್ ಅನ್ನು ಬಳಸುತ್ತಿದ್ದಾರೆ. ಡ್ಯುಯಲ್-ಕ್ಲಚ್ ಯೂನಿಟ್‌ಗಳು ಮತ್ತು ಸಿವಿಟಿ ಗಳಂತಹ ಹೊಸ ರೀತಿಯ ಗೇರ್‌ಬಾಕ್ಸ್‌ಗಳು ಸಹ ಇವೆ. ಮಾರುತಿ ಸುಜುಕಿಯು ಟಾರ್ಕ್ಕರ್ನ್ವಾಟರ್ ಯುನಿಟ್ ಅನ್ನು ಆರಿಸಿಕೊಂಡಿರಬೇಕು ಏಕೆಂದರೆ ಇದು ಹಳೆಯ ರೀತಿಯ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಗಿರಬಹುದು ಆದರೆ ಇದು ಅತ್ಯಂತ ವಿಶ್ವಾಸಾರ್ಹವಾಗಿರುತ್ತದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇದಲ್ಲದೆ, ಮಾರುತಿ ಸುಜುಕಿ ಅದರ ವಿಶ್ವಾಸಾರ್ಹತೆ ಮತ್ತು ಕಡಿಮೆ ವೆಚ್ಚದ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಕೊನೆಯಲ್ಲಿ 7,00,000 ಯೂನಿಟ್‌ಗಳು ಮಾರಾಟವಾಗಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿತು.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇದರಿಂದ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಕೆಲವು ಹೊಸ ನವೀಕರಣವನ್ನು ನಡೆಸಲು ಸಜ್ಜಾಗಿದೆ. ಪ್ರಸುತ ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇದರೊಂದಿಗೆ ಈ ಎರ್ಟಿಗಾ ಎಂಪಿವಿಯೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ. ಈ ಮಾರುತಿ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್‌ಬ್ಯಾಗ್ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಬಿಎಸ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇನ್ನು ಮಾರುತಿ ಸುಜುಕಿ ಇಂಡಿಯಾ 2022ರ ಫೆಬ್ರವರಿ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಇದರ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 164,056 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 164,469 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸ್ಥಿರವಾಗಿದೆ. 2022ರ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2022ರ ಮಾರುತಿ ಎರ್ಟಿಗಾ

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 6.2 ಪ್ರತಿಶತದಷ್ಟು ತಿಂಗಳ-ಮಾಸಿಕ ಬೆಳವಣಿಗೆಯನ್ನು ಕಂಡಿದ್ದಾರೆ. ಇನ್ನು ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ಉತ್ಪಾದನೆಯ ಮೇಲೆ ಅಲ್ಪ ಪರಿಣಾಮ ಬೀರುತ್ತಿದೆ ಎಂದು ಕಾರು ತಯಾರಕರು ಹೇಳಿದರು. ದೇಶೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಕಳೆದ ತಿಂಗಳು ಭಾರತದಲ್ಲಿ ಮಾರುತಿ ಸುಜುಕಿಯ ಒಟ್ಟು ಮಾರಾಟ, ಪಿವಿ ಮತ್ತು ಎಲ್ಸಿವಿ ವಿಭಾಗದಲ್ಲಿ ಮಾರಾಟವು 137,607 ಯುನಿಟ್‌ಗಳಷ್ಟಿದೆ.

Article Published On: Saturday, March 12, 2022, 12:45 [IST]
English summary
2022 maruti suzuki ertiga mpv launch soon in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+